- Kannada News Photo gallery Himachal Pradesh Assembly Elections 2022 Updates voter turnout record Jai Ram Thakur and BJP president JP Nadda votes with family
HP Assembly Elections 2022: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ; ಇಲ್ಲಿದೆ ಮತದಾನದ ವಿವರ
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು, ಮಧ್ಯಾಹ್ನ 3 ಗಂಟೆ ವೇಳೆಗೆ ಶೇಕಡಾ 55.65ರಷ್ಟು ಮತ ಚಲಾವಣೆಯಾಗಿದೆ. 55 ಲಕ್ಷ ಮತದಾರರು 412 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತಿದ್ದಾರೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.
Updated on: Nov 12, 2022 | 5:06 PM

Himachal Pradesh Assembly Elections 2022 Updates voter turnout record Jai Ram Thakur and BJP president JP Nadda votes with family

Himachal Pradesh Assembly Elections 2022 Updates voter turnout record Jai Ram Thakur and BJP president JP Nadda votes with family

ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಗಿತ್ತು. ಆದರೆ, ಮೊದಲ ಒಂದು ಗಂಟೆ ಕೇವಲ ಶೇಕಡಾ 5ರಷ್ಟು ಮತದಾನವಾಗಿತ್ತು. 11 ಗಂಟೆ ವೇಳೆಗೆ ಮತದಾನ ಪ್ರಮಾಣ ಶೇಕಡಾ 19.98 ತಲುಪಿತು.

ಮಧ್ಯಾಹ್ನ 1 ಗಂಟೆ ವೇಳೆಗೆ ಮತದಾನ ಪ್ರಮಾಣ ಶೇಕಡಾ 37.19ರಷ್ಟಾದರೆ 3 ಗಂಟೆ ವೇಳೆಗೆ ಶೇಕಡಾ 55.65 ರಷ್ಟು ಮತದಾನವಾಯಿತು.

ಮತದಾನ ಮಾಡಿದ ಬಳಿಕ ಯುವತಿಯರಿಬ್ಬರು ವೋಟರ್ ಐಡಿ ಪ್ರದರ್ಶಿಸಿ ಸಂತಸ ವ್ಯಕ್ತಪಡಿಸುತ್ತಿರುವುದು

ಲಾಹುಲ್ ಮತ್ತು ಸ್ಪಿತಿ ಜಿಲ್ಲೆಗಳಲ್ಲಿ ಅತಿಹೆಚ್ಚು ಮತದಾನವಾಯಿತು. ಈ ಜಿಲ್ಲೆಗಳಲ್ಲಿ 3 ಗಂಟೆ ವೇಳೆಗೆ ಶೇಕಡಾ 62.75ರಷ್ಟು ಮತದಾನವಾಗಿದೆ. ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕ್ಷೇತ್ರ ಇರುವ ಮಂಡಿ ಜಿಲ್ಲೆಯಲ್ಲಿ ಶೇಕಡಾ 58.9ರಷ್ಟು ಮತದಾನವಾಗಿದೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ ಚಲಾಯಿಸುವುದಕ್ಕೂ ಮುನ್ನ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮಂಡಿ ಜಿಲ್ಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ




