- TV9 Kannada Photo gallery In kolar Baby shower for female police constables at the station itself, Senior officers who wished good luck Kannada News
ಮಹಿಳಾ ಪೊಲೀಸ್ ಪೇದೆಗಳಿಗೆ ಠಾಣೆಯಲ್ಲೇ ಸೀಮಂತ; ಬಾಗಿನ ನೀಡಿ ಶುಭ ಹಾರೈಸಿದ ಹಿರಿಯ ಅಧಿಕಾರಿಗಳು
ಕರ್ತವ್ಯ ಜಂಜಾಟದ ಮಧ್ಯೆ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಹೌದು, ಇಂದು(ಮಂಗಳವಾರ) ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳಾ ಪೊಲೀಸ್ ಪೇದೆಗಳಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇತ್ತ ಕುಟುಂಬ ಸಮೇತರಾಗಿ ಭಾಗವಹಿಸಿ ಮಹಿಳಾ ಪೊಲೀಸ್ ಪೇದೆಗಳು ಹಾಗೂ ಕುಟುಂಬಸ್ಥರು ಸಂತಸಪಟ್ಟರು
Updated on:Jul 02, 2024 | 7:37 PM

ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಹೌದು, ಇಂದು(ಮಂಗಳವಾರ) ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳಾ ಪೊಲೀಸ್ ಪೇದೆಗಳಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇನ್ನು ಮುಸ್ಲಿಂ ಧರ್ಮದವರಾದ ನೇಹಾ ಹಾಗೂ ಹಿಂದೂ ಧರ್ಮದವರಾದ ಭಾರತಿ ಎಂಬ ಮಹಿಳಾ ಪೊಲೀಸ್ ಪೇದೆಗಳಿಗೆ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿಯೇ ಸೀಮಂತ ಕಾರ್ಯಕ್ರಮ ಮಾಡಿ, ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ, ಹೃದಯವಂತಿಕೆ ಮೆರೆದಿರುವ ಘಟನೆ ನಡೆದಿದೆ.

ಕರ್ತವ್ಯ ಜಂಜಾಟದ ಮಧ್ಯೆ ಮಹಿಳಾ ಸಿಬ್ಬಂದಿಗಳ ಬಯಕೆ ಈಡೇರಿಸಿದ ಪೊಲೀಸರು, ಹಿಂದೂ ಸಂಪ್ರದಾಯದಂತೆ ಭಾರತಿ ಹಾಗೂ ನೇಹಾಗೆ ಸೀಮಂತ ಮಾಡಿದರು.

ನೇಹಾ ಹಾಗೂ ದಂಪತಿಗಳು, ಪೋಷಕರನ್ನ ಕರೆಸಿ ಸೀಮಂತ ಮಾಡಿ ಕೋಲಾರ ಪೊಲೀಸ್ ಠಾಣೆ ಮಾದರಿಯಾಗಿದೆ. ಇತ್ತ ಕುಟುಂಬ ಸಮೇತರಾಗಿ ಭಾಗವಹಿಸಿ ಮಹಿಳಾ ಪೊಲೀಸ್ ಪೇದೆಗಳು ಹಾಗೂ ಕುಟುಂಬಸ್ಥರು ಸಂತಸಪಟ್ಟರು.

ಇನ್ನು ಈ ಕಾರ್ಯಕ್ರಮದಲ್ಲಿ ಅದ್ದೂರಿ ಶಾಮಿಯಾನ ಹಾಕಿಸಿ, ಬಂದ ಅತಿಥಿಗಳಿಗೆ ಪೊಲೀಸ್ ಅಧಿಕಾರಿಗಳು ಸೇರಿಕೊಂಡು ಭರ್ಜರಿ ಬಾಳೆಲೆ ಊಟ ಹಾಕಿಸಿದ್ದಾರೆ.

ಸೀಮಂತ ಕಾರ್ಯಕ್ರಮದಲ್ಲಿ ಕೋಲಾರ ಡಿವೈಎಸ್‌ಪಿ ನಾಗ್ತೇ ಹಾಗೂ ಸಿಪಿಐಗಳಾದ ಶಂಕರಾಚಾರಿ, ಸದಾನಂದ ಭಾಗಿಯಾಗಿ ಜೊತೆಗೆ ಹಿರಿಯ ಅಧಿಕಾರಿಗಳು ಸೇರಿ ಇಬ್ಬರು ಪೇದೆಗಳಿಗೆ ಭಾಗಿನ ನೀಡಿ ಶುಭ ಹಾರೈಸಿದರು.
Published On - 6:40 pm, Tue, 2 July 24

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.
Read More



