Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಅರಣ್ಯ ಸಂರಕ್ಷಣೆಗೆ ಶ್ವಾನ ಬಲ: ನಾಯಿಗಳಿಗೆ ಶುರುವಾಯ್ತು ತರಬೇತಿ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇಶದ ಮೊದಲ ಟ್ರ್ಯಾಕರ್ ನಾಯಿ ತರಬೇತಿ ಕೇಂದ್ರ ಆರಂಭವಾಗಿದೆ. ಕಳ್ಳಬೇಟೆ, ಮರಗಳ್ಳತನ ಮುಂತಾದ ಅರಣ್ಯ ಅಪರಾಧಗಳನ್ನು ತಡೆಯಲು 10 ಬೆಲ್ಜಿಯಂ ಮಾಲಿನಾಯ್ಸ್ ತಳಿಯ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ನಾಯಿಗಳು ಅಪರಾಧಗಳನ್ನು ಪತ್ತೆಹಚ್ಚಲು ಹೆಚ್ಚು ಸಹಾಯಕವಾಗಲಿವೆ ಮತ್ತು 10 ತಿಂಗಳ ತರಬೇತಿ ಬಳಿಕ ರಾಜ್ಯದ ವಿವಿಧ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲಿವೆ.

ಸೂರಜ್ ಪ್ರಸಾದ್ ಎಸ್.ಎನ್
| Updated By: ವಿವೇಕ ಬಿರಾದಾರ

Updated on: Feb 18, 2025 | 10:09 AM

ಬಂಡೀಪುರ ಅರಣ್ಯ ರಾಜ್ಯದಲ್ಲೇ ಅತಿ ಹೆಚ್ಚು ಹುಲಿ ಹಾಗೂ ಆನೆಗಳಿರುವ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ, ಇಲ್ಲಿ ದೇಶದಲ್ಲೇ ಮೊದಲ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರ ಆರಂಭಗೊಂಡಿದೆ. ಅಷ್ಟಕ್ಕೂ ನಾಯಿಗಳಿಗೇಕೆ ತರಬೇತಿ ನೀಡಲಾಗುತ್ತಿದೆ? ಇಲ್ಲಿದೆ ವಿವರ

1 / 6
ಅರಣ್ಯಗಳಲ್ಲಿ ಕಳ್ಳರಬೇಟೆ, ಮರಗಳ್ಳತನ, ದಂತಕ್ಕಾಗಿ ಆನೆಗಳ ಬೇಟೆ, ಅರಣ್ಯಸಂಪತ್ತು ಕಳ್ಳಸಾಗಾಣಿಕೆ ಮತ್ತಿತರ ಅಪರಾಧ ಕೃತ್ಯಗಳನ್ನು‌ ತಡೆಗಟ್ಟಲು ಹಾಗೂ ಇಂತಹ ಅಪರಾಧ ಕೃತ್ಯ ಮಾಡಿದವರನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ತನ್ನದೇ ಆದ ಶ್ವಾನದಳ ಹೊಂದಲು ಮುಂದಾಗಿದೆ. ಇದಕ್ಕಾಗಿ ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇಶದಲ್ಲೇ ಮೊದಲ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರ ಆರಂಭಿಸಲಾಗಿದೆ.

2 / 6
ಸದ್ಯ, 10 ಬೆಲ್ಜಿಯಂ ಮಾಲಿನಾಯ್ಸ್ ತಳಿಯ ಶ್ವಾನಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಈ ತಳಿಯ ನಾಯಿಗಳು ಮಾದಕವಸ್ತು, ಬಾಂಬ್, ಅನಿಲ ಸೋರಿಕೆ ಸೇರಿದಂತೆ ಯಾವುದೇ ಅಪರಾಧ ಕೃತ್ಯಗಳನ್ನು ಪತ್ತೆ ಮಾಡುವಲ್ಲಿ ಪರಿಣಿತಿ ಹೊಂದಿವೆ. ಹೀಗಾಗಿ ಈ ತಳಿಯ ನಾಯಿಗಳನ್ನು ತಂದು ಅರಣ್ಯ ಅಪರಾಧಗಳನ್ನು ತಡೆಗಟ್ಟುವ ಹಾಗೂ ಭೇದಿಸುವ ಬಗ್ಗೆ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ. ಈ ಶ್ವಾನಗಳ ಪಾಲನೆ ಪೋಷಣೆಗೆ ಒಂದು ಶ್ವಾನಕ್ಕೆ ಇಬ್ಬರು ಹ್ಯಾಂಡ್ಲರ್‌ಗಳಂತೆ 20 ಸಿಬ್ಬಂದಿಯನ್ನು ‌ನಿಯೋಜಿಸಲಾಗಿದ್ದು ಅವರಿಗೂ ಸಹ ತರಬೇತಿ ನೀಡಲಾಗುತ್ತಿದೆ.

3 / 6
ಹುಲಿ, ಚಿರತೆ, ಕಾಡಮ್ಮೆ ಸೇರಿದಂತೆ ಅಳಿವಿನ ಅಂಚಿನಲ್ಲಿರುವ ‌ಪ್ರಾಣಿಗಳ ಮೂಳೆ, ಚರ್ಮ, ಉಗುರು, ಆನೆ ದಂತ, ವನ್ಯಪ್ರಾಣಿಗಳ ಆವಯವ ಪತ್ತೆ ಹಚ್ಚುವುದು, ಶ್ರೀಗಂಧ, ರಕ್ತಚಂದನ ಮತ್ತಿತರ ಅರಣ್ಯಸಂಪತ್ತು ಪತ್ತೆ ಹಚ್ಚುವುದರ ಬಗ್ಗೆ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ.

4 / 6
10 ತಿಂಗಳ ಕಾಲ ತರಬೇತಿ ನೀಡಿದ ಬಳಿಕ ಈ ಶ್ವಾನಗಳನ್ನು ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹಾಗೂ ಭೇದಿಸಲು ಬಂಡೀಪುರ, ನಾಗರಹೊಳೆ, ಕಾಳಿ, ಭದ್ರಾ ಹಾಗು ಬಿಆರ್‌ಟಿ ಹುಲಿ ಸಂರಕ್ಷಿತ ‌ಪ್ರದೇಶಗಳಗೆ ತಲಾ ಎರಡು ಶ್ವಾನಗಳಂತೆ ನಿಯೋಜಿಸಲು ಉದ್ದೇಶಿಸಲಾಗಿದೆ.

5 / 6
ನಿಪುಣತೆ ಹಾಗೂ ಚಾಕಚಕ್ಯತೆಗೆ ಹೆಸರಾಗಿರುವ ಬೆಲ್ಜಿಯಂ ಮಾಲಿನಾಯ್ಸ್ ತಳಿಯ ಶ್ವಾನಗಳು ಕೆಲವೇ ತಿಂಗಳಲ್ಲಿ ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿವೆ‌. ಇದರೊಂದಿಗೆ ಅರಣ್ಯ ಸಂರಕ್ಷಣೆಯಲ್ಲಿ ಶ್ವಾನಗಳ ಪಾತ್ರ ಕೂಡ ಇರಲಿದೆ.

6 / 6
Follow us