- Kannada News Photo gallery Actress Jacqueliene Fernandez Did beach cleaning on World Environment Day
ಸಮುದ್ರ ತೀರದ ಸ್ವಚ್ಛತೆಯಲ್ಲಿ ತೊಡಗಿದ ಜಾಕ್ವೆಲಿನ್; ನಟಿಯಿಂದ ಸಾಮಾಜಿಕ ಕೆಲಸ
ಜೂನ್ 5 ವಿಶ್ವ ಪರಿಸರ ದಿನಾಚರಣೆ. ಈ ಸಂದರ್ಭದಲ್ಲಿ ಅನೇಕರು ಗಿಡಗಳನ್ನು ನೆಟ್ಟಿದ್ದಾರೆ. ಇನ್ನೂ ಕೆಲವರು ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ. ಜಾಕ್ವೆಲಿನ್ ಕೂಡ ಇದೇ ರೀತಿಯ ಕೆಲಸ ಮಾಡಿದ್ದಾರೆ. ಅವರು ಮುಂಬೈನಲ್ಲಿ ಸಮುದ್ರ ತೀರವನ್ನು ಸ್ವಚ್ಛ ಮಾಡಿದ್ದಾರೆ.
Updated on:Jun 06, 2024 | 3:40 PM

ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಆಗಾ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಅವರು ನಟನೆಯಿಂದ ಬ್ರೇಕ್ ಪಡೆದು ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದಾರೆ. ಮುಂಬೈನ ಬೀಚ್ನ ಅವರು ಸ್ವಚ್ಛ ಮಾಡಿದ್ದಾರೆ.

ಜೂನ್ 5 ವಿಶ್ವ ಪರಿಸರ ದಿನಾಚರಣೆ. ಈ ಸಂದರ್ಭದಲ್ಲಿ ಅನೇಕರು ಗಿಡಗಳನ್ನು ನೆಟ್ಟಿದ್ದಾರೆ. ಇನ್ನೂ ಕೆಲವರು ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ. ಜಾಕ್ವೆಲಿನ್ ಕೂಡ ಇದೇ ರೀತಿಯ ಕೆಲಸ ಮಾಡಿದ್ದಾರೆ.

‘ಬೀಚ್ ಪ್ಲೀಸ್ ಇಂಡಿಯಾ’ ಕಮ್ಯೂನಿಟಿಯ ಜೊತೆ ಸೇರಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ್ದಾರೆ. ಈ ಫೋಟೋನ ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿಗಳು ಈ ರೀತಿ ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡರೆ, ಒಳ್ಳೆಯ ಕೆಲಸಗಳನ್ನು ಮಾಡಿದರೆ ಜನರಿಗೆ ಹಾಗೂ ಅವರ ಅಭಿಮಾನಿಗಳಿಗೆ ಸ್ಫೂರ್ತಿ ಸಿಗುತ್ತದೆ.

ಜಾಕ್ವೆಲಿನ್ ಫರ್ನಾಂಡಿಸ್ಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇದೆ. ಸ್ವಚ್ಛತೆ ವೇಳೆ ಸಿಕ್ಕ ಶ್ವಾನವನ್ನು ಅವರು ಪ್ರೀತಿಯಿಂದ ಮಾತನಾಡಿದ್ದಾರೆ.

ಜಾಕ್ವೆಲಿನ್ ಅವರು ಶ್ರೀಲಂಕಾದವರು. ಅವರು ಭಾರತಕ್ಕೆ ಬಂದು ಬಾಲಿವುಡ್ನಲ್ಲಿ ನೆಲೆಕಂಡುಕೊಂಡಿದ್ದಾರೆ. ವಿವಾದಗಳ ಮೂಲಕವೂ ಅವರು ಸುದ್ದಿ ಆಗಿದ್ದಾರೆ.
Published On - 12:57 pm, Thu, 6 June 24




