Updated on: Jul 01, 2023 | 9:45 AM
ಚಿತ್ರರಂಗದಲ್ಲಿ ನಟಿ ಕಂಗನಾ ರಣಾವತ್ ಅವರು ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅವರು ಸದಾ ಕಿರಿಕ್ ಮಾಡಿಕೊಂಡರೂ ನಟನೆಯಲ್ಲಿ ಎಂದಿಗೂ ಅವರು ಕಳಪೆ ಪ್ರದರ್ಶನ ನೀಡಿಲ್ಲ. ಈಗ ಕಂಗನಾ ಕಲರ್ಫುಲ್ ಫೋಟೋ ಹಂಚಿಕೊಂಡಿದ್ದಾರೆ.
ಕಂಗನಾ ಸುಳ್ಳು ಹೇಳಲು ಆರಂಭಿಸಿದ್ದಾರೆ. ಗ್ಲಾಮರಸ್ ಫೋಟೋ ಹಂಚಿಕೊಂಡು ಅವರು ಸಂಭ್ರಮಿಸಿದ್ದಾರೆ. ಇದಕ್ಕೆ ಅವರು ನೀಡಿರುವ ಕ್ಯಾಪ್ಶನ್ ಎಲ್ಲರ ಕಣ್ಣು ಕುಕ್ಕಿದೆ.
ಕಂಗನಾ ಅವರು ‘ಮಣಿಕರ್ಣಿಕಾ ಫಿಲ್ಮ್ಸ್’ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಇದರ ಅಡಿಯಲ್ಲಿ ‘ಟೀಕು ವೆಡ್ಸ್ ಶೇರು’ ಸಿನಿಮಾ ಸಿದ್ಧಗೊಂಡು ರಿಲೀಸ್ ಆಗಿದೆ. ಇದು ಅವರ ನಿರ್ಮಾಣದ ಮೊದಲ ಸಿನಿಮಾ. ಆದರೆ, ಸಿನಿಮಾ ಸೋತಿದೆ.
ಕಂಗನಾ ಸೋಲನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಈ ಚಿತ್ರವನ್ನು ಅವರು ಸೂಪರ್ ಹಿಟ್ ಸಿನಿಮಾ ಎಂದು ಘೋಷಿಸಿಕೊಂಡಿದ್ದಾರೆ. ಕಂಗನಾ ಅವರ ಸುಳ್ಳು ಹೇಳುತ್ತಿರುವುದು ಅಭಿಮಾನಿಗಳಿಗೆ ಇಷ್ಟ ಆಗಿಲ್ಲ.
ಐಎಂಡಿಬಿಯಲ್ಲಿ ‘ಟೀಕು ವೆಡ್ಸ್ ಶೇರು’ ಚಿತ್ರಕ್ಕೆ 10ಕ್ಕೆ ಕೇವಲ 3.8 ರೇಟಿಂಗ್ ಸಿಕ್ಕಿದೆ. ಈ ಚಿತ್ರವನ್ನು ಎಲ್ಲರೂ ತೆಗಳುತ್ತಿದ್ದಾರೆ. ಆದರೆ, ಕಂಗನಾ ಮಾತ್ರ ಹೊಗಳುತ್ತಿದ್ದಾರೆ.
ಕಂಗನಾ ನಿರ್ಮಾಣದ ಈ ಸಿನಿಮಾ ನೋಡಿದ ಅನೇಕರು ತೆಗಳುತ್ತಿದ್ದಾರೆ. ‘ಕ್ಷಮಿಸಿ, ಈ ಚಿತ್ರ ನಿಜಕ್ಕೂ ಕೆಟ್ಟದಾಗಿದೆ’ ಎಂದು ಅನೇಕರು ಬರೆದುಕೊಂಡಿದ್ದಾರೆ.
ಕಂಗನಾ ಸದ್ಯ ‘ಎಮರ್ಜೆನ್ಸಿ’ ಹಾಗೂ ‘ಚಂದ್ರಮುಖಿ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗಳ ಬಗ್ಗೆ ನಿರೀಕ್ಷೆ ಇದೆ.