- Kannada News Photo gallery Kannada actress Nimika Ratnakar celebrating her birthday Fans wish more success
ಜನ್ಮದಿನದ ಖುಷಿಯಲ್ಲಿ ನಿಮಿಕಾ ರತ್ನಾಕರ್; ಚಂದನವನದ ಚೆಲುವೆಯ ಕೈಯಲ್ಲಿವೆ ಮಸ್ತ್ ಆಫರ್ಗಳು
Nimika Ratnakar: ನಿಮಿಕಾ ರತ್ನಾಕರ್ ಅವರು ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅಭಿನಯ, ಡ್ಯಾನ್ಸ್, ಗ್ಲಾಮರ್ ಎಲ್ಲದರಲ್ಲೂ ಅವರು ಗಮನ ಸೆಳೆಯುತ್ತಿದ್ದಾರೆ.
Updated on: Aug 01, 2023 | 8:00 AM

ಕನ್ನಡ ಚಿತ್ರರಂಗದಲ್ಲಿ ನಟಿ ನಿಮಿಕಾ ರತ್ನಾಕರ್ ಅವರು ಮಿಂಚುತ್ತಿದ್ದಾರೆ. ಇಂದು (ಆಗಸ್ಟ್ 1) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಅವರ ಅಭಿಮಾನಿಗಳು ಈ ದಿನವನ್ನು ಸಡಗರದಿಂದ ಆಚರಿಸುತ್ತಿದ್ದಾರೆ.

ಮಂಗಳೂರು ಮೂಲದ ನಿಮಿಕಾ ರತ್ನಾಕರ್ ಅವರು ಇಂಜಿನಿಯರಿಂಗ್ ಓದಿದ್ದಾರೆ. ಆದರೆ ಅವರಿಗೆ ನಟಿ ಆಗಬೇಕು ಎಂಬ ಬಯಕೆ ಮೂಡಿದ್ದರಿಂದ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ಈಗ ಅವರು ಚಂದನವನದಲ್ಲಿ ಮಿಂಚುತ್ತಿದ್ದಾರೆ.

ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವುದು ಮಾತ್ರವಲ್ಲದೇ ಸ್ಪೆಷಲ್ ಸಾಂಗ್ನಲ್ಲೂ ನರ್ತಿಸುವ ಮೂಲಕ ನಿಮಿಕಾ ರತ್ನಾಕರ್ ಅವರು ಮನೆಮಾತಾಗಿದ್ದಾರೆ. ಅವರಿಗೆ ದಿನದಿಂದ ದಿನಕ್ಕೆ ಅಭಿಮಾನಿ ಬಳಗ ಹಿರಿದಾಗುತ್ತಿದೆ.

ನಿಮಿಕಾ ರತ್ನಾಕರ್ ಅವರು ಸ್ಯಾಂಡಲ್ವುಡ್ನ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅಭಿನಯ, ಡ್ಯಾನ್ಸ್, ಗ್ಲಾಮರ್ ಎಲ್ಲದರಲ್ಲೂ ಅವರು ಗಮನ ಸೆಳೆಯುತ್ತಿದ್ದಾರೆ. ಹೊಸ ಹೊಸ ಅವಕಾಶಗಳು ಅವರಿಗೆ ಸಿಗುತ್ತಿವೆ.

ಓಂ ಪ್ರಕಾಶ್ ರಾವ್ ನಿರ್ದೇಶನದ ‘ತ್ರಿಶೂಲಂ’ ಸಿನಿಮಾದಲ್ಲಿ ‘ರಿಯಲ್ ಸ್ಟಾರ್’ ಉಪೇಂದ್ರ ಅವರಿಗೆ ಜೋಡಿಯಾಗಿ ನಿಮಿಕಾ ರತ್ನಾಕರ್ ನಟಿಸಿದ್ದಾರೆ. ಆ ಸಿನಿಮಾ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

ಕನ್ನಡ ಚಿತ್ರರಂಗದ ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಸಿನಿಮಾ ಮಾಡುವ ಚಾನ್ಸ್ ಸಿಕ್ಕಿದ್ದಕ್ಕೆ ನಿಮಿತಾ ರತ್ನಾಕರ್ ಅವರಿಗೆ ಖುಷಿ ಆಗಿದೆ. ಬರ್ತ್ಡೇ ಹೊಸ್ತಿಲಲ್ಲಿ ಹೊಸ ಪ್ರಾಜೆಕ್ಟ್ಗಳ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ಓಂ ಪ್ರಕಾಶ್ ರಾವ್ ನಿರ್ದೇಶಿಸಲಿರುವ ‘ಫೀನಿಕ್ಸ್’ ಸಿನಿಮಾದಲ್ಲೂ ನಿಮಿತಾ ರತ್ನಾಕರ್ ಅವರು ಅಭಿನಯಿಸುತ್ತಿದ್ದಾರೆ. ಇದು ಮಹಿಳಾಪ್ರಧಾನ ಕಥೆಯುಳ್ಳ ಸಿನಿಮಾ ಎಂಬುದು ಮತ್ತೊಂದು ವಿಶೇಷ.




