Ragini Dwivedi: ರಾಗಿಣಿ ದ್ವಿವೇದಿ ಯೋಗ ಫೋಟೋಸ್; ನಟಿಯ ಯೋಗಾಭ್ಯಾಸ ನೋಡಿ ವಾವ್ ಎಂದ ಫ್ಯಾನ್ಸ್
Ragini Dwivedi Yoga Photos: ರಾಗಿಣಿ ದ್ವಿವೇದಿ ಅವರು ಫಿಟ್ನೆಸ್ಗೆ ಹೆಚ್ಚು ಮಹತ್ವ ನೀಡುತ್ತಾರೆ. ಫಿಟ್ ಆಗಿರಬೇಕು ಎಂದು ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ.
Updated on: Jun 08, 2023 | 9:08 PM

ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರು ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಆಗಿದ್ದಾರೆ. ತಮ್ಮದೇ ಆದಂತಹ ಅಭಿಮಾನಿ ಬಳಗ ಹೊಂದಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಸಾಮಾನ್ಯವಾಗಿ ಎಲ್ಲ ನಟಿಯರೂ ಫಿಟ್ನೆಸ್ಗೆ ಹೆಚ್ಚು ಮಹತ್ವ ನೀಡುತ್ತಾರೆ. ಈ ವಿಚಾರದಲ್ಲಿ ರಾಗಿಣಿ ದ್ವಿವೇದಿ ಕೂಡ ಹೊರತಲ್ಲ. ಫಿಟ್ ಆಗಿರಬೇಕು ಎಂದು ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ.

ಯೋಗಾಭ್ಯಾಸದ ಮೂಲಕ ರಾಗಿಣಿ ದ್ವಿವೇದಿ ಅವರು ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಆ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲಿ ಅವರು ಅಪ್ಡೇಟ್ ನೀಡಿದ್ದಾರೆ.

ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವಲ್ಲಿ ರಾಗಿಣಿ ದ್ವಿವೇದಿ ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಈಗ ಅವರು ಹಂಚಿಕೊಂಡಿರುವ ಯೋಗಾಭ್ಯಾಸದ ವಿಡಿಯೋ ಕೂಡ ಗ್ಲಾಮರಸ್ ಆಗಿದೆ.

ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ರಾಗಿಣಿ ಅವರ ಅಪ್ಪಟ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಕೆಲವರು ನೆಗೆಟಿವ್ ಆಗಿಯೂ ಕಮೆಂಟ್ ಮಾಡಿದ್ದಾರೆ.




