Saptami Gowda: ಮಾಲ್ಡೀವ್ಸ್ಗೆ ಹಾರಿದ ಸಪ್ತಮಿ ಗೌಡ, ಇಲ್ಲಿವೆ ಚಿತ್ರಗಳು
ಕಾಂತಾರ ಸಿನಿಮಾ ಮೂಲಕ ಸ್ಟಾರ್ ಆಗಿರುವ ನಟಿ ಸಪ್ತಮಿ ಗೌಡ, ಚಿತ್ರೀಕರಣದಿಂದ ಬಿಡುವು ಪಡೆದು ಮಾಲ್ಡೀವ್ಸ್ಗೆ ಹಾರಿದ್ದು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Updated on:Mar 01, 2023 | 11:49 PM

ಕಾಂತಾರ ಸಿನಿಮಾದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಸಪ್ತಮಿ ಗೌಡ ಪಡೆದಿದ್ದು, ಹಲವು ಸಿನಿಮಾಗಳನ್ನು ಸಪ್ತಮಿ ಒಪ್ಪಿಕೊಂಡಿದ್ದಾರೆ.

ಕಾಂತಾರ ಬಳಿಕ ಹಲವು ಸಿನಿಮಾ ಅವಕಾಶಗಳು ಸಪ್ತಮಿಯನ್ನು ಅರಸಿ ಬಂದಿದ್ದು, ಹಿಂದಿ ಸಿನಿಮಾ ಒಂದರಲ್ಲಿಯೂ ಸಪ್ತಮಿ ನಟಿಸುತ್ತಿದ್ದಾರೆ. ದಿ ಕಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಿಸಿದ್ದ ವಿವೇಕ್ ನಿರ್ದೇಶನದ ಹೊಸ ಹಿಂದಿ ಸಿನಿಮಾದಲ್ಲಿ ಸಪ್ತಮಿಯವರದ್ದು ಪ್ರಮುಖ ಪಾತ್ರ.

ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ನಟಿಸಿದ್ದ ನಟಿ ಸಪ್ತಮಿ ಗೌಡ ನಟನೆಗೆ ಸಖತ್ ಪ್ರಶಂಸೆ ವ್ಯಕ್ತವಾಗಿತ್ತು. ಈ ಹಿಂದೆ ಸಪ್ತಮಿ ನಟಿಸಿದ್ದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿಯೂ ಗಮನ ಸೆಳೆದಿದ್ದರು.

ಸಿನಿಮಾ ಸೆಲೆಬ್ರಿಟಿಗಳ ಫೇವರೇಟ್ ತಾಣವಾದ ಮಾಲ್ಡೀವ್ಸ್ಗೆ ನಟಿ ಸಪ್ತಮಿ ಗೌಡ ತಮ್ಮ ಸಹೋದರಿಯೊಟ್ಟಿಗೆ ಹೋಗಿದ್ದಾರೆ. ಅಲ್ಲಿ ಬೀಚ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಕಾಂತಾರ ಸಿನಿಮಾ ಮೂಲಕ ಸ್ಟಾರ್ ಆಗಿರುವ ನಟಿ ಸಪ್ತಮಿ ಗೌಡ, ಚಿತ್ರೀಕರಣದಿಂದ ಬಿಡುವು ಪಡೆದು ಮಾಲ್ಡೀವ್ಸ್ಗೆ ಹಾರಿದ್ದು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Published On - 11:47 pm, Wed, 1 March 23

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More




