- TV9 Kannada Photo gallery Karnataka Food Department officers raid on Bengaluru Vijayanagar Food Street shops, Kannada News
ಬೆಂಗಳೂರು: ಫುಡ್ ಸ್ಟ್ರೀಟ್ ಅಂಗಡಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ
ಗೋಬಿ ಮಂಚೂರಿ ಮಂಚೂರಿಗೆ ಬಳಸುವ ಬಣ್ಣವನ್ನು ಬ್ಯಾನ್ ಮಾಡಿದ ನಂತರ, ಅಲರ್ಟ್ ಆದ ಆಹಾರ ಇಲಾಖೆ ಅಧಿಕಾರಿಗಳು ಬೆಂಗಳೂರಿನ ವಿಜಯನಗರದ ಫುಡ್ ಸ್ಟ್ರೀಟ್ನಲ್ಲಿ ವ್ಯಾಪಾರ ಮಾಡುವ ಗೋಬಿ ಅಂಗಡಿಗಳ ಮೇಲೆ ದಾಳಿ ಮಾಡಿ ಗೋಬಿ ತಯಾರಿಕೆಗೆ ಬಳಸುವ ಪದಾರ್ಥಗಳನ್ನು ಪರಿಶೀಲನೆ ನಡೆಸಿದರು.
Updated on: Aug 28, 2024 | 12:10 PM

ಗೋಬಿ ಮಂಚೂರಿ, ಕಬಾಬ್ನಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇವುಗಳಿಗೆ ಬಳಸುವ ಕೃತಕ ಬಣ್ಣವನ್ನು ಬ್ಯಾನ್ ಮಾಡಿತ್ತು. ಅಲ್ಲದೆ ಪಾನಿಪುರಿಗೆ ಬಳಸುವ ಪದಾರ್ಥಗಳಲ್ಲೂ ಕ್ಯಾನ್ಸರ್ ಕಾರಕ ಅಂಶಗಳು ಇರುವುದನ್ನು ಆಹಾರ ಇಲಾಖೆ ಪತ್ತೆ ಹಚ್ಚಿದೆ.

ಗೋಬಿ ಮಂಚೂರಿ ಮಂಚೂರಿಗೆ ಬಳಸುವ ಬಣ್ಣವನ್ನು ಬ್ಯಾನ್ ಮಾಡಿದ ನಂತರ, ಅಲರ್ಟ್ ಆದ ಆಹಾರ ಇಲಾಖೆ ಅಧಿಕಾರಿಗಳು ಬೀದಿ ಬದಿ ವ್ಯಾಪಾರ ಮಾಡುವ ಗೋಬಿ ಅಂಗಡಿಗಳ ಮೇಲೆ ದಾಳಿ ಮಾಡಿ ಗೋಬಿ ತಯಾರಿಕೆಗೆ ಬಳಸುವ ಪದಾರ್ಥಗಳನ್ನು ಪರಿಶೀಲನೆ ನಡೆಸಿದರು.

ಬೆಂಗಳೂರಿನ ವಿಜಯನರ ಸ್ಟ್ರೀಟ್ ಫುಡ್ ಬಹಳ ಪ್ರಸಿದ್ದಿ. ಈ ಸ್ರೀಟ್ ಫುಡ್ಗೆ ಪ್ರತಿನಿತ್ಯ ನೂರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಆಹಾರ ಇಲಾಖೆ ಅಧಿಕಾರಿಗಳು ಜನ ಸಾಮಾನ್ಯರಂತೆ ಮಂಗಳವಾರ ರಾತ್ರಿ ಬೆಂಗಳೂರಿನ ವಿಜಯನಗರದ ಸ್ಟ್ರೀಟ್ ಫುಡ್ ಅಂಗಡಿಗಳಿಗೆ ಭೇಟಿ ನೀಡಿದರು.

ವಿಜಯನಗರದ ಸ್ಟ್ರೀಟ್ ಫುಡ್ನಲ್ಲಿರುವ ಗೋಬಿ, ಫ್ರೈಡ್ ರೈಸ್, ದೋಸೆ, ನೂಡಲ್ಸ್ ತಯಾರು ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿದರು. ಅಧಿಕಾರಿಗಳ ಏಕಾಏಕಿ ದಾಳಿಯಿಂದ ಅಂಗಡಿ ಮಾಲಿಕರು ಕಕ್ಕಾಬಿಕ್ಕಿಯಾದರು.

ಕಳೆದ ಹಲವು ದಿನಗಳ ಹಿಂದೆ ಸ್ವಚ್ಚತೆ ಕಾಪಾಡದ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಮಂಗಳವಾರ (ಆ.27) ರಂದು ದಾಳಿ ಮಾಡಿ ಪರಿಶೀಲನೆ ನಡೆಸಿದರು.

ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಗೋಬಿ, ನೂಡಲ್ಸ್ ತಯಾರಿಕೆಗೆ ಬಳಸುವ ಸಾಸ್, ಮಸಾಲೆಗಳನ್ನು ಪರಿಶೀಲನೆ ನಡೆಸಿದರು. ಆಹಾರ ತಯಾರಿಕೆಗೆ ಬಳಸುವ ಪಾತ್ರೆಗಳನ್ನು ಪರಿಶೀಲಿಸಿದರು. ಹಾಗೆ, ಅಂಗಡಿಯಲ್ಲಿ ಮತ್ತು ಸುತ್ತಮುತ್ತ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಸ್ವಚ್ಛತೆಯನ್ನು ಕಾಪಾಡುವಂತೆ ಅಧಿಕಾರಿಗಳು ಅಂಗಡಿ ಮಾಲಿಕರಿಗೆ ಸೂಚನೆ ನೀಡಿದರು.

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.
Read More



