- Kannada News Photo gallery New Police Uniform: Karnataka Adopts Peak Cap, Bidding Farewell to Slouch Hat
ಕರ್ನಾಟಕ ಪೊಲೀಸ್ ಕ್ಯಾಪ್ ಬದಲಾವಣೆ: ಬೇರೆ ಬೇರೆ ರಾಜ್ಯದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಕ್ಯಾಪ್‌ಗಳು ಹೇಗಿವೆ?
ಕರ್ನಾಟಕದ ಕಾನ್‌ಸ್ಟೆಬಲ್ ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳ ಕ್ಯಾಪ್ ಇಂದಿನಿಂದ ಬದಲಾಗುತ್ತಿದೆ. ಈ ಹಿಂದೆ ಧರಿಸುತ್ತಿದ್ದ ಬ್ರಿಟಿಷ್ ಕಾಲದ ಸ್ಲೋಚ್ ಹ್ಯಾಟ್ ಬದಲಿಗೆ 'ಪೀಕ್ ಕ್ಯಾಪ್'ನ್ನು ನೀಡಲಾಗುವುದ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಂದ ಹೊಸ ಕ್ಯಾಪ್‌ಗಳು ವಿತರಣೆ ಆಗಲಿದೆ. ಇನ್ನು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಕ್ಯಾಪ್‌ಗಳು ಹೇಗಿದೆ? ಯಾವೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದು ಇಲ್ಲಿದೆ ನೋಡಿ.
Updated on:Oct 28, 2025 | 12:08 PM

ಕರ್ನಾಟಕದಲ್ಲಿ ಸ್ಲೋಚ್ ಹ್ಯಾಟ್ ಬದಲಿಗೆ 'ಪೀಕ್ ಕ್ಯಾಪ್' ಬರಲಿದೆ. ಹಿಂದೆ ಕರ್ನಾಟಕದ ಕಾನ್‌ಸ್ಟೆಬಲ್ ಮತ್ತು ಹೆಡ್ ಕಾನ್‌ಸ್ಟೆಬಲ್ ಸ್ಲೋಚ್ ಹ್ಯಾಟ್ ಕ್ಯಾಪ್ಗಳನ್ನು ಹಾಕುತ್ತಿದ್ದರು. ಇದೀಗ ಇದರಲ್ಲಿ ಬದಲಾವಣೆಯನ್ನು ತರಲು ಮುಂದಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಇಂದು ಈ ಹೊಸ ಕ್ಯಾಪ್‌ಗಳು ನೀಡಲಿದ್ದಾರೆ.

ಕೇರಳದಲ್ಲಿ ""ಪೀಕ್ ಕ್ಯಾಪ್"" ಧರಿಸಲಾಗುವುದು. ಇದು ನೀಲಿ ಬಣ್ಣವನ್ನು ಹೊಂದಿದ್ದು, ಇದು ಸಾರ್ವಜನಿಕ ಮನ್ನಣೆ ಮತ್ತು ಅಧಿಕಾರ ಪ್ರಜ್ಞೆಯನ್ನು ಸಂಕೇತವಾಗಿದ್ದು, ಇದು ಬಿಸಿಲು ಮತ್ತು ಮಳೆಯಿಂದ ರಕ್ಷಿಸುವ ಕೂಡ ಸಹಾಯವಾಗಿದೆ. ಚಪ್ಪಟೆಯಾದ ಮೇಲ್ಭಾಗ, ಬಾಗಿದ ಮುಖವಾಡ ಮತ್ತು ಮುಂಭಾಗದಲ್ಲಿ ಕೇರಳ ಪೊಲೀಸ್ (ಕೆಪಿ) ಲಾಂಛನವನ್ನು ಹೊಂದಿದೆ.

ಮಹಾರಾಷ್ಟ್ರ ಪೊಲೀಸ್ ಕಾನ್ಸ್ಟೇಬಲ್ ಕ್ಯಾಪ್ "ಪೀಕ್ ಕ್ಯಾಪ್" ಅಥವಾ ಸಾಂಪ್ರದಾಯಿಕ ಪೊಲೀಸ್ ಕ್ಯಾಪ್ ಎಂದು ಕರೆಯಲಾಗುತ್ತದೆ. ಇದು ಕಡು ನೀಲಿ ಬಣ್ಣದ ಟೋಪಿಯಾಗಿದ್ದು, ಚಪ್ಪಟೆಯಾದ ಮೇಲ್ಭಾಗ ಮತ್ತು ಬಾಗಿದ ವಿನ್ಯಾಸವನ್ನು ಹೊಂದಿದೆ. ಕ್ಯಾಪ್‌ನ ಮುಂಭಾಗದಲ್ಲಿ ಮಹಾರಾಷ್ಟ್ರ ಪೊಲೀಸ್ ಲಾಂಛನವಿದ್ದು, ಇದು ನಕ್ಷತ್ರ ಮತ್ತು ರಕ್ಷಣೆಯನ್ನು ಸೂಚಿಸಲು ಎರಡು ವೃತ್ತವನ್ನು ಒಳಗೊಂಡಿದೆ.

ಆಂಧ್ರಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ಕ್ಯಾಪ್ನ್ನು ಪೀಕ್ ಕ್ಯಾಪ್ ಎಂದು ಕರೆಯಲಾಗುತ್ತದೆ. ಪೀಕ್ ಕ್ಯಾಪ್ ನೀಲಿ ಬಣ್ಣವನ್ನು ಹೊಂದಿದೆ.

ಗೋವಾದಲ್ಲಿ "ಪೀಕ್ ಕ್ಯಾಪ್" ಧರಿಸಿಕೊಳ್ಳಲಾಗುತ್ತದೆ. ಈ ಕ್ಯಾಪ್‌ನ ಮುಂಭಾಗದಲ್ಲಿ ಸಾಮಾನ್ಯವಾಗಿ ಪೊಲೀಸ್ ಪಡೆಯ ಲಾಂಛನ ಇದೆ. ಈ ಲಾಂಛನವು ಅಧಿಕಾರ ಮತ್ತು ಜವಾಬ್ದಾರಿಯ ಸಂಕೇತವಾಗಿದೆ.

ತೆಲಂಗಾಣದಲ್ಲಿ ಕಾನ್‌ಸ್ಟೆಬಲ್ ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳು "ನೇವಿ ಬ್ಲೂ ಪೀಕ್ ಕ್ಯಾಪ್" ಬಳಸುತ್ತಾರೆ. ಇದೀಗ ಕರ್ನಾಟಕಕ್ಕೂ ಕೂಡ ಈ ಕ್ಯಾಪ್ಗಳನ್ನು ಬಳಸಲಾಗುತ್ತದೆ. ಇದು ಬಿಗಿಯಾದ ಫಿಟ್, ಸುಧಾರಿತ ವಿನ್ಯಾಸ ಮತ್ತು ವೃತ್ತಿಪರ ನೋಟವನ್ನು ನೀಡುತ್ತದೆ.

ದೆಹಲಿ ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುವ ಅತ್ಯಂತ ಸಾಮಾನ್ಯ ಶೈಲಿಯ ಕ್ಯಾಪ್, ಕಾನ್‌ಸ್ಟೆಬಲ್‌ಗಳು "ಬೆರೆಟ್ ಕ್ಯಾಪ್" ಹಾಕಿಕೊಳ್ಳುತ್ತಾರೆ. ಇದು ಅನೌಪಚಾರಿಕ ಸಮವಸ್ತ್ರಗಳ ಭಾಗವಾಗಿದೆ. ಇದು ಮಿಲಿಟರಿ ಶೈಲಿಯ ಕ್ಯಾಪ್ ಆಗಿದ್ದು, ಅದರ ನೋಟ ಕೂಡ ಅದೇ ರೀತಿ ಇದೆ. ಮೃದುವಾದ, ದುಂಡಗಿನ, ಚಪ್ಪಟೆಯಾಗಿದ್ದು, ಕಡು ನೀಲಿ ಬಣ್ಣದಲ್ಲಿರುತ್ತದೆ.

ತಮಿಳುನಾಡು ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುವ ಕ್ಯಾಪ್ "ಪೀಕ್ಡ್ ಕ್ಯಾಪ್", ಇದನ್ನು ಶಿಖರ ಕ್ಯಾಪ್ ಎಂದು ಕೂಡ ಕರೆಯುತ್ತಾರೆ. ನೌಕಾ ನೀಲಿ ಅಥವಾ ಖಾಕಿ ಬಣ್ಣವನ್ನು ಹೊಂದಿರುತ್ತದೆ.
Published On - 12:05 pm, Tue, 28 October 25




