- Kannada News Photo gallery Kichcha Sudeep Childhood Photos and Rare Photos Goes viral Ahead of Birthday
ಕಿಚ್ಚ ಸುದೀಪ್ ಬಾಲ್ಯದ ಹಾಗೂ ಅಪರೂಪದ ಫೋಟೋಗಳ ಕಲೆಕ್ಷನ್ ಇಲ್ಲಿದೆ
Kichcha Sudeep Birthday: ಕೊವಿಡ್, ಪುನೀತ್ ರಾಜ್ಕುಮಾರ್ ನಿಧನ ಮತ್ತಿತ್ಯಾದಿ ಕಾರಣಗಳಿಂದ ಸುದೀಪ್ ಅವರಿಗೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಈ ವರ್ಷ ಅವರು ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಸೆಲಬ್ರೇಟ್ ಮಾಡಲು ಸಿದ್ಧತೆ ನಡೆಸಿದ್ದಾರೆ.
Updated on: Aug 31, 2023 | 1:42 PM

ನಟ ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2ರಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಬರ್ತ್ಡೇನ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದೆ. ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ನಲ್ಲಿ ಸುದೀಪ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ .

ಕೊವಿಡ್, ಪುನೀತ್ ರಾಜ್ಕುಮಾರ್ ನಿಧನ ಮತ್ತಿತ್ಯಾದಿ ಕಾರಣಗಳಿಂದ ಸುದೀಪ್ ಅವರಿಗೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಈ ವರ್ಷ ಅವರು ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಸೆಲಬ್ರೇಟ್ ಮಾಡಲು ಸಿದ್ಧತೆ ನಡೆಸಿದ್ದಾರೆ.

ಸುದೀಪ್ ಅವರ ಅಪರೂಪದ ಫೋಟೋಗಳು, ಬಾಲ್ಯದ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ. ಬರ್ತ್ಡೇ ಸಂದರ್ಭದಲ್ಲಿ ಅಭಿಮಾನಿಗಳು ಈ ರೀತಿಯ ಫೋಟೋಗಳನ್ನು ಹುಡುಕಿ ತೆಗೆಯುತ್ತಿದ್ದಾರೆ.

ಸುದೀಪ್ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಈ ಕಾರಣಕ್ಕೆ ‘ವಿಷ್ಣುವರ್ಧನ’ ಹೆಸರಿನ ಸಿನಿಮಾ ಕೂಡ ಮಾಡಿದ್ದರು. ವಿಷ್ಣು ಅವರ ಮೇಲಿನ ಪ್ರೀತಿಯನ್ನು ಸುದೀಪ್ ಅನೇಕ ಬಾರಿ ವ್ಯಕ್ತಪಡಿಸಿದ್ದಾರೆ.

ಸುದೀಪ್ ಹಾಗೂ ಜಗ್ಗೇಶ ಒಟ್ಟಿಗೆ ತೆಗೆಸಿಕೊಂಡ ಫೋಟೋ ಇದು. ಇಬ್ಬರೂ ನಗುನಗುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತದೆ. ಬರ್ತ್ಡೇ ಸಂದರ್ಭದಲ್ಲಿ ಈ ಚಿತ್ರ ಗಮನ ಸೆಳೆದಿದೆ.

ಪ್ರಿಯಾ ಹಾಗೂ ಸುದೀಪ್ ಮದುವೆ ಆಗಿ ಹಲವು ವರ್ಷ ಕಳೆದಿವೆ. ಇವರಿಗೆ ಸಾನ್ವಿ ಹೆಸರಿನ ಮಗಳಿದ್ದಾರೆ. ಮಗಳು ಚಿಕ್ಕವಳಿದ್ದಾಗ ತೆಗೆದ ಫೋಟೋ ಇದು. ಈ ಫೋಟೋಗಳನ್ನು ಅಭಿಮಾನಿಗಳು ಮತ್ತೆ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಸುದೀಪ್ ಹಾಗೂ ಪುನೀತ್ ರಾಜ್ಕುಮಾರ್ ಗೆಳೆತನ ಬಹಳ ಹಳೆಯದು. ಈ ಬಗ್ಗೆ ಸುದೀಪ್ ಅವರು ಈ ಮೊದಲು ಹೇಳಿಕೊಂಡಿದ್ದರು. ಪುನೀತ್ ಬಗ್ಗೆ ಸುದೀಪ್ಗೆ ವಿಶೇಷ ಪ್ರೀತಿ ಇತ್ತು. ಇವರ ಗೆಳೆತನ ಅನೇಕರಿಗೆ ಮಾದರಿ.

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More




