ಪ್ರಧಾನಿ ಮೋದಿ ನನಗೆ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಪ್ರಧಾನಿ ನರೇಂದ್ರ ಮೋದಿ ಅವರ ಸುದೀರ್ಘಾವಧಿ ಆಡಳಿತ ಮತ್ತು ವಿಶಿಷ್ಟ ನಾಯಕತ್ವದ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ವಿಶ್ಲೇಷಿಸಿದ್ದಾರೆ. ಚುನಾಯಿತ ಪ್ರಧಾನಿಯಾಗಿ ನೆಹರೂ ಅವರ ದಾಖಲೆಯನ್ನು ಮೋದಿ ಮುರಿದಿದ್ದಾರೆ. ದೇಶದಲ್ಲಿ ಸ್ಥಿರ ಸರಕಾರ ನೀಡಿ, ನಮ್ಮಿಂದಲೂ ಸಾಧ್ಯ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸಿದ್ದಾರೆ. ಅಧಿಕಾರಕ್ಕಾಗಿ ಮೋದಿ ಅವರು ನಿರ್ಲಿಪ್ತರು, ರಾಷ್ಟ್ರ ಮೊದಲು ಎಂಬ ತತ್ವವನ್ನು ಅಕ್ಷರಶಃ ಪಾಲಿಸಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಬೆಂಗಳೂರು, ಜೂನ್ 15: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಿವಿ9 ಜೊತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ದಾಖಲೆಯ ಆಡಳಿತಾವಧಿ ಮತ್ತು ನಾಯಕತ್ವದ ಕುರಿತು ಮಾತನಾಡಿದ್ದಾರೆ. ಟಿವಿ9ನ ರಂಗನಾಥ್ ಭಾರದ್ವಾಜ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದಾಖಲೆಯ ಆಡಳಿತಾವಧಿ ಮತ್ತು ನಾಯಕತ್ವದ ಕುರಿತು ಪ್ರಲ್ಹಾದ್ ಜೋಶಿ (Pralhad Joshi) ಸುದೀರ್ಘವಾಗಿ ಮಾತನಾಡಿದ್ದಾರೆ.
ಆರಂಭದಲ್ಲಿ ಯು.ಆರ್. ಅನಂತಮೂರ್ತಿ ಅವರಂತಹ ಕೆಲವರು ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿದ್ದರು. ಇದು ಅವರ ನಾಯಕತ್ವದ ಬಗ್ಗೆ ಇದ್ದ ಆರಂಭಿಕ ಅನುಮಾನಗಳನ್ನು ಸೂಚಿಸುತ್ತದೆ. ಆದರೆ ಮೋದಿ ಅವರು ಇದೇ ವ್ಯವಸ್ಥೆಯಲ್ಲಿ ಕೆಲಸ ಮಾಡಿ, ರಾಷ್ಟ್ರ ಮೊದಲು ಎಂಬ ತತ್ವವನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದರು. ಅವರಿಗೆ ಅಧಿಕಾರದ ಆಸಕ್ತಿ ಇರಲಿಲ್ಲ. 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ತಮ್ಮ ಕೆಲಸ ಮುಗಿದ ನಂತರ, ಅವರು ಸಂಘಟನಾ ಕಾರ್ಯಕ್ಕೆ ಮರಳಲು ಯೋಚಿಸಿದ್ದರು. ಇದು ಅವರ ನಿರ್ಲಿಪ್ತ ಸ್ವಭಾವವನ್ನು ತೋರಿಸುತ್ತದೆ. ಮೋದಿ ಎಂದಿಗೂ ಅಧಿಕಾರಕ್ಕೆ ಆಸೆ ಪಡಲಿಲ್ಲ. ಅವರು ಅಧಿಕಾರ ಸಾಕು ಎಂದಿದ್ದರು. ಮೋದಿ ಅವರು ಜನರಲ್ಲಿ ನಿರಾಶೆಯನ್ನು ತುಂಬುವ ಬದಲು, ಭರವಸೆ ಮತ್ತು ಆಸೆಯನ್ನು ತುಂಬುವ ನಾಯಕರಾಗಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಬಣ್ಣಿಸಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

