RSS ಬಗ್ಗೆ ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ಸಂಸದ ತೇಜಸ್ವಿ ಸೂರ್ಯ ಖಡಕ್ ಉತ್ತರ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಆರ್ಎಸ್ಎಸ್ನ ನೋಂದಣಿ, ಆದಾಯ, ಆಸ್ತಿಪಾಸ್ತಿ ಸೇರಿದಂತೆ ಇತರೆ ವಿವರ ನೀಡುವಂತೆ ಆಗ್ರಹಿಸಿದ್ದಾರೆ. ಇನ್ನು ಇದಕ್ಕೆ ದೆಹಲಿಯಲ್ಲಿಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸುರ್ಯ ಪ್ರತಿಕ್ರಿಯಿಸಿದ್ದು, ಅವರ ಪ್ರಶ್ನೆಗಳಿಗೆ ಆರ್‌ಎಸ್‌ಎಸ್‌ನವರು ಕಾನೂನಾತ್ಮಕವಾಗಿ ಉತ್ತರಿಸ್ತಾರೆ. ಸಂಘ ಸಂಸ್ಥೆ ಸ್ಥಾಪಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಕೇವಲ ಆರ್‌ಎಸ್‌ಎಸ್‌ಗೆ ಮಾತ್ರ ಅವಕಾಶ ನೀಡಿಲ್ಲ. ಗ್ರಾಮೀಣ ಭಾಗದ ನಾಲ್ವರು ಯುವಕರು ಸೇರಿ ಸಂಘ ಕಟ್ಟಬಹುದು. ಸಂವಿಧಾನ ಇಲ್ಲದಾಗಲೂ, ಬ್ರಿಟಿಷರ ಕಾಲದಲ್ಲೂ ಕೆಲಸ ಮಾಡಿದೆ. ಸಂಘದ ಆಸ್ತಿ, ವಹಿವಾಟುಗಳು ನಿಯಮಗಳ ಅಡಿಯಲ್ಲಿ ನಡೆಯುತ್ತಿವೆ. ಸಚಿವ ಪ್ರಿಯಾಂಕ್ ಖರ್ಗೆ ಇದೇ ಮೊದಲ ಅಲ್ಲ ಆಡಿಟ್ ಕೇಳ್ತಿರೋದು. ಐಟಿ-ಬಿಟಿ ಇಲಾಖೆಯಲ್ಲಿ ರಿಸರ್ಚ್ ಇನೋವೇಷನ್ ಮಾಡಬೇಕಿತ್ತು. ಆದರೆ ಪ್ರಿಯಾಂಕ್ ಖರ್ಗೆ ಇಲ್ಲಿ ರಿಸರ್ಚ್ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ನವದೆಹಲಿ, (ಜೂನ್ 15): ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಮೋಹನ್ ಭಾಗವತ್ (Mohan bhagwat) ಅವರಿಗೆ ಪತ್ರ ಬರೆದು ಆರ್ಎಸ್ಎಸ್ನ ನೋಂದಣಿ, ಆದಾಯ, ಆಸ್ತಿಪಾಸ್ತಿ ಸೇರಿದಂತೆ ಇತರೆ ವಿವರ ನೀಡುವಂತೆ ಆಗ್ರಹಿಸಿದ್ದಾರೆ. ಇನ್ನು ಇದಕ್ಕೆ ದೆಹಲಿಯಲ್ಲಿಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ(Tejaswi Surya) ಪ್ರತಿಕ್ರಿಯಿಸಿದ್ದು, ಅವರ ಪ್ರಶ್ನೆಗಳಿಗೆ ಆರ್‌ಎಸ್‌ಎಸ್‌ನವರು ಕಾನೂನಾತ್ಮಕವಾಗಿ ಉತ್ತರಿಸ್ತಾರೆ. ಸಂಘ ಸಂಸ್ಥೆ ಸ್ಥಾಪಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಕೇವಲ ಆರ್‌ಎಸ್‌ಎಸ್‌ಗೆ ಮಾತ್ರ ಅವಕಾಶ ನೀಡಿಲ್ಲ. ಗ್ರಾಮೀಣ ಭಾಗದ ನಾಲ್ವರು ಯುವಕರು ಸೇರಿ ಸಂಘ ಕಟ್ಟಬಹುದು. ಸಂವಿಧಾನ ಇಲ್ಲದಾಗಲೂ, ಬ್ರಿಟಿಷರ ಕಾಲದಲ್ಲೂ ಕೆಲಸ ಮಾಡಿದೆ. ಸಂಘದ ಆಸ್ತಿ, ವಹಿವಾಟುಗಳು ನಿಯಮಗಳ ಅಡಿಯಲ್ಲಿ ನಡೆಯುತ್ತಿವೆ. ಸಚಿವ ಪ್ರಿಯಾಂಕ್ ಖರ್ಗೆ ಇದೇ ಮೊದಲ ಅಲ್ಲ ಆಡಿಟ್ ಕೇಳ್ತಿರೋದು. ಐಟಿ-ಬಿಟಿ ಇಲಾಖೆಯಲ್ಲಿ ರಿಸರ್ಚ್ ಇನೋವೇಷನ್ ಮಾಡಬೇಕಿತ್ತು. ಆದರೆ ಪ್ರಿಯಾಂಕ್ ಖರ್ಗೆ ಇಲ್ಲಿ ರಿಸರ್ಚ್ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ನಾನೇ ಮೊದಲು ನೋಂದಣಿ ಕೇಳುತ್ತಿದ್ದೇನೆ ಅಂದುಕೊಂಡರೆ ಅದು ತಪ್ಪು.ಹಿಂದೆ ಪಥಸಂಚಲನಕ್ಕೆ ವಿರೋಧಿಸಿದರು, ಕೋರ್ಟ್ ಅನುಮತಿ ನೀಡಿತು. ಮೊದಲು 500 ಸೇರುವ ಜಾಗದಲ್ಲಿ ವಿರೋಧದ ಬಳಿಕ 5 ಸಾವಿರ ಜನ ಸೇರಿದರು. ವಿರೋಧಿಸಿದಷ್ಟು ಅದರ ಚಿಂತನೆಗಳು ಬಲಿಷ್ಠವಾಗುತ್ತವೆ, ಇದಕ್ಕೆ ಸ್ವಾಗತಿಸುತ್ತೇನೆ. ದೇಶದ ಸಂವಿಧಾನದ ಅಡಿಯಲ್ಲಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ. ಸಂವಿಧಾನದ ಮೇಲೆ ಎಂದು ಕೆಲಸ ಮಾಡುವ ಜನರು, ಸಂಘಟನೆ ಯಾರು ಎಂದು ಗೊತ್ತಿದೆ, ನೋಂದಣಿ ಬಗ್ಗೆ ಚರ್ಚೆ ಆಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಾನೂನು ಸಲಹೆ ಪಡೆಯಬೇಕಿತ್ತು. ಇದಕ್ಕೆ ಆರ್‌ಎಸ್‌ಎಸ್ ಮತ್ತು ಜನರು ಮುಂದೆ ಉತ್ತರ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.
