ಕಿಚ್ಚ ಸುದೀಪ್ ಅವರ ಈ ಸೂಪರ್ ಜಾಕೆಟ್ ಉಡುಗೊರೆಯಾಗಿ ಸಿಕ್ಕಿದ್ದು ಯಾರಿಗೆ?
Kichcha Sudeep Jacket: ಕಳೆದ ಬಾರಿ ಕಿಚ್ಚ ಧರಿಸಿದ್ದ ಜಾಕೇಟ್ಗಳ ಪೈಕಿ ಕೆಲವನ್ನು ಉಡುಗೊರೆಯಾಗಿ ನೀಡಿದ್ದರು. ರಜತ್ ಅವರು ಜಾಕೆಟ್ನ ಉಡುಗೊರೆಯಾಗಿ ಕೇಳಿ ಪಡೆದಕೊಂಡಿದ್ದರು. ಈ ಬಾರಿಯೂ ಅವ ಜಾಕೆಟ್ ಓರ್ವ ಸ್ಪರ್ಧಿಗೆ ಗಿಫ್ಟ್ ಆಗಿ ಸಿಕ್ಕಿದೆ. ಅವರು ಯಾರು? ಆ ಬಗ್ಗೆ ಇಲ್ಲಿದೆ ವಿವರ.
Updated on:Jan 19, 2026 | 3:13 PM

ಕಿಚ್ಚ ಸುದೀಪ್ ಅವರು ಹೋಸ್ಟ್ ಮಾಡುವಾಗ ಪ್ರತಿ ಬಾರಿ ಹೊಸ ಹೊಸ ರೀತಿಯ ಜಾಕೆಟ್ ಹಾಕಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿಯ ಬಿಗ್ ಬಾಸ್ ಫಿನಾಲೆ ದಿನ ಅವರು ಸಖತ್ ಆಗಿರೋ ಜಾಕೆಟ್ ಹಾಕಿ ಕಾಣಿಸಿಕೊಂಡಿದ್ದರು.

ಕಳೆದ ಬಾರಿ ಕಿಚ್ಚ ಧರಿಸಿದ್ದ ಜಾಕೇಟ್ಗಳ ಪೈಕಿ ಕೆಲವನ್ನು ಉಡುಗೊರೆಯಾಗಿ ನೀಡಿದ್ದರು. ರಜತ್ ಅವರು ಜಾಕೆಟ್ನ ಉಡುಗೊರೆಯಾಗಿ ಕೇಳಿ ಪಡೆದಕೊಂಡಿದ್ದರು. ಈ ಬಾರಿಯೂ ಅವ ಜಾಕೆಟ್ ಓರ್ವ ಸ್ಪರ್ಧಿಗೆ ಗಿಫ್ಟ್ ಆಗಿ ಸಿಕ್ಕಿದೆ.

ಟಾಪ್ 6ರ ಪೈಕಿ ಮೊದಲು ಎಲಿಮಿನೇಟ್ ಆಗಿದ್ದು ಧನುಶ್ ಅವರು. ಅವರು ಸುದೀಪ್ ಅವರ ಜಾಕೆಟ್ನ ಉಡುಗೊರೆಯಾಗಿ ಕೇಳಿದ್ದಾರೆ. ಇದಕ್ಕೆ ಸುದೀಪ್ ಅವರು ಮರು ಯೋಚಿಸದೆ ಒಪ್ಪಿಗೆ ಸೂಚಿಸಿದ್ದಾರೆ.

ಸುದೀಪ್ ಅವರ ಜಾಕೆಟ್ ಅದ್ಭುತವಾಗಿತ್ತು. ಶೋ ಮುಗಿದ ಬಳಿಕ ಈ ಜಾಕೆಟ್ನ ಅವರು ಧನುಶ್ಗೆ ಕಳುಹಿಸಿಕೊಡುವ ಸಾಧ್ಯತೆ ಇದೆ. ಈ ಜಾಕೆಟ್ ಪಡೆದ ಧನುಶ್ ಅವರು ಖುಷಿಯಾಗಿದ್ದಾರೆ.

ಸುದೀಪ್ ಅವರು ಬಿಗ್ ಬಾಸ್ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ. ಅವರು ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆಯೂ ಕಾಳಜಿ ತೋರಿಸುತ್ತಾರೆ. ಅವರು ಗಿಲ್ಲಿಗೆ 10 ಲಕ್ಷ ರೂಪಾಯಿ ಮೊತ್ತವನ್ನು ಬಹುಮಾನ ರೂಪದಲ್ಲಿ ನೀಡುತ್ತಿದ್ದಾರೆ.
Published On - 3:09 pm, Mon, 19 January 26




