Updated on:May 16, 2023 | 3:46 PM
‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್ ಬಾಲ್ಯದ ಕಥೆ ಬರುತ್ತದೆ. ಸತ್ಯ ಹಾಗೂ ಶಿವನ ತಾಯಿ ಪಾತ್ರದಲ್ಲಿ ಅಭಿರಾಮಿ ಕಾಣಿಸಿಕೊಂಡಿದ್ದರು. ಈಗ ಅವರು ಗುಡ್ನ್ಯೂಸ್ ನೀಡಿದ್ದಾರೆ. ಅವರು ಮಗುನ ದತ್ತು ಪಡೆದಿದ್ದಾರೆ.
ರಾಹುಲ್ ಪಾವನನ್ ಅವರನ್ನು 2009ರಲ್ಲಿ ಅಭಿರಾಮಿ ಮದುವೆ ಆದರು. ಆದರೆ, ಈ ದಂಪತಿಗೆ ಮಗು ಜನಿಸಿರಲಿಲ್ಲ. ಈಗ ಅವರು ಮಗುವನ್ನು ದತ್ತು ಪಡೆದಿದ್ದಾರೆ.
‘ಕಲ್ಕಿ ಹೆಸರಿನ ಹೆಣ್ಣು ಮಗುವಿಗೆ ನಾನು ಹಾಗೂ ರಾಹುಲ್ ತಂದೆ ಆಗಿದ್ದೇವೆ. ಕಳೆದ ವರ್ಷ ನಾವು ಮಗುನ ದತ್ತು ಪಡೆದಿದ್ದೇವೆ. ನಾನು ಈಗ ತಾಯಿ’ ಎಂದು ಅವರು ಸಂತಸ ಹೊರಹಾಕಿದ್ದಾರೆ.
ಮಲಯಾಳಂ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದವರು ಅಭಿರಾಮಿ. ನಂತರ ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಗ ಅವರು ಪೋಷಕ ಪಾತ್ರದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
‘ಲಾಲಿ ಹಾಡು’ ಸೇರಿ ಕೆಲವು ಕನ್ನಡ ಸಿನಿಮಾಗಳಲ್ಲಿ ಅಭಿರಾಮಿ ನಟಿಸಿದ್ದಾರೆ. ಈಗ ಅವರು ಗುಡ್ನ್ಯೂಸ್ ನೀಡಿದ್ದಾರೆ ಅನ್ನೋದು ವಿಶೇಷ.
Published On - 2:49 pm, Tue, 16 May 23