Updated on: Jan 14, 2024 | 7:49 AM
Ayodhya Tour: Various tour package announced by agencies
ಕರ್ನಾಟಕದಲ್ಲೂ ಒಂದು ರಾಮಮಂದಿರ ನಿರ್ಮಾಣವಾಗಿದ್ದು, ಅದು ಮೆಕ್ಕೆಜೋಳದಲ್ಲಿ
ಹೌದು ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಮೆಕ್ಕೆಜೋಳದಲ್ಲಿ ರಾಮಮಂದಿರ ನಿರ್ಮಾಣವಾಗಿದೆ.
ಓಜನಹಳ್ಳಿ ಗ್ರಾಮದ ರೈತ ತಾತನಗೌಡ ಎಂಬುವರ ಜಮೀನಿನಲ್ಲಿ ಮೆಕ್ಕೆಜೋಳದಲ್ಲಿ ರಾಮಮಂದಿರ ಕಟ್ಟಲಾಗಿದೆ.
ರೈತ ತಾತನಗೌಡ ಖಾಸಗಿ ಸೀಡ್ಸ್ ಕಂಪನಿ ಸಹಯೋಗದೊಂದಿಗೆ ತಾನು ಬೆಳೆದಿದ್ದ ಮೆಕ್ಕೆಜೋಳದಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದಾರೆ.
ಸರಿಸುಮಾರು ಐದು ಸಾವಿರ ಮೆಕ್ಕೆಜೋಳ ತೆನೆಗಳನ್ನು ಬಳಸಿ ರಾಮಮಂದಿರ ನಿರ್ಮಿಸಲಾಗಿದೆ.
ಕಳೆದ ಒಂದು ವಾರದಿಂದ 10 ಜನ ಕಾರ್ಮಿಕರು ಪರಿಶ್ರಮದಿಂದ ಈ ರಾಮಮಂದಿರ ನಿರ್ಮಾಣವಾಗಿದೆ.
ಮೆಕ್ಕೆಜೋಳ ತೆನೆಯಲ್ಲಿ ಕಟ್ಟಲಾದ ರಾಮಮಂದಿರವನ್ನು ನೋಡಲು ಸಾಕಷ್ಟು ಜನ ಬರುತ್ತಿದ್ದಾರೆ.
ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುವವರೆಗೆ ಅಂದರೆ ಜನವರಿ 22 ರವರಗೆ ಮೆಕ್ಕೆಜೋಳದಿಂದ ಕಟ್ಟಲಾದ ರಾಮಮಂದಿರ ಇರಲಿದೆ.