Kriti Kharbanda Wedding: ‘ಗೂಗ್ಲಿ’ ಬೆಡಗಿ ಕೃತಿ ಕರಬಂಧಗೆ ಮದುವೆ ಸಂಭ್ರಮ; ಇಲ್ಲಿದೆ ಫೋಟೋ ಗ್ಯಾಲರಿ
ದೆಹಲಿಯ ಐಟಿಸಿ ಗ್ರ್ಯಾಂಡ್ ಭಾರತ್ನಲ್ಲಿ ಈ ವಿವಾಹ ನಡೆದಿದೆ. ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಗಳು ಜರುಗಿವೆ. ಆಪ್ತರು ಹಾಗೂ ಕುಟುಂಬದವರು ಮಾತ್ರ ಈ ಮದುವೆಗೆ ಆಗಮಿಸಿದ್ದರು.
Updated on:Mar 16, 2024 | 2:58 PM

ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ನಟಿಸಿ ಫೇಮಸ್ ಆಗಿರುವ ನಟಿ ಕೃತಿ ಕರಬಂಧ ಅವರ ವಿವಾಹ ಪುಲ್ಕಿತ್ ಸಮ್ರಾಟ್ ಜೊತೆ ಮದುವೆ ಆಗಿದ್ದಾರೆ. ಅವರ ವಿವಾಹದ ಫೋಟೋಗಳು ವೈರಲ್ ಆಗಿವೆ. ಸಖತ್ ಟ್ರೆಡಿಷನಲ್ ಲುಕ್ನಲ್ಲಿ ಇವರು ಗಮನ ಸೆಳೆದಿದ್ದಾರೆ.

ಕೆಲವು ಮೂಲಗಳ ಪ್ರಕಾರ ದೆಹಲಿಯ ಐಟಿಸಿ ಗ್ರ್ಯಾಂಡ್ ಭಾರತ್ನಲ್ಲಿ ಈ ವಿವಾಹ ನಡೆದಿದೆ. ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಗಳು ಜರುಗಿವೆ. ಆಪ್ತರು ಹಾಗೂ ಕುಟುಂಬದವರು ಮಾತ್ರ ಈ ಮದುವೆಗೆ ಆಗಮಿಸಿದ್ದರು.

ಕೃತಿ ಹಾಗೂ ಪುಲ್ಕಿತ್ ಇಬ್ಬರೂ ದೆಹಲಿಯವರು. ಈ ಕಾರಣಕ್ಕೆ ದೆಹಲಿಯಲ್ಲೇ ಇವರ ವಿವಾಹ ಕಾರ್ಯ ನಡೆದಿದೆ. ಈ ಫೋಟೋಗಳನ್ನು ಕೃತಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಕೃತಿ ಹಾಗೂ ಪುಲ್ಕಿತ್ ‘ಪಾಗಲ್ಪಂತಿ’ ಚಿತ್ರದ ಸೆಟ್ನಲ್ಲಿ ಭೇಟಿ ಆದರು. ಈ ವರ್ಷದ ಆರಂಭದಲ್ಲಿ ಇವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇವರು ಪ್ರೀತಿ ವಿಚಾರವನ್ನು ಅನೇಕ ಬಾರಿ ಒಪ್ಪಿಕೊಂಡಿದ್ದು ಇದೆ.

ಕೃತಿ ಕರಬಂಧ ಅವರು 2009ರಲ್ಲಿ ಸಿನಿಮಾ ಜರ್ನಿ ಆರಂಭಿಸಿದರು. ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಯಶ್ ಜೊತೆ ನಟಿಸಿದ ‘ಗೂಗ್ಲಿ’ ಸಿನಿಮಾ ಸಾಕಷ್ಟು ಗಮನ ಸೆಳೆದಿತ್ತು.
Published On - 2:58 pm, Sat, 16 March 24

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More




