- Kannada News Photo gallery Lalbagh Library closed readers express anger against officials bengaluru kannada news
Lalbagh Library: ಸಸ್ಯಕಾಶಿಯಲ್ಲಿ ತೆರೆಯಲಾಗಿದ್ದ ಲೈಬ್ರರಿ ಕ್ಲೋಸ್; ಬೇಸರ ಹೊರ ಹಾಕಿದ ಓದುಗರು
ಸಸ್ಯಕಾಶಿ ಲಾಲ್ ಬಾಗ್ ಲಕ್ಷಾಂತರ ಪ್ರವಾಸಿಗರನ್ನ ಕೈಬೀಸಿ ಕರೆಯುವ ಸ್ಥಳ. ಇಲ್ಲಿನ ಲೈಬ್ರರಿ ಕೂಡ ಅಷ್ಟೇ ಫೇಮಾಸ್ ಆಗಿತ್ತು. ಆದರೆ ಈಗ ಲೈಬ್ರೈರಿ ಕ್ಲೋಸ್ ಆಗಿದ್ದು, ಓದುಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಮಳೆಯಲ್ಲಿ ಗ್ರಂಥಾಲಯ ನೀರು ನುಗ್ಗಿತ್ತು ಎನ್ನುವ ಕಾರಣಕ್ಕೆ ಲಾಲ್ ಬಾಗ್ ಅಧಿಕಾರಿಗಳು ಕಾಮಗಾರಿ ಮಾಡುಸ್ತೀವಿ ಅಂತ ಗ್ರಾಂಥಾಲಯವನ್ನ ಕ್ಲೋಸ್ ಮಾಡಿದ್ದಾರೆ.
Updated on: Oct 03, 2024 | 7:47 AM

ಸಸ್ಯಕಾಶಿ ಲಾಲ್ ಬಾಗ್ ಸಾಕಷ್ಟು ಜನರನ್ನ ಆಕರ್ಷಿಸುವ ಸ್ಥಳ. ಇಲ್ಲಿನ ಹೂ, ಗಿಡ- ಮರಗಳು ಎಷ್ಟೋ ಜನರನ್ನ ಆಕರ್ಷಿಸುತ್ತೋ ಅದೇ ರೀತಿಯಾಗಿ ಲಾಲ್ ಬಾಗ್ ನಲ್ಲಿರುವ ಗ್ರಂಥಾಲಯ ಕೂಡ ಜನರನ್ನ ಅಷ್ಟೇ ಆಕರ್ಷಿಸಿತ್ತು.

ಲಾಲ್ ಬಾಗ್ ಗ್ರಂಥಾಲಯವನ್ನ ಓದುಗರು ಹುಡುಕಿಕೊಂಡು ಬರುತ್ತಾರೆ. ಆದರೆ ಇತ್ತೀಚಿಗೆ ಸಣ್ಣ ಕಾಮಗಾರಿ ಮಾಡುಸ್ತೀವಿ ಅಂತ ಗ್ರಾಂಥಾಲಯವನ್ನ ಅಧಿಕಾರಿಗಳು ಕ್ಲೋಸ್ ಮಾಡಿದ್ದಾರೆ. ಕ್ಲೋಸ್ ಮಾಡಿ ಆರು ತಿಂಗಳು ಕಳೆಯುವುದಕ್ಕೆ ಬಂದರೂ ಗ್ರಂಥಾಲಯ ಮಾತ್ರ ಇನ್ನೂ ಓಪನ್ ಆಗಿಲ್ಲ.

ಓದುಗರಿಗೆಂದೇ ಲಾಲ್ ಬಾಗ್ನಲ್ಲಿ ಸಾರ್ವಜನಿಕ ಗ್ರಾಂಥಾಲಯವನ್ನ ತೆರೆಯಲಾಗಿತ್ತು. ಇಲ್ಲಿ ಪ್ರತಿದಿನ ಮುಂಜಾನೆ ವಾಕಿಂಗ್ ಗೆ ಬಂದಂತಹವರು, ವಿದ್ಯಾರ್ಥಿಗಳು, ಸ್ಫರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು ಸೇರಿದಂತೆ ಸಾಕಷ್ಟು ಜನರು ತಮಗೆ ಇಷ್ಟದ ಪುಸ್ತಕಗಳನ್ನ ಓದುತ್ತಿದ್ರು. ಆದ್ರೆ ಕಳೆದ ಮಳೆಯಲ್ಲಿ ಗ್ರಂಥಾಲಯ ನೀರು ನುಗ್ಗಿತ್ತು ಎನ್ನುವ ಕಾರಣಕ್ಕೆ ಲಾಲ್ ಬಾಗ್ ಅಧಿಕಾರಿಗಳು ಕಾಮಗಾರಿ ಮಾಡುಸ್ತೀವಿ ಅಂತ ಗ್ರಾಂಥಾಲಯವನ್ನ ಕ್ಲೋಸ್ ಮಾಡಿದ್ರು.

ಆದರೆ ಗ್ರಂಥಾಲಯವನ್ನ ಕ್ಲೋಸ್ ಮಾಡಿ 6 ತಿಂಗಳಾದ್ರು ಇನ್ನೂ ಕೂಡ ತೆರೆದಿಲ್ಲ. ಗ್ರಂಥಾಲಯ ಕ್ಲೋಸ್ ಆಗಿರುವ ಬಗ್ಗೆ ಜನರಿಗೆ ಮಾಹಿತಿ ಇಲ್ಲದ ಕಾರಣ ಸಾಕಷ್ಟು ಜನರು ಗ್ರಂಥಾಲಯಕ್ಕೆ ಬಂದು ಹೋಗುತ್ತಿದ್ದು, ಆದಾಷ್ಟು ಬೇಗ ಗ್ರಂಥಾಲಯವನ್ನ ಓಪನ್ ಮಾಡುವಂತೆ ಪ್ರವಾಸಿಗರು ಮನವಿ ಮಾಡಿದ್ದಾರೆ.

ಇನ್ನು, ಈ ಕುರಿತಾಗಿ ಲಾಲ್ ಬಾಗ್ ಅಧಿಕಾರಿಗಳನ್ನ ಪ್ರಶ್ನಿಸಿದ್ದಕ್ಕೆ ಮಳೆಗಾಲದ ಸಂದರ್ಭದಲ್ಲಿ ಗ್ರಂಥಾಲಯಕ್ಕೆ ನೀರು ನುಗ್ಗಿತ್ತು. ಹೀಗಾಗಿ ಗ್ರಂಥಾಲಯವನ್ನ ಶಿಫ್ಟ್ ಮಾಡಿದ್ದೀವಿ. ಸಧ್ಯ ಲಾಲ್ ಬಾಗ್ ಗ್ರಂಥಾಲದಲ್ಲಿ ಒಟ್ಟು 3 ಸಾವಿರ ಪುಸ್ತಕಗಳಿದ್ದು, ಸುರಕ್ಷಿತವಾಗಿ ಇಡಲಾಗಿದೆ. ಅವುಗಳನ್ನ ಸಧ್ಯ ಬೇರೆ ಕಡೆ ಶಿಫ್ಟ್ ಮಾಡಿದ್ದು, ಗ್ರಂಥಾಲಯ ಕಾಮಗಾರಿಗೆ ಬೇಕಾದ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ ಎಂದರು.

ಒಟ್ಬಲ್ಲಿ, ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್ ಗ್ರಂಥಾಲಯಗಳು ತಮ್ಮದೇ ಆದ ಓದುವ ವರ್ಗವನ್ನ ಒಳಗೊಂಡಿದೆ. ಹೀಗಾಗಿ ಸಾಕಷ್ಟು ಜನರು ಬೇರೆ ಬೇರೆ ಏರಿಯಾಗಳಿಂದ ಹುಡುಕಿಕೊಂಡು ಈ ಗ್ರಂಥಾಲಯಗಳಿಗೆ ಬರ್ತಾರೆ. ಆದರೆ ಈಗ ಲಾಲ್ ಬಾಗ್ ಗ್ರಾಂಥಾಲಯ ಕ್ಲೋಸ್ ಆಗಿರುವ ಹಿನ್ನಲೆ ಖಾಸಗಿ ಗ್ರಂಥಾಲಯಗಳತ್ತ ಮುಖ ಮಾಡ್ತಿದ್ದು, ಲಾಲ್ ಬಾಗ್ ಓದುವ ವರ್ಗವನ್ನ ಕಳೆದುಕೊಳ್ಳುವ ಮೊದಲು ಸಾರ್ವಜನಿಕರಿಗೆ ಗ್ರಂಥಾಲಯವನ್ನ ಸರಿಪಡಿಸಿ ಓದುಗರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.



















