- Kannada News Photo gallery Lord Rama name on walls in bengaluru ayodhya ram mandir inauguration special
ಸಿಲಿಕಾನ್ ಸಿಟಿಯ ಗೋಡೆ ಗೋಡೆಗಳ ಮೇಲೆ ರಾಮ ನಾಮ; ಭಕ್ತೆಯ ಅಳಿಲು ಸೇವೆಗೆ ಜನರು ಫಿದಾ
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ರಾಮೋತ್ಸವದ ಸಂಭ್ರಮ ಮನೆ ಮಾಡಿದೆ. ಸಿಟಿಯ ಹಲವು ಭಾಗಗಳಲ್ಲಿ ರಾಮನ ಅನಾವರಣ ಮಾಡುತ್ತಿದ್ದು, ಮನೆಗಳ ಮುಂದೆ ಶ್ರೀರಾಮನ ಹೆಸರು ರಾರಾಜಿಸುತ್ತಿವೆ. ಪ್ರತಿಯೊಂದು ಮನೆಗಳಿಗೆ ತೆರಳಿ ಒಪ್ಪಿಗೆ ಪಡೆದು ಕೇಳಿದವರ ಮನೆಯ ಹೊರಗಿನ ಗೋಡೆಗೆ ಜೈ ಶ್ರೀರಾಮ ಜೊತೆಗೆ ಆಂಜನೇಯ ಚಿತ್ರ ಬಿಡಿಸಿ ರಾಮ ಭಕ್ತಿಯನ್ನ ತೋರುತ್ತಿದ್ದಾರೆ.
Updated on: Jan 20, 2024 | 7:37 AM

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿಲಿಕಾನ್ ಸಿಟಿಯಲ್ಲಿಯೂ ರಾಮನ ಜಪ ಜೋರಾಗಿದೆ. ಮನೆ-ಮನೆಗಳ ಗೋಡೆ ಮೇಲೆ ಶ್ರೀರಾಮನ ಹೆಸರು ರಾರಾಜಿಸುತ್ತಿದೆ.

ಮನೆಗಳ ಗೋಡೆಗಳ ಮೇಲೆ ಸುಂದರವಾಗಿ ಕಾಣುತ್ತಿರುವ ಶ್ರೀರಾಮನ ಹೆಸರು, ಪಕ್ಕದಲ್ಲಿಯೇ ರಾರಾಜಿಸುತ್ತಿರುವ ಹನುಮಂತನ ಚಿತ್ರ, ಪ್ರತಿ ಮನೆಗಳಿಗೂ ತೆರಳಿ ಪೆಂಟಿಂಗ್ ಮಾಡುತ್ತಿರುವ ಶ್ರೀರಾಮನ ಭಕ್ತರು, ಇದೆಲ್ಲವೂ ಕಂಡುಬಂದಿದ್ದು, ನಗರದ ವೈಯಾಲಿ ಕಾವಲ್ ನಲ್ಲಿ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ರಾಮೋತ್ಸವದ ಸಂಭ್ರಮ ಮನೆ ಮಾಡಿದೆ. ಸಿಟಿಯ ಹಲವು ಭಾಗಗಳಲ್ಲಿ ರಾಮನ ಅನಾವರಣ ಮಾಡುತ್ತಿದ್ದು, ಮನೆಗಳ ಮುಂದೆ ಶ್ರೀರಾಮನ ಹೆಸರು ರಾರಾಜಿಸುತ್ತಿವೆ.

ರಾಮನ ಭಕ್ತೆಯಾದಂತಹ ಸುನಿತ ರಾಮಮಂದಿರ ಉದ್ಘಾಟನೆಯ ಸಲುವಾಗಿ ನಮ್ಮದೊಂದು ಅಳಿಲು ಸೇವೆ ಇರಬೇಕು ಎನ್ನುವ ಕಾರಣಕ್ಕೆ ನಗರದ ವೈಯ್ಯಾಲಿಕಾವಾಲ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಧ್ಯ ರಾಮನ ಹೆಸರುಗಳನ್ನ ಮನೆಯ ಗೋಡೆಗಳ ಮೇಲೆ ಬರೆಯುತ್ತಿದ್ದು, ವಿಶೇಷ ಸೇವೆಯನ್ನು ಮಾಡಲು ಹೊರಟಿದ್ದಾರೆ.

ಪ್ರತಿಯೊಂದು ಮನೆಗಳಿಗೆ ತೆರಳಿ ಒಪ್ಪಿಗೆ ಪಡೆದು ಕೇಳಿದವರ ಮನೆಯ ಹೊರಗಿನ ಗೋಡೆಗೆ ಜೈ ಶ್ರೀರಾಮ ಜೊತೆಗೆ ಆಂಜನೇಯ ಚಿತ್ರ ಬಿಡಿಸಿ ರಾಮ ಭಕ್ತಿಯನ್ನ ತೋರುತ್ತಿದ್ದಾರೆ.

ಇನ್ನು, ಹಲವು ವರ್ಷಗಳ ಕಾಲ ಹೋರಾಡಿ ಇದೀಗಾ ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ಪ್ರತಿಷ್ಟಾಪನೆಯಾಗುತ್ತಿದೆ. ಈ ದಿನವನ್ನ ಬರಮಾಡಿಕೊಳ್ಳುವ ಸಲುವಾಗಿ ನಾವೆಲ್ಲರೂ ಕಾತುರದಿಂದ ಕಾಯುತ್ತ ಇದ್ದೀವಿ. ಹೀಗಾಗಿ ಮನೆಗಳ ಗೋಡೆಗಳ ಮೇಲೂ ಶ್ರೀರಾಮನ ಹೆಸರನ್ನ ಬರೆಸುತ್ತಿದ್ದೇವೆ. ನಾವು ಹಿಂಧೂಗಳು ರಾಮನ ಭಕ್ತರು ಅಂತ ಹೇಳಿಕೊಳ್ಳುವುದಕ್ಕೆ ತುಂಬ ಖುಷಿಯಾಗುತ್ತಿದೆ ಎಂದು ನಿವಾಸಿಯೊಬ್ಬರು ತಿಳಿಸಿದರು.

ಒಟ್ನಲ್ಲಿ, ಸಿಲಿಕಾನ್ ಸಿಟಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಜನರು ಕಾತುರದಿಂದ ಕಾಯುತ್ತಿದ್ದು, ಹೋಮ, ಹವನ, ರಾಮ ನಾಮ ಜಪಿಸಲು ಜನರು ಸಜ್ಜಾಗಿದ್ದಾರೆ.



















