- Kannada News Photo gallery MahaShivratri 2022: Bholenath's image draw on the bilvapatre for Mahashivaratri
MahaShivratri 2022: ಮಹಾಶಿವರಾತ್ರಿ ಹಿನ್ನೆಲೆ ಬಿಲ್ವ ಪತ್ರೆಯ ಮೇಲೆ ಅರಳಿತು ಭೋಲೆನಾಥನ ಚಿತ್ರ
ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿರಾರ್ ಕೌಶಿಕ್ ಜಾಧವ್ ಅವರು ಬಿಲ್ವ ಪತ್ರೆ ಮೇಲೆ ಭಗವಾನ್ ಶಿವ ಭೋಲೆನಾಥನ ಚಿತ್ರವನ್ನು ಚಿತ್ರಿಸಿದ್ದಾರೆ. ಕೇವಲ 20 ನಿಮಿಷಗಳಲ್ಲಿ, ಭೋಲೆನಾಥನ ಚಿತ್ರವನ್ನು ಬಿಡಿಸಲಾಗಿದೆ.
Updated on:Mar 01, 2022 | 11:33 AM

MahaShivratri 2022: Bholenath's image draw on the bilvapatre for Mahashivaratri


ಬಿಲ್ವ ಪತ್ರೆಯ ಮೂರು ಎಲೆಗಳು ಶಿವನ ಮೂರು ಕಣ್ಣುಗಳನ್ನು ಸಂಕೇತಿಸುತ್ತವೆ. ಅಂದರೆ ಶಿವನ ರೂಪವನ್ನು ಹೊಂದಿರುವ ಬಿಲ್ವ ಎಲೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹಾಗಾಗಿ ಚಿತ್ರಕಲಾವಿದ ಕೌಶಿಕ್ ಜಾಧವ್ ಬಿಲ್ವ ಪತ್ರೆ ಮೇಲೆ ಶಿವನನ್ನು ಚಿತ್ರಿಸಿದ್ದಾರೆ.

ಕೌಶಿಕ್ ಜಾಧವ್ ಅವರು ಸದಾ ಹೊಸ ಹೊಸ ವಿಷಯಗಳ ಕುರಿತು ಸುಂದರ ಕಲಾಕೃತಿಗಳನ್ನು ಮಾಡುತ್ತಿದ್ದು, ಮಹಾಶಿವರಾತ್ರಿಯಂದು ಬಿಲ್ವ ಪತ್ರೆ ಮೇಲೆ ಬಿಡಿಸಿದ ಭೋಲೇನಾಥನ ಚಿತ್ರ ಎಲ್ಲರ ಆಕರ್ಷಣೆಯಾಗಿದೆ.

ಬಿಲ್ವ ಪತ್ರೆ ಮಹಾದೇವ ಶಿವನಿಗೆ ಬಹಳ ಪ್ರಿಯ. ಬಿಲ್ವ ಪತ್ರೆ ಯಾವಾಗಲೂ ಮೂರು ಎಲೆಗಳ ಗುಂಪಿನಲ್ಲಿರುತ್ತದೆ. ಈ ಮೂರು ಎಲೆಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶನ ಮೂರ್ತರೂಪವೆಂದು ಪರಿಗಣಿಸಲಾಗುತ್ತದೆ.
Published On - 11:02 am, Tue, 1 March 22

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್, ವೈಯಿಸ್ ಓವರ್, ಎಡಿಟಿಂಗ್ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.
Read More




