ಹೊಸ ಕಾರು ಖರೀದಿಸಿದ ಮ್ಯಾಕ್ಸ್ ಮಂಜು? ಇಲ್ಲಿದೆ ವಿವರ..
ಉಗ್ರಂ ಮಂಜು ಅವರು ನಟನೆಯಲ್ಲಿ ಬ್ಯುಸಿ ಇದ್ದಾರೆ. ಬಿಗ್ ಬಾಸ್ ಬಳಿಕ ಅವರಿಗೆ ಬರೋ ಆಫರ್ಗಳು ಕೂಡ ಹೆಚ್ಚಿವೆ. ಅವರು ಈಗ ಕೆಲವು ಕೆಟ್ಟ ಗುಣಗಳನ್ನು ಕಳೆದು ಒಳ್ಳೆಯ ರೀತಿಯಲ್ಲಿ ಜೀವನ ನಡೆಸಲು ಬಯಸುತ್ತಿದ್ದಾರೆ. ಈಗ ಅವರ ಕಾರಿನ ಫೋಟೋ ವೈರಲ್ ಆಗಿದೆ.
Updated on:Jun 14, 2025 | 8:54 AM

ಉಗ್ರಂ ಮಂಜು ಶೂಟಿಂಗ್ ಕಾರಣಕ್ಕೆ, ವೈಯಕ್ತಿಕ ಕಾರಣಕ್ಕೆ ನಾನಾ ಕಡೆಗಳಿಗೆ ಪ್ರವಾಸ ಬೆಳೆಸುತ್ತಾರೆ. ಈಗ ಅವರು ಸಕಲೇಶಪುರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮಂಜು ಅವರು ಹಂಚಿಕೊಂಡಿದ್ದಾರೆ. ಈ ವೇಳೆ ಒಂದು ವಿಚಾರ ಗಮನ ಸೆಳೆದಿದೆ.

ಉಗ್ರಂ ಮಂಜು ಅವರು ಮಹೀಂದ್ರಾ XUV 700 ಕಾರಿನ ಎದುರು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಮಂಜು ಹೊಸ ಕಾರು ಖರೀದಿಸಿದರೆ ಎನ್ನುವ ಪ್ರಶ್ನೆ ಮೂಡಿದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇದು ಮಂಜು ಅವರ ಕಾರೇ. ಅವರು 2024ರ ಆಗಸ್ಟ್ ತಿಂಗಳಲ್ಲೇ ಈ ಕಾರನ್ನು ಖರೀದಿ ಮಾಡಿದ್ದರು. ಅಂದರೆ ಬಿಗ್ ಬಾಸ್ಗೆ ಹೋಗುವ ಮೊದಲೇ ಅವರು ಹೊಸ ಕಾರನ್ನು ಖರೀದಿ ಮಾಡಿಯಾಗಿತ್ತು. ಆದರೆ, ಅವರು ಆ ಫೋಟೋಗಳನ್ನು ಹಂಚಿಕೊಂಡಿರಲಿಲ್ಲ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸೋ ಅವಕಾಶ ಮಂಜುಗೆ ದೊರೆಯಿತು. ಇಲ್ಲಿ ಮಂಜು ಸಾಕಷ್ಟು ಜನಪ್ರಿಯತೆ ಪಡೆದರು. ‘ಬಿಗ್ ಬಾಸ್’ ಮನೆಯಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರಿಗೆ ಹೊಸ ಹೊಸ ಆಫರ್ಗಳು ಬರುತ್ತಿವೆ.

ಮಂಜು ಅವರು ‘ಮ್ಯಾಕ್ಸ್’ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡಿದರು. ಇದಾದ ಬಳಿಕ ಅವರನ್ನು ಅನೇಕರು ಉಗ್ರಂ ಮಂಜು ಎಂದು ಕರೆಯೋ ಬದಲು ಮ್ಯಾಕ್ಸ್ ಮಂಜು ಎಂದು ಕರೆಯುತ್ತಿದ್ದಾರೆ. ಇದು ಅವರಿಗೆ ಖುಷಿ ನೀಡಿದೆ.
Published On - 8:52 am, Sat, 14 June 25




