Updated on: May 28, 2023 | 11:33 AM
ಮೇಘಾ ಶೆಟ್ಟಿ ಹೆಸರಿಗಿಂತ ಅನು ಸಿರಿಮನೆ ಎಂಬ ಹೆಸರಿನ ಮೂಲಕವೇ ಕರ್ನಾಟಕದ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿ. ಇದೀಗಾ ಮೇಘಾ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಮೇಘಾ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇದೀಗಾ ವೈಟ್ ಆ್ಯಂಡ್ ವೈಟ್ನಲ್ಲಿ ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ.
ಟಿವಿ ಸೀರಿಯಲ್ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದ ನಟಿ, ಇದೀಗಾ ಸೀರಿಯಲ್ ಮುಕ್ತಾಯಗೊಂಡ ಬೆನ್ನಲ್ಲೇ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.
ಇದೀಗಾ ನೀರಿನ ಮಧ್ಯೆ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ನಟಿಯ ಮಾದಕ ಮೈಮಾಟಕ್ಕೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ.
'ತ್ರಿಬಲ್ ರೈಡಿಂಗ್' ಸಿನಿಮಾದ ಮೂಲಕ ಬೆಳ್ಳಿ ಪರದೆಯ ಮೇಲೆ ಮಿಂಚಿದ್ದ ನಟಿ. ಇದಲ್ಲದೇ ಡಾರ್ಲಿಂಗ್ ಕೃಷ್ಣ ಜೊತೆ 'ದಿಲ್ ಪಸಂದ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಿದ್ದಂತೆ ಇನ್ನು ಮುಂದೆ ಸೀರಿಯಲ್ಗಳಲ್ಲಿ ನಟಿಸಲ್ಲ, ಸಿನಿಮಾಗಳತ್ತ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು.