Nayanthara: ಪತಿ ವಿಘ್ನೇಶ್ ಜತೆ ವಿದೇಶದಲ್ಲಿ ನಯನತಾರಾ ರೊಮ್ಯಾನ್ಸ್
ಪತಿ ವಿಘ್ನೇಶ್ ಶಿವನ್ ಜತೆ ಸ್ಪೇನ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ವಿಘ್ನೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ಬೋಲ್ಡ್ ಆಗಿದ್ದು ಬಗೆಬಗೆಯಲ್ಲಿ ಕಮೆಂಟ್ಗಳು ಬರುತ್ತಿವೆ.
Updated on: Aug 15, 2022 | 4:37 PM

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇತ್ತೀಚೆಗೆ ಮದುವೆ ಆದರು. ಪ್ರೀತಿಸಿ ಮದುವೆ ಆದ ಈ ಜೋಡಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಹನಿಮೂನ್ಗೆ ವಿದೇಶಕ್ಕೆ ತೆರಳಿದ್ದ ನಯನತಾರಾ-ವಿಘ್ನೇಶ್ ಮರಳಿ ಭಾರತಕ್ಕೆ ಬಂದಿದ್ದರು. ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಈಗ ನಯನತಾರಾ ಮರಳಿ ವಿದೇಶಕ್ಕೆ ಹಾರಿದ್ದಾರೆ.

ಪತಿ ವಿಘ್ನೇಶ್ ಶಿವನ್ ಜತೆ ಸ್ಪೇನ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ವಿಘ್ನೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ಬೋಲ್ಡ್ ಆಗಿದ್ದು ಬಗೆಬಗೆಯಲ್ಲಿ ಕಮೆಂಟ್ಗಳು ಬರುತ್ತಿವೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ 9ರಂದು ಮದುವೆ ಆದರು. ತಮಿಳುನಾಡಿನ ಮಹಾಬಲಿ ಪುರಂನಲ್ಲಿ ಇಬ್ಬರೂ ವಿವಾಹವಾದರು. ಶಾರುಖ್ ಖಾನ್, ರಜನಿಕಾಂತ್ ಸೇರಿ ಅನೇಕ ಸೆಲೆಬ್ರಿಟಿಗಳು ಈ ಮದುವೆಗೆ ಹಾಜರಿ ಹಾಕಿದ್ದರು. ಈ ಮದುವೆಯ ಫೋಟೋಗಳು ವೈರಲ್ ಆದವು. ಈಗ ವಿಘ್ನೇಶ್ ಹಾಗೂ ನಯನತಾರಾ ಸ್ಪೇನ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ.

ವಿಘ್ನೇಶ್ ಶಿವನ್ ಹಾಗೂ ನಯನತಾರಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಇವರ ಮದುವೆ ವಿಡಿಯೋದ ಪ್ರಸಾರ ಹಕ್ಕನ್ನು ದೊಡ್ಡ ಮೊತ್ತಕ್ಕೆ ನೆಟ್ಫ್ಲಿಕ್ಸ್ ಖರೀದಿ ಮಾಡಿದೆ. ಈ ವಿಡಿಯೋ ಒಟಿಟಿಯಲ್ಲಿ ಇನ್ನಷ್ಟೇ ಪ್ರಸಾರ ಕಾಣಬೇಕಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ನಯನತಾರಾ




