ಈ ವಾರ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು, ಇಲ್ಲಿದೆ ಪಟ್ಟಿ
OTT Release this week: ಪ್ರತಿ ವಾರದಂತೆ ಈ ವಾರವೂ ಸಹ ಹಲವು ಸಿನಿಮಾಗಳು ಒಟಿಟಿಗೆ ಬಂದಿವೆ. ಚಿತ್ರಮಂದಿರಗಳಲ್ಲಿಯೂ ಒಳ್ಳೆಯ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ‘ಸು ಫ್ರಂ ಸೋ’ ಸಿನಿಮಾ ಅಂತೂ ದಾಖಲೆಗಳನ್ನು ಬರೆಯುತ್ತಿದೆ. ಅದರ ನಡುವೆ ಈ ವಾರ ಕೆಲವು ಒಳ್ಳೆಯ ಸಿನಿಮಾಗಳು ಒಟಿಟಿಗೆ ಬಂದಿವೆ. ಈ ವಾರ ಒಟಟಿಗೆ ಬಂದ ಸಿನಿಮಾಗಳ ಪಟ್ಟಿ ಇಲ್ಲಿದೆ...
Updated on: Aug 02, 2025 | 3:36 PM

ಕನ್ನಡದ ನಟಿ ಚೈತ್ರಾ ಆಚಾರ್ ಮೊದಲ ಬಾರಿಗೆ ತಮಿಳಿನಲ್ಲಿ ನಟಿಸಿರುವ ಸಿನಿಮಾ ‘3 ಬಿಎಚ್ಕೆ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಸಿದ್ಧಾರ್ಥ್, ಶರತ್ ಕುಮಾರ್ ಈ ಸಿನಿಮಾನಲ್ಲಿದ್ದಾರೆ. ಸಿನಿಮಾ ಅನ್ನು ಸಿಂಪ್ಲಿ ಸೌಥ್ ಒಟಿಟಿಯಲ್ಲಿ ನೋಡಬೇಕಿದೆ.

ಜೇಸನ್ ಮೋಮಾ ನಟನೆಯ ‘ಚೀಫ್ ಆಫ್ ವಾರ್’ ವೆಬ್ ಸರಣಿ ಈ ವಾರ ಆಪಲ್ ಟಿವಿ ಪ್ಲಸ್ನಲ್ಲಿ ಬಿಡುಗಡೆ ಆಗಿದೆ. ಜೇಸಮ್ ಮೊಮಾ ಅವರ ಈ ವೆಬ್ ಸರಣಿ ಆಕ್ಷನ್ ಕತೆಯನ್ನು ಒಳಗೊಂಡಿದೆ.

ಅಕ್ಷಯ್ ಕುಮಾರ್, ರಿತೇಶ್ ದೇಶ್ಮುಖ್, ಅಭಿಷೇಕ್ ಬಚ್ಚನ್, ಸಂಜಯ್ ದತ್, ನಾನಾ ಪಾಟೇಕರ್, ಚಂಕಿ ಪಾಂಡೆ, ಜಾಕ್ವೆಲಿನ್ ಫರ್ನಾಂಡೀಸ್, ಇನ್ನೂ ಹಲವು ತಾರೆಯರು ನಟಿಸಿರುವ ಹಾಸ್ಯ ಸಿನಿಮಾ ‘ಹೌಸ್ಫುಲ್ 5’ ಈ ವಾರ ಪ್ರೈಂ ವಿಡಿಯೋನಲ್ಲಿ ತೆರೆಗೆ ಬಂದಿದೆ.

ರಕ್ತಚಂದನ (ರೆಡ್ ಸ್ಯಾಂಡಲ್ ವುಡ್) ಹೆಸರಿನ ತಮಿಳು ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. 2023 ರಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ಸುಮಾರು ಒಂದೂವರೆ ವರ್ಷದ ಬಳಿಕ ಒಟಿಟಿಗೆ ಬಂದಿದೆ. ಇಟಿವಿ ವಿನ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಆಮಿರ್ ಖಾನ್ ನಟಿಸಿ, ನಿರ್ಮಾಣ ಮಾಡಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಇದೇ ವಾರ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ. 100 ರೂಪಾಯಿ ಹಣ ನೀಡಿ ಯೂಟ್ಯೂಬ್ನಲ್ಲಿ ಸಿನಿಮಾವನ್ನು ಯಾರು ಬೇಕಾದರೂ ವೀಕ್ಷಿಸಬಹುದಾಗಿದೆ.

ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆದ ತೆಲುಗು ಸಿನಿಮಾ ‘ತಮ್ಮುಡು’ ಈ ವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಇದು ಕನ್ನಡದ ನಟಿ ಸಪ್ತಮಿ ಗೌಡ ಅವರ ಮೊದಲ ತೆಲುಗು ಸಿನಿಮಾ ಆಗಿದೆ.




