- Kannada News Photo gallery Padma Shri awardees Saalumarada Thimmakka, Sukri Bommagowda cast their votes
ಮತದಾನ ಮಾಡಿದ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ, ಸುಕ್ರಿ ಬೊಮ್ಮಗೌಡ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಬೆಳಗ್ಗೆಯಿಂದಲೇ ಮತದಾನ ನಡೆಯುತ್ತಿದೆ. ಈ ಹಿನ್ನೆಲೆ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಮತ್ತು ಸುಕ್ರಿ ಬೊಮ್ಮಗೌಡ ಅವರು ಮತಚಲಾಯಿಸಿದ್ದಾರೆ.
Updated on:May 11, 2023 | 4:41 PM

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಬೆಳಗ್ಗೆಯಿಂದಲೇ ಮತದಾನ ನಡೆಯುತ್ತಿದೆ. ಈ ಹಿನ್ನೆಲೆ ಶತಾಯುಷಿ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮಕ್ಕ ಅವರು ಮತಚಲಾಯಿಸಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಲಿಕಲ್ಲು ಗ್ರಾಮದ ಮತಗಟ್ಟೆಗೆ ತೆರಳಿ ಸಾಲುಮರದ ತಿಮಕ್ಕ ಅವರು ಮತದಾನ ಮಾಡಿದ್ದಾರೆ.

ತಮ್ಮ ಕುಟುಂಬದೊಂದಿಗೆ ಓಟ್ ಮಾಡಿರುವ ಸಾಲುಮರದ ತಿಮ್ಮಕ್ಕ, ಬಳಿಕ ಫೋಟೋಗೆ ಪೋಸ್ ನೀಡಿದ್ದ ಹೀಗೆ.

ಅದೇ ರೀತಿಯಾಗಿ ಮತ್ತೋರ್ವ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ಮತದಾನ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 182ರಲ್ಲಿ ಮತಚಲಾಯಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಊರ ಅಭಿವೃದ್ಧಿ ಮಾಡುವವರು ಆಯ್ಕೆಯಾಗಬೇಕು. ಹಾಲಕ್ಕಿ ಜನಾಂಗವನ್ನ ಎಸ್ಸಿ ಜೊತೆ ಸೇರಿಸುವಂತೆ ಸುಕ್ರಿ ಗೌಡ ಅಭಿಪ್ರಾಯ ಪಟ್ಟರು. ಮತ್ತು ಎಲ್ಲರೂ ಕಡ್ಡಾಯವಾಗಿ ಹಕ್ಕು ಚಲಾಯಿಸುವಂತೆ ಕರೆ ನೀಡಿದರು.
Published On - 5:03 pm, Wed, 10 May 23




