AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಹಲ್ಗಾಮ್ ಪ್ರವಾಸಿಗರಿಗೆ ಈಗ ‘QR’ ಕವಚ: ಸುರಕ್ಷತೆಗಾಗಿ ಜಮ್ಮು-ಕಾಶ್ಮೀರ ಸರ್ಕಾರದ ಹೈಟೆಕ್ ಹೆಜ್ಜೆ

ಸರಿಯಾಗಿ ಒಂದು ವರ್ಷದ ಹಿಂದೆ ಬೈಸರನ್ ಹುಲ್ಲುಗಾವಲು ಪ್ರವಾಸಿಗರ ರಕ್ತದಿಂದ ಕೆಂಪಾಗಿತ್ತು. ಆ ದುರಂತದ ನಂತರ ಪ್ರವಾಸಿಗರಲ್ಲಿ ಮೂಡಿದ್ದ ಆತಂಕವನ್ನು ಹೋಗಲಾಡಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು. ಕೇವಲ ಭದ್ರತಾ ಪಡೆಗಳನ್ನು ನಿಯೋಜಿಸುವುದು ಸಾಲದು, ಪ್ರತಿಯೊಬ್ಬ ಪ್ರವಾಸಿಗನಿಗೂ ತಾನು ಸುರಕ್ಷಿತ ವ್ಯಕ್ತಿಗಳ ನಡುವೆ ಇದ್ದೇನೆ ಎಂಬ ವಿಶ್ವಾಸ ಮೂಡಿಸಬೇಕಿತ್ತು. ಆ ವಿಶ್ವಾಸದ ಫಲವೇ ಈ QR ಕೋಡ್ ಆಧಾರಿತ ಗುರುತಿನ ಚೀಟಿ ವ್ಯವಸ್ಥೆ ಕಲ್ಪಿಸಲಾಗಿದೆ.

ನಯನಾ ರಾಜೀವ್
|

Updated on: Apr 21, 2026 | 10:04 AM

Share
ತಂತ್ರಜ್ಞಾನ ಮತ್ತು ಭದ್ರತೆಯ ಸಮ್ಮಿಲನ: ಪ್ರತಿಯೊಬ್ಬರ ಕೊರಳಲ್ಲಿ ರಾರಾಜಿಸುತ್ತಿರುವ ಈ QR ಕೋಡ್ ಆಧಾರಿತ ಐಡಿ ಕಾರ್ಡ್‌ಗಳು, ಪ್ರವಾಸಿಗರಿಗೆ ನೀಡಲಿವೆ 'ತ್ವರಿತ ಗುರುತಿಸುವಿಕೆ'ಯ ಭರವಸೆ. ಪಹಲ್ಗಾಮ್‌ನ ಅತ್ಯಂತ ಸುಂದರ ತಾಣವಾದ ಬೈಸರನ್ ಹುಲ್ಲುಗಾವಲಿನಲ್ಲಿ ಇನ್ನು ಮುಂದೆ ಯಾರೂ ಅನಾಮಧೇಯರಾಗಿ ಓಡಾಡುವಂತಿಲ್ಲ. ಕುದುರೆ ಸವಾರರು, ಗೈಡ್‌ಗಳು ಅಥವಾ ಸಣ್ಣ ವ್ಯಾಪಾರಿಗಳಾಗಲಿ - ಪ್ರತಿಯೊಬ್ಬರ ಕೊರಳಲ್ಲೂ ಈಗ ಒಂದು ವಿಶಿಷ್ಟ ಕ್ಯೂ ಆರ್ ಕೋಡ್ ಇರಲಿದೆ.

1 / 7
ಏಪ್ರಿಲ್ 22ರ ದುರಂತದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ, ಪಹಲ್ಗಾಮ್ ಅನ್ನು ಜಾಗತಿಕ ಮಟ್ಟದ ಸುರಕ್ಷಿತ ತಾಣವನ್ನಾಗಿ ಮಾಡುವ ಅಧಿಕಾರಿಗಳ ಮಹತ್ವದ ಹೆಜ್ಜೆ.

2 / 7
ಸುರಕ್ಷಿತ ವಾತಾವರಣದಲ್ಲಿ ನಿರಾತಂಕವಾಗಿ ಪ್ರಕೃತಿಯ ಸೌಂದರ್ಯ ಸವಿಯುತ್ತಿರುವ ಪ್ರವಾಸಿಗರು. ನಾವು ಕುಗ್ಗುವುದಿಲ್ಲ, ನಾವು ಸುಧಾರಿಸುತ್ತೇವೆ. ತಂತ್ರಜ್ಞಾನದ ಈ ಡಿಜಿಟಲ್ ಕವಚವು ಬೈಸರನ್ ಕಣಿವೆಯನ್ನು ಮತ್ತೆ ಪ್ರವಾಸಿಗರ ಸ್ವರ್ಗವನ್ನಾಗಿ ಮಾಡುತ್ತಿದೆ.

3 / 7
ಸ್ಥಳೀಯರ ಬೆಂಬಲ: "ಇದು ನಮ್ಮ ಸುರಕ್ಷತೆಗೂ ಅಗತ್ಯ"; ಪ್ರವಾಸೋದ್ಯಮವನ್ನು ಬಲಪಡಿಸಲು ಸರ್ಕಾರದ ಈ ಹೈಟೆಕ್ ಕ್ರಮವನ್ನು ಮುಕ್ತ ಮನಸ್ಸಿನಿಂದ ಸ್ಥಳೀಯ ವ್ಯಾಪಾರಿಗಳು ಸ್ವಾಗತಿಸಿದ್ದಾರೆ . ಕಳೆದ ವರ್ಷ ನಾವು ನಮ್ಮವರನ್ನು ಕಳೆದುಕೊಂಡೆವು, ಪ್ರವಾಸಿಗರನ್ನು ಕಳೆದುಕೊಂಡೆವು. ಆದರೆ ಈ ಹೊಸ ವ್ಯವಸ್ಥೆ ನಮಗೆ ಗೌರವ ಮತ್ತು ಸುರಕ್ಷತೆ ಎರಡನ್ನೂ ನೀಡಿದೆ ಎನ್ನುತ್ತಾರೆ ಸ್ಥಳೀಯರು

4 / 7
ಇದು ಕೇವಲ ಸುರಕ್ಷತೆಯಲ್ಲ, ಪ್ರವಾಸಿಗರು ಅನಧಿಕೃತ ವ್ಯಕ್ತಿಗಳಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸುವ ಒಂದು ಸ್ಮಾರ್ಟ್ ಫಿಲ್ಟರ್ ಕೂಡ ಹೌದು.

5 / 7
ಪ್ರವಾಸಿಗರು ತಮ್ಮ ಮೊಬೈಲ್ ಮೂಲಕ ಈ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ, ಅವರ ಹೆಸರು, ಫೋಟೋ ಮತ್ತು ಪೊಲೀಸ್ ವೆರಿಫಿಕೇಶನ್ ಆಗಿರುವ ದಾಖಲೆಗಳು ಕಣ್ಣಮುಂದೆ ಬರುತ್ತವೆ.

6 / 7
ಸೈನಿಕರ ಹದ್ದಿನ ಕಣ್ಣು: ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಹಿನ್ನೆಲೆಯನ್ನು ಖಚಿತಪಡಿಸಿಕೊಳ್ಳುತ್ತಿರುವ ದೃಶ್ಯ. ಈ ವ್ಯವಸ್ಥೆಯು ಕೇವಲ ಪ್ರವಾಸಿಗರಿಗೆ ಮಾತ್ರವಲ್ಲ, ಭದ್ರತಾ ಪಡೆಗಳಿಗೂ ದೊಡ್ಡ ಬಲ ನೀಡಿದೆ. ಸ್ಥಳೀಯ ಪೊಲೀಸರು ನಿಯತಕಾಲಿಕವಾಗಿ ಈ ಕೋಡ್‌ಗಳನ್ನು ಸ್ಕ್ಯಾನ್ ಮಾಡುತ್ತಾರೆ. ಇದರಿಂದ ಆ ಪ್ರದೇಶದಲ್ಲಿ ಇರುವ ಪ್ರತಿಯೊಬ್ಬ ಸೇವಾ ಪೂರೈಕೆದಾರನು ಅಧಿಕೃತನೇ ಅಥವಾ ಯಾರಾದರೂ ಸುಳ್ಳು ಗುರುತು ನೀಡಿ ನುಸುಳಿದ್ದಾರೆಯೇ ಎಂಬುದು ಕ್ಷಣಾರ್ಧದಲ್ಲಿ ತಿಳಿಯುತ್ತದೆ. ನೆಲದ ಮೇಲಿನ ಮಾನವ ಬುದ್ಧಿವಂತಿಕೆಗೆ ಈಗ ಡಿಜಿಟಲ್ ಬಲ ಸಿಕ್ಕಿದೆ.

7 / 7
Follow Us
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ

ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ

‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ

ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?

ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ

ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ

ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!

CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!

ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್

‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಮೆಚ್ಚಿದ ತನಿಷಾ