ಫೋಟೋ ಗ್ಯಾಲರಿ: ಬೆಂಗಳೂರಲ್ಲಿ ಮಹೇಶ್ ಬಾಬು ಒಡೆತನದ ಮಲ್ಟಿಪ್ಲೆಕ್ಸ್ ಹೇಗಿದೆ ನೋಡಿ..
ಜನವರಿ 16ರಂದು ಮೆಜೆಸ್ಟಿಕ್ ಸರ್ಕಲ್‌ನಲ್ಲಿ ‘ಎಎಂಬಿ ಸಿನಿಮಾಸ್’ (AMB Cinemas) ಉದ್ಘಾಟನೆ ಆಗಲಿದೆ. ಇದು ದಕ್ಷಿಣ ಭಾರತದ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ಆಗಿದೆ. ಈಗಾಗಲೇ ಹೈದರಾಬಾದ್‌ನಲ್ಲಿ ಅತ್ಯುತ್ತಮ ಸಿನಿಮಾ ಅನುಭವಕ್ಕೆ ‘ಎಎಂಬಿ ಸಿನಿಮಾಸ್’ ಹೆಸರಾಗಿದೆ. ಈಗ ಇದರ ಹೊಸ ಶಾಖೆ ಬೆಂಗಳೂರಿನಲ್ಲಿ ಆರಂಭ ಆಗುತ್ತಿದೆ.
Updated on: Jan 15, 2026 | 7:25 PM

ಬೆಂಗಳೂರಿನ ಮೆಜೆಸ್ಟಿಕ್ ಸರ್ಕಲ್‌ನಲ್ಲಿರುವ ಕಪಾಲಿ ಮಾಲ್‌ನಲ್ಲಿ ‘ಎಎಂಬಿ ಸಿನಿಮಾಸ್’ ಮಲ್ಟಿಪ್ಲೆಕ್ಸ್ ತಲೆಎತ್ತಿದೆ. ಇದರ ವಿಶೇಷತೆ ಏನೆಂದರೆ ಕಪಾಲಿ ಮಾಲ್‌ನ 5 ಮಹಡಿಗಳಲ್ಲಿ ಹರಡಿಕೊಂಡಿರುವ ಈ ಮಲ್ಟಿಪ್ಲೆಕ್ಸ್ ಒಟ್ಟು 9 ಪರದೆಗಳನ್ನು ಹೊಂದಿದೆ.

ಬಾರ್ಕೋ ಲೇಸರ್ ಪ್ರೊಜೆಕ್ಷನ್ ಇದೆ. ಇದರರಲ್ಲಿನ ಎಲ್ಲ 9 ಪರದೆಗಳಲ್ಲಿ ಅತ್ಯುತ್ತಮ ಬಣ್ಣ ಹಾಗೂ ದೃಶ್ಯ ಸ್ಪಷ್ಟತೆಗಾಗಿ ಬಾರ್ಕೋ ಲೇಸರ್ ಪ್ರೊಜೆಕ್ಷನ್ ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಸಿನಿಮಾ ವೀಕ್ಷಣೆಯ ವಿಶೇಷ ಅನುಭವ ನೀಡಲಿದೆ.

ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಇದು. ‘ಎಎಂಬಿ ಸಿನಿಮಾಸ್’ನಲ್ಲಿ ಸ್ಕ್ರೀನ್ 6 ವಿಶೇಷವಾಗಿದೆ. ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಪರದೆಯಾಗಿದೆ. ಇದು ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಹಾಗೂ ಇಮ್ಮರ್ಸಿವ್ ಸೌಂಡ್ ಹೊಂದಿದೆ.

ಪ್ರೇಕ್ಷಕರಿಗೆ ಐಷಾರಾಮಿ ಸೌಕರ್ಯ ನೀಡಲು ‘ಎಂ ಲಾಂಜ್’ ಎಂಬ ವಿಶೇಷ ಲಾಂಜ್ ಮತ್ತು ಆಸನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಪ್ರೇಕ್ಷಕರಿಗಾಗಿ ವಿಶೇಷವಾಗಿ ಆಯ್ಕೆ ಮಾಡಿದ ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಕೂಡ ಇದೆ.

ಹೈದರಾಬಾದ್‌ನಲ್ಲಿ ಈಗಾಗಲೇ ಯಶಸ್ಸು ಕಂಡಿರುವ ‘ಎಎಂಬಿ ಸಿನಿಮಾಸ್’ ಈಗ ಬೆಂಗಳೂರಿನ ಸಿನಿಮಾ ಪ್ರಿಯರಿಗೂ ಮತ್ತು ಗಣ್ಯರಿಗೂ ಒಂದು ಹೊಸ ಥರದ ಸಿನಿಮಾ ಅನುಭವವನ್ನು ನೀಡಲು ಸಿದ್ಧವಾಗಿದೆ. ಫೋಟೋಗಳು ಗಮನ ಸೆಳೆಯುತ್ತಿವೆ.

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್ ಇಂಟರ್ನೆಟ್) ಸಂಸ್ಥೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ.
Read More




