- Kannada News Photo gallery Pradeep Doddaiah starrer Out Of Syllabus Kannada movie releasing on 27th December Entertainment News in Kannada
ಡಿಸೆಂಬರ್ 27ರಂದು ಬಿಡುಗಡೆ ಆಗಲಿದೆ ‘ಔಟ್ ಆಫ್ ಸಿಲಬಸ್’ ಸಿನಿಮಾ
ಜಾಹೀರಾತು ಸಂಸ್ಥೆ ಮೂಲಕ ಸ್ಯಾಂಡಲ್ವುಡ್ ಜೊತೆ ನಿರಂತರ ನಂಟು ಹೊಂದಿರುವ ಪ್ರದೀಪ್ ದೊಡ್ಡಯ್ಯ ಅವರು ‘ಔಟ್ ಆಫ್ ಸಿಲಬಸ್’ ಚಿತ್ರದಲ್ಲಿ ನಟಿಸಿ, ನಿರ್ದೇಶನ ಮಾಡಿದ್ದಾರೆ. ಕನ್ನಡದ ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿ ಅನುಭವ ಪಡೆದ ಅವರು ಹೊಸ ಕಥೆಯನ್ನು ಪ್ರೇಕ್ಷಕರಿಗೆ ಹೇಳಲು ಸಜ್ಜಾಗಿದ್ದಾರೆ. ಡಿ27ಕ್ಕೆ ‘ಔಟ್ ಆಫ್ ಸಿಲಬಸ್’ ಸಿನಿಮಾ ತೆರೆಕಾಣಲಿದೆ.
Updated on: Dec 11, 2024 | 7:39 PM

ಶ್ರೀಮತಿ ವಿಜಯಕಲಾ ಸುಧಾಕರ್ ಮತ್ತು ತನುಷ್ ಎಸ್.ವಿ. ದೇಸಾಯಿ ಗೌಡ ಅವರು ಜಂಟಿಯಾಗಿ ‘ಔಟ್ ಫಸ್ ಸಿಲಬಸ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಯಿತು. ಯುವ ಜನರಿಗೆ ಟ್ರೇಲರ್ ಇಷ್ಟ ಆಗುತ್ತಿದೆ.

ಪ್ರದೀಪ್ ದೊಡ್ಡಯ್ಯ ‘ಔಟ್ ಆಫ್ ಸಿಲಬಸ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಟ್ರೇಲರ್ ರಿಲೀಸ್ ಮಾಡುವುದರ ಜೊತೆಗೆ ಸಿನಿಮಾದ ರಿಲೀಸ್ ದಿನಾಂಕವನ್ನು ಕೂಡ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಒಂದು ಇಂಟರೆಸ್ಟಿಂಗ್ ಕಥಾಹಂದರ ಈ ಸಿನಿಮಾದ ಟ್ರೇಲರ್ನಲ್ಲಿ ಇದೆ. ಕಾಲೇಜು ವಿದ್ಯಾರ್ಥಿಗಳನ್ನೇ ಕೇಂದ್ರವಾಗಿ ಇಟ್ಟುಕೊಂಡು ಹೆಣೆದಿರುವ ಕಥೆ ಈ ಸಿನಿಮಾದಲ್ಲಿ ಇದೆ ಎಂಬುದರ ಝಲಕ್ ಈ ಟ್ರೇಲರ್ನಲ್ಲಿ ಕಾಣಿಸಿದೆ. ಡಿಸೆಂಬರ್ 27ರಂದು ಈ ಸಿನಿಮಾ ರಿಲೀಸ್ ಆಗಲಿದೆ.

‘ಔಟ್ ಆಫ್ ಸಿಲಬಸ್’ ಸಿನಿಮಾದಲ್ಲಿ ಪ್ರದೀಪ್ ದೊಡ್ಡಯ್ಯ ಜೊತೆ ಹೃತಿಕಾ ಶ್ರೀನಿವಾಸ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅಚ್ಯುತ್ ಕುಮಾರ್, ರಾಮಕೃಷ್ಣ, ಚಿತ್ಕಲಾ ಬಿರಾದಾರ, ಯೋಗರಾಜ್ ಭಟ್, ಮಂಜು ಪಾವಗಡ, ಮಹಾಂತೇಶ್ ಹಿರೇಮಠ್ ಪಾತ್ರವರ್ಗದಲ್ಲಿ ಇದ್ದಾರೆ.

ದೇವ ವಡ್ಡೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಉಮೇಶ್ ಆರ್.ಬಿ. ಅವರ ಸಂಕಲನ ಈ ಚಿತ್ರಕ್ಕಿದೆ. ಮೋಟಿವೇಷನಲ್ ಸ್ಪೀಕರ್ ಆಗಿರುವ ಪ್ರದೀಪ್ ದೊಡ್ಡಯ್ಯ ಹಲವು ವರ್ಷಗಳಿಂದ ಚಿತ್ರರಂಗದ ಸಂಪರ್ಕದಲ್ಲಿದ್ದಾರೆ. ಈಗ ಅವರ ‘ಔಟ್ ಆಫ್ ಸಿಲಬಸ್’ ಚಿತ್ರ ಬರುತ್ತಿದೆ.














