Onion Powder: ಈರುಳ್ಳಿ ಪುಡಿಯನ್ನು ಎಷ್ಟು ದಿನಗಳ ಕಾಲ ಶೇಖರಿಸಿಡಬಹುದು
ಕಚೇರಿಗೆ ಹೋಗುವವರು ಬೆಳಗ್ಗೆ ಎದ್ದು ತರಕಾರಿ ಕತ್ತರಿಸುತ್ತಾ ಕುಳಿತರೆ ತಡವಾಗುತ್ತೆ ಎಂದು ಹಿಂದಿನ ದಿನ ರಾತ್ರಿಯೇ ಕತ್ತರಿಸಿಟ್ಟುಬಿಡುತ್ತಾರೆ.
Updated on: Oct 19, 2022 | 3:47 PM

ಕಚೇರಿಗೆ ಹೋಗುವವರು ಬೆಳಗ್ಗೆ ಎದ್ದು ತರಕಾರಿ ಕತ್ತರಿಸುತ್ತಾ ಕುಳಿತರೆ ತಡವಾಗುತ್ತೆ ಎಂದು ಹಿಂದಿನ ದಿನ ರಾತ್ರಿಯೇ ಕತ್ತರಿಸಿಟ್ಟುಬಿಡುತ್ತಾರೆ.

ಬೆಳಗ್ಗೆ ಎದ್ದ ತಕ್ಷಣವೇ ತರಕಾರಿಗಳನ್ನು ಕತ್ತರಿಸಿಟ್ಟರೆ ಮಧ್ಯಾಹ್ನದ ಅಡುಗೆ ಸುಲಭವಾಗುತ್ತದೆ. ಹಾಗೆಯೇ ಈರುಳ್ಳಿ ಪುಡಿ, ಶುಂಠಿ ಪೇಸ್ಟ್ ಹೀಗೆ ಅನೇಕ ಪದಾರ್ಥಗಳು ಸಿದ್ಧವಿದ್ದರೆ ಅಡುಗೆ ಮಾಡುವುದು ಮತ್ತಷ್ಟು ಸುಲಭವಾಗುತ್ತದೆ.

ತರಕಾರಿ ಏನೋ ಸರಿ ಆದರೆ ಈರುಳ್ಳಿಯನ್ನು ರಾತ್ರಿ ಕತ್ತರಿಸಿಟ್ಟರೆ ಬೆಳಗಾಗುವಷ್ಟರಲ್ಲಿ ವಾಸನೆ ಬರುತ್ತದೆ, ಅದರ ನಿಜವಾದ ಅಂಶವನ್ನು ಕಳೆದುಕೊಳ್ಳುತ್ತದೆ. ಬೆಳಗ್ಗೆ ಎದ್ದು ಹೆಚ್ಚಿದರೆ ಕೈಯೆಲ್ಲಾ ಈರುಳ್ಳಿ ವಾಸನೆ ಬರುತ್ತದೆ.

ಆದರೆ ಅದಕ್ಕೊಂದು ಉಪಾಯವಿದೆ, ಈರುಳ್ಳಿ ಪುಡಿ ಮಾಡಿಟ್ಟರೆ ತುಂಬಾ ದಿನಗಳ ಕಾಲ ಅದನ್ನು ಬಳಸಬಹುದು.

ಈರುಳ್ಳಿ ಪುಡಿ ಮಾಡುವುದು ಹೇಗೆ? ಮೊದಲು, ಈರುಳ್ಳಿಯನ್ನು ಕತ್ತರಿಸಿ, ನಂತರ 150 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ 40 ನಿಮಿಷಗಳ ಕಾಲ ಮೈಕ್ರೋವೇವ್‌ನಲ್ಲಿ ಇರಿಸಿ. ಅದರ ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು. ಒಣಗಿದ ಈರುಳ್ಳಿ ತುಂಡುಗಳನ್ನು ನೀರು ಇಲ್ಲದೆ ಒಣಗಿಸಿ. ನಂತರ ಒಣ ಈರುಳ್ಳಿ ತುಂಡುಗಳನ್ನು ರುಬ್ಬಿಕೊಳ್ಳಿ. ನೀರು ಇರದ ರೀತಿ ಎಚ್ಚರಿಕೆಯಿಂದ ಒಣಗಿಸಿ. ಇದನ್ನು ಮಿಕ್ಸಿಯಲ್ಲೂ ಪುಡಿ ಮಾಡಬಹುದು. ಹೀಗೆ ಮಾಡಿದ ಪೌಡರ್ ದೀರ್ಘಕಾಲ ಶೇಖರಿಸಿಡಬಹುದು. ಪದಾರ್ಥಗಳಿಗೆ ಬೇಕಾದಷ್ಟು ಪೌಡರ್ ಹಾಕುವುದರಿಂದ ಸಮಯ ಉಳಿತಾಯವಾಗುತ್ತದೆ ಮತ್ತು ಕೆಲಸ ಕಡಿಮೆಯಾಗುತ್ತದೆ.



















