ಆರೋಗ್ಯ ಕಾಪಾಡುವ ಫೈಬರ್ ದೇಹದಲ್ಲಿ ಕೊರತೆಯಾದರೆ ಉಂಟಾಗುವ ಸಮಸ್ಯೆಗಳು
ಆರೋಗ್ಯ ಸಲಹೆಗಳು: ಒಬ್ಬ ವ್ಯಕ್ತಿಯ ಸಂಪೂರ್ಣ ಆರೋಗ್ಯಕ್ಕಾಗಿ ಎಲ್ಲಾ ರೀತಿಯ ಪೋಷಕಾಂಶಗಳು ಅವಶ್ಯಕವಾಗಿವೆ. ಈ ಪೈಕಿ ಒಂದೇ ಒಂದು ಪೋಷಕಾಂಶ ದೇಹದಲ್ಲಿ ಕೊರತೆಯಾದರೆ ಅಪೌಷ್ಟಿಕತೆಯ ಸಮಸ್ಯೆ ತಲೆದೋರುತ್ತದೆ. ಹಾಗಿದ್ದರೆ ಫೈಬರ್ ಕೊರತೆ ಉಂಟಾದರೆ ಆಗುವ ಸಮಸ್ಯೆಗಳೇನು ಎಂಬುದನ್ನು ತಿಳಿಯೋಣ.
ಫೈಬರ್ ದೇಹಕ್ಕೆ ಅಗತ್ಯವಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ಈ ಫೈಬರ್ ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ದೇಹದಲ್ಲಿ ಫೈಬರ್ ಕೊರತೆಯಾದರೆ ನೀವು ಕೆಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಫೈಬರ್ ಕೊರತೆಯಾಗಿದೆ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿವೆ ನೋಡಿ ರೋಗಲಕ್ಷಣಗಳು.
1 / 6
ಮಲಬದ್ಧತೆ: ದೇಹದಲ್ಲಿ ಫೈಬರ್ ಕೊರತೆಯಿದ್ದರೆ ಮಲಬದ್ಧತೆ ಉಂಟಾಗುತ್ತದೆ. ಈ ಲಕ್ಷಣ ನಿಮ್ಮಲ್ಲಿ ಕಾಣಿಸಿಕೊಂಡರೆ ತಕ್ಷಣ ನಾರಿನಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. ಇಲ್ಲದಿದ್ದರೆ ದೇಹದ ತ್ಯಾಜ್ಯಗಳು ದೇಹದ ಭಾಗಗಳನ್ನು ತಲುಪಿ ಅನಾರೋಗ್ಯಕ್ಕೆ ಕಾರಣವಾಗಹುದು.
2 / 6
ಅಧಿಕ ತೂಕ: ದೇಹದ ಭಾಗಗಳಲ್ಲಿ ಕೊಬ್ಬಿನ ಶೇಖರಣೆ ಮತ್ತು ತೂಕ ಹೆಚ್ಚಾಗುತ್ತಿದೆ ಎಂದು ನೀವು ಭಾವಿಸಿದರೆ, ನಿಮ್ಮ ದೇಹದಲ್ಲಿ ಫೈಬರ್ ಕೊರತೆಯಿದೆ ಎಂದರ್ಥ. ನಾರಿನಂಶವಿರುವ ಆಹಾರಗಳನ್ನು ತೆಗೆದುಕೊಳ್ಳದಿದ್ದರೆ ಬೊಜ್ಜು ಸಮಸ್ಯೆ ಕಾಡುತ್ತದೆ.
3 / 6
ಆಯಾಸ: ಕೆಲಸದ ಅಲ್ಪ ಸಮಯದಲ್ಲಿ ನಿಮ್ಮ ದೇಹ ದಣಿಯುತ್ತಿದ್ದರೆ ಅದಕ್ಕೆ ಫೈಬರ್ ಅಂಶ ಕೊರತೆಯೇ ಕಾರಣ.
4 / 6
ರಕ್ತದಲ್ಲಿನ ಸಕ್ಕರೆ ಮಟ್ಟ: ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಏರುತ್ತಿದ್ದರೆ, ಅದಕ್ಕೆ ಕಾರಣವಾದ ಅಂಗಳಲ್ಲಿ ನಾರಿನ ಕೊರತೆಯೂ ಒಂದು.
5 / 6
ಅದಾಗ್ಯೂ, ಫೈಬರ್ ಕೊರತೆಯನ್ನು ಹೋಗಲಾಡಿಸಲು ಬಾದಾಮಿ, ಚಿಯಾ ಬೀಜಗಳು, ಪೇರಳೆ, ಹಸಿರು ಬಟಾಣಿ, ಬಾಳೆಹಣ್ಣು, ಕ್ಯಾರೆಟ್, ದಾಳಿಂಬೆ, ಸಿಹಿ ಗೆಣಸು, ಸೇಬು, ಅಂಜೂರ, ಬಿಳಿಬದನೆ, ಈರುಳ್ಳಿ, ಪಪ್ಪಾಯಿಯಂತಹ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು. ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.