- Kannada News Photo gallery Radhe Shyam actress Pooja Hegde shares beautiful lehenga pics on social media
Pooja Hegde: ಲೆಹೆಂಗಾ ಧರಿಸಿ ಮಿಂಚಿದ ನಟಿ ಪೂಜಾ ಹೆಗ್ಡೆ; ಕರಾವಳಿ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ
ನಟಿ ಪೂಜಾ ಹೆಗ್ಡೆ ಅವರು ಬಹುಭಾಷೆಯಲ್ಲಿ ಫೇಮಸ್ ಆಗಿದ್ದಾರೆ. ಟಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಅವರು ಮಿಂಚುತ್ತಿದ್ದಾರೆ. ಈ ಕರಾವಳಿ ಬೆಡಗಿಯ ಫ್ಯಾಷನ್ ಸೆನ್ಸ್ ಎಲ್ಲರಿಗೂ ಇಷ್ಟ. ಇತ್ತೀಚೆಗೆ ಅವರು ಲೆಹೆಂಗಾ ಧರಿಸಿ ಪೋಸ್ ನೀಡಿದ್ದಾರೆ. ಆ ಫೋಟೋಗಳು ವೈರಲ್ ಆಗಿವೆ.
Updated on: Nov 12, 2021 | 11:45 AM

Radhe Shyam actress Pooja Hegde shares beautiful lehenga pics on social media

Radhe Shyam actress Pooja Hegde shares beautiful lehenga pics on social media

ಅಲ್ಲು ಅರ್ಜುನ್ ಜೊತೆ ನಟಿಸಿದ ‘ಅಲಾ ವೈಕುಂಟಪುರಮುಲೋ’ ಸಿನಿಮಾದಿಂದ ಪೂಜ ಹೆಗ್ಡೆಗೆ ಕಳೆದ ವರ್ಷ ಭರ್ಜರಿ ಗೆಲುವು ಸಿಕ್ಕಿತ್ತು. ಈ ವರ್ಷ ಅವರ ‘ಮೋಸ್ಟ್ ಎಲಿಜಬಲ್ ಬ್ಯಾಚುಲರ್’ ಚಿತ್ರ ಕೂಡ ಗೆದ್ದಿದೆ.

ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿರುವ ‘ರಾಧೆ ಶ್ಯಾಮ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 2022ರ ಜ.14ರಂದು ಈ ಚಿತ್ರ ರಿಲೀಸ್ ಆಗಿಲಿದೆ. ಈಗಾಗಲೇ ಟೀಸರ್ಗಳು ಹೈಪ್ ಸೃಷ್ಟಿಸಿವೆ.

ಬಹುನಿರೀಕ್ಷಿತ ‘ಆಚಾರ್ಯ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ರಾಮ್ ಚರಣ್ಗೆ ಜೋಡಿ ಆಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಎರಡನೇ ಸಾಂಗ್ ರಿಲೀಸ್ ಆಗಿ, ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

ದೊಡ್ಡ ಗ್ಯಾಪ್ ಬಳಿಕ ಪೂಜಾ ಹೆಗ್ಡೆ ಅವರು ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ. ಈ ಚಿತ್ರದ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.



















