- Kannada News Photo gallery Raksha Bandhan 2024 : Look at these brothers and sisters who have achieved success at a young age Kannada News
Raksha Bandhan 2024 : ಇವರೇ ನೋಡಿ ಭಾರತದ ಅತ್ಯಂತ ಸುಂದರ ಅಣ್ಣ-ತಂಗಿ
ಇಂದು ರಕ್ಷಾಬಂಧನ ಸಂಭ್ರಮವು ಎಲ್ಲೆಡೆ ಮನೆ ಮಾಡಿದೆ. ರಕ್ಷಾ ಬಂಧನವೆಂದರೆ ರಾಖಿ ಕಟ್ಟಿ ಸಂಭ್ರಮಿಸುವ ದಿನವಷ್ಟೇ ಅಲ್ಲ. ಸಹೋದರನು ಸಹೋದರಿಯನ್ನು ಪ್ರೀತಿಯಿಂದ ರಕ್ಷಣೆ ಮಾಡುವುದಾಗಿದೆ. ನಮ್ಮ ಸುತ್ತ ಮುತ್ತಲಿನಲ್ಲಿ ಸ್ನೇಹಿತರಂತೆ ಇರುವ ಅಣ್ಣ ತಂಗಿಯರನ್ನು ನೋಡಿರಬಹುದು..ಆದರೆ ಈ ಕೆಲವು ಸಹೋದರ ಸಹೋದರಿಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
Updated on: Aug 19, 2024 | 1:46 PM

ಸುಧಾ ಮೂರ್ತಿ ಹಾಗೂ ಶ್ರೀನಿವಾಸ ಕುಲಕರ್ಣಿ; ಇನ್ಫೋಸಿಸ್ ಫೌಂಡೇಶನ್ ಸ್ಥಾಪಕ ಹಾಗೂ ಅಧ್ಯಕ್ಷರಾದ ಸುಧಾ ಮೂರ್ತಿ ಎಲ್ಲರಿಗೂ ಚಿರಪರಿಚಿತರು. ಉತ್ತಮ ವಾಗ್ಮಿಯಾಗಿ ಮತ್ತು ಬರಹಗಾರರಾಗಿ ಗುರುತಿಸಿಕೊಂಡವರು. ಆದರೆ ಇವರ ಸಹೋದರ ಶ್ರೀನಿವಾಸ ಕುಲಕರ್ಣಿಯವರು ಖಗೋಳಶಾಸ್ತ್ರದಲ್ಲಿ ಸಾಧನೆ ಮಾಡಿದ್ದಾರೆ. ಇವರ ಈ ಸಾಧನೆಗೆ ಈಗಾಗಲೇ ಹಲವಾರು ಪ್ರಶಸ್ತಿಗಳು ಬಂದಿದೆ. ಹೀಗಾಗಿ ಈ ಸಹೋದರ ಸಹೋದರಿಯರು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿ ಉಳಿದವರಿಗೆ ಮಾದರಿಯಾಗಿದ್ದಾರೆ.

ತಾರಾ ಮತ್ತು ನಿಖಿಲ್ ವಿಶ್ವನಾಥನ್: ಪೋಷಕರ ವ್ಯಾಪಾರದ ಕಲೆಯನ್ನು ತಾವೂ ಮೈಗೂಡಿಸಿಕೊಂಡು ಇಂದು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಅಣ್ಣ ತಂಗಿ ಜೋಡಿಯೆಂದರೆ ಅದುವೇ ತಾರಾ ಮತ್ತು ನಿಖಿಲ್ ವಿಶ್ವನಾಥನ್. ಇಬ್ಬರೂ ಕೂಡ ವಿಶಿಷ್ಟ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ವ್ಯಕ್ತಿಗಳು. ನಿಖಿಲ್ ಅವರು ಮೈಕ್ರೋಸಾಫ್ಟ್ ಆಫ್ ಬ್ಲಾಕ್‌ಚೈನ್’ ಎಂದು ಕರೆಯುವ ಆಲ್ಕೆಮಿ ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ. ಇತ್ತ ಇವರ ತಂಗಿ ತಾರಾ ಕೂಡ ರೂಪಾ ಹೆಲ್ತ್ ಎಂಬ ಅವರದ್ದೇ ಕಂಪನಿ ನಿರ್ಮಿಸಿದ್ದಾರೆ. ಆರೋಗ್ಯ ರಕ್ಷಣೆಯಲ್ಲಿ ಇವರ ಕಂಪನಿಯು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ.

ಎಲ್. ಲಕ್ಷ್ಮಣನ್ ಹಾಗೂ ಎಲ್. ಸೂರ್ಯಾ: ಅಥ್ಲೆಟಿಕ್ಸ್ ನಲ್ಲಿ ಸಾಧನೆಗೈದವರಲ್ಲಿ ಸಹೋದರ ಸಹೋದರಿಯ ಎಲ್. ಲಕ್ಷ್ಮಣನ್ ಹಾಗೂ ಎಲ್. ಸೂರ್ಯಾ. ತಮಿಳುನಾಡಿನವರಾದ ಈ ಸಹೋದರ ಸಹೋದರಿಯೂ 2015 ರಲ್ಲಿ ಫೆಡರೇಶನ್ ಕಪ್ ಅಥ್ಲೆಟಿಕ್ಸ್‌ನ ಅಂತಿಮ ದಿನದ ಪುರುಷ ಹಾಗೂ ಮಹಿಳಾ ವಿಭಾಗದ 10 ಸಾವಿರ ಮೀ. ಓಟದಲ್ಲಿ ಇಬ್ಬರೂ ಚಿನ್ನವನ್ನು ಗೆದ್ದಿದ್ದರು. ಹೀಗಾಗಿ ಸಣ್ಣ ವಯಸ್ಸಿಗೆ ಒಬ್ಬರಿಗೆ ಒಬ್ಬರು ಬೆಂಬಲ ನೀಡುತ್ತ ಯಶಸ್ಸಿನ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಸ್ತುತಿ ಗುಪ್ತಾ ಮತ್ತು ಅಗ್ನಿಮ್ ಗುಪ್ತಾ: ಆಯುರ್ವೇದ ವ್ಯವಹಾರದಲ್ಲಿ ನಷ್ಟ ಕಂಡಿದ್ದ ಸಮಯದಲ್ಲಿ ಸ್ತುತಿ ಗುಪ್ತಾ ಮತ್ತು ಅಗ್ನಿಮ್ ಗುಪ್ತಾ ಈ ಅಣ್ಣ ತಂಗಿಯರಿಬ್ಬರೂ ತಂದೆಗೆ ಬೆಂಬಲವಾಗಿ ನಿಂತರು. ಅಮೃತಮ್ ಸಂಸ್ಥೆಯೂ ಒಂದು ದಶಕದಿಂದ ವೈದ್ಯಕೀಯ ವೃತ್ತಿಪರರಿಗೆ ಗಿಡಮೂಲಿಕೆ ಔಷಧಿಗಳನ್ನು ಪೂರೈಸುತ್ತಿತ್ತು. ಈ ಸಂಸ್ಥೆಯಲ್ಲಿ ಈ ಅಣ್ಣ ತಂಗಿ ಜೋಡಿಯೂ ಪ್ರೀಮಿಯಂ ವೈಯಕ್ತಿಕ ಮತ್ತು ಹೆಲ್ತ್ ಕೇರ್ ಒಟಿಸಿ ಉತ್ಪನ್ನಗಳನ್ನು ಪರಿಚಯಿಸಿದರು. ಸೋಶಿಯಲ್ ಮೀಡಿಯಾ ಹಾಗೂ ಆನ್ಲೈನ್ ಕಾರ್ಯತಂತ್ರಗಳ ಮೂಲಕ ಮಾರುಕಟ್ಟೆಯಲ್ಲಿ ಮತ್ತೆ ಮರು ಬ್ರ್ಯಾಂಡ್ ಸೃಷ್ಟಿಸಿದರು.

ರಣವೀರ್ ಸಿಂಗ್ ಮತ್ತು ಸೋನಂ ಕಪೂರ್: ಹಿಂದಿ ಸಿನಿಮಾರಂಗದಲ್ಲಿ ಬಹಳ ಸ್ಟೈಲಿಶ್ ಆಗಿ ಕಾಣುವ ಒಡಹುಟ್ಟಿದ ಜೋಡಿಗಳಲ್ಲಿ ರಣವೀರ್ ಸಿಂಗ್ ಮತ್ತು ಸೋನಂ ಕಪೂರ್ ಒಬ್ಬರಾಗಿದ್ದಾರೆ. ಡೈನಾಮಿಕ್ ಹಾಗೂ ಸ್ಟೈಲಿಶ್ ಆಗಿರುವ ರಣವೀರ್ ಸಿಂಗ್ ಮತ್ತು ಸೋನಂ ಕಪೂರ್ ಬಾಲಿವುಡ್‌ನ ತಮ್ಮ ವಿಭಿನ್ನ ಹಾಗೂ ಆಕರ್ಷಕ ಉಡುಗೆಗಳಿಂದ ಗಮನ ಸೆಳೆಯುತ್ತಾರೆ.



















