- TV9 Kannada Photo gallery Ramayana Trailer Unveiled in Auspicious Brahmi Muhurta Rama Ravana And Seetha Character Unveiled
‘ರಾಮಾಯಣ’ ಟ್ರೇಲರ್: ರಾಮ-ಸೀತೆ-ರಾವಣನ ಪರಿಚಯಿಸಿದ ನಿರ್ದೇಶಕ ನಿತೇಶ್ ತಿವಾರಿ
ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಭವ್ಯ ಟ್ರೇಲರ್ ಇಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿರುವ ಈ ಚಿತ್ರದ ಮೊದಲ ಝಲಕ್ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದ್ದು, ವಿಶ್ಯುಯಲ್ ವೈಭವ ಹಾಗೂ ಪಾತ್ರಧಾರಿಗಳ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Updated on: Jul 30, 2026 | 7:05 AM

ಟ್ರೇಲರ್ನಲ್ಲಿ ರಾಜ ದಶರಥನಾಗಿ ಅರುಣ್ ಗೋವಿಲ್ ಕಾಣಿಸಿಕೊಂಡಿದ್ದಾರೆ. ಹಿರಿಯ ನಟನ ಗಾಂಭೀರ್ಯತೆ ಕಣ್ಣಿಗೆ ಕಟ್ಟುವಂತಿದೆ. ಈ ಮೊದಲು ಪ್ರಸಾರ ಕಂಡಿದ್ದ ‘ರಾಮಾಯಣ’ ಧಾರಾವಾಹಿಯಲ್ಲಿ ಅವರು ರಾಮನ ಪಾತ್ರ ಮಾಡಿದ್ದರು. ಈಗ ದಶರಥ ಆಗಿದ್ದಾರೆ.

ಲಂಕೇಶ್ವರ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕ್ರೂರ ಹಾಗೂ ಶಕ್ತಿಶಾಲಿ ಲುಕ್ ಮೈ ನವಿರೇಳಿಸುವಂತಿದೆ. ಅವರ ಅಬ್ಬರದ ಧ್ವನಿ, ರೌದ್ರಾವತಾರದ ನಟನೆ ಮತ್ತು ದೃಶ್ಯಗಳ ಹಿನ್ನೆಲೆ ಸಂಗೀತ ಪ್ರೇಕ್ಷಕರಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಪ್ರಭು ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರ ದಿವ್ಯ ರೂಪ ಮತ್ತು ಶಾಂತ ಸ್ವಭಾವದ ನಟನೆ ಮನಸೂರೆಗೊಳ್ಳುವಂತಿದೆ. ಧನುರ್ಧಾರಿಯಾಗಿ ನಿಲ್ಲುವ ಅವರ ದೃಶ್ಯಗಳು ಹಾಗೂ ಮರ್ಯಾದಾ ಪುರುಷೋತ್ತಮನ ತೇಜಸ್ಸು ಪ್ರತಿಯೊಬ್ಬರಿಗೂ ಭಕ್ತಿಯ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ರಣಬೀರ್ ಅವರ ಅಭಿನಯ ಅತ್ಯಂತ ಪ್ರಭಾವಶಾಲಿಯಾಗಿ ಮೂಡಿಬಂದಿದೆ. ಯುದ್ಧಭೂಮಿಯಲ್ಲಿ ಧರ್ಮ ಸಂಸ್ಥಾಪನೆಗಾಗಿ ಸಾಗುವ ಅವರ ರಣರೋಚಕ ಸಾಹಸ ದೃಶ್ಯಗಳು ಇಡೀ ಟ್ರೇಲರ್ನ ಹೈಲೈಟ್ ಆಗಿ ಗಮನ ಸೆಳೆಯುತ್ತವೆ.

ಜಗನ್ಮಾತೆ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅವರ ಪಾತ್ರ ಅದ್ಭುತವಾಗಿ ಮೂಡಿಬಂದಿದೆ. ಅವರ ಕಣ್ಣುಗಳಲ್ಲಿನ ಕಾಂತಿ ಹಾಗೂ ಭಾವನಾತ್ಮಕ ನಟನೆ ಗಮನ ಸೆಳೆದಿದೆ. ಈ ಚಿತ್ರಕ್ಕಾಗಿ ಮೇಕಪ್ ಮಾಡಿದ್ದಾರೆ ಅನ್ನೋದು ವಿಶೇಷ.




