ಮೈಸೂರಿನಲ್ಲಿ ಅಪರೂಪದ ಹಳೆಯ ನಾಣ್ಯಗಳು ಹಾಗೂ ನೋಟುಗಳ ಪ್ರದರ್ಶನ: ಖುಷಿಯಾದ ಜನರು
ಮೈಸೂರಿನ ಅಶೋಕ ರಸ್ತೆಯ ವಾಸವಿ ಕಲ್ಯಾಣಮಂಟಪದಲ್ಲಿ ಹಳೆಯ ನೋಟು ನಾಣ್ಯಗಳ ಪ್ರದರ್ಶನ ಆಯೋಜಿಸಲಾಗಿತ್ತು. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮುಂಬೈ, ದೆಹಲಿ, ಯುಪಿಯಿಂದ ಆಗಮಿಸಿದ ನಾಣ್ಯ ಸಂಗ್ರಹಕಾರರು ಆಗಮಿಸಿ ತಮ್ಮ ಬಳಿ ಇದ್ದ ಹಳೆಯ ನಾಣ್ಯ ನೋಟುಗಳ ಪ್ರದರ್ಶನ ಮಾಡಿದರು. ಹಳೆಯ ಕಾಲದ ನಾಣ್ಯಗಳನ್ನು ನೋಟುಗಳನ್ನು ನೋಡಿ ಜನರು ಅಚ್ಚರಿಗೊಂಡರು.
Updated on: Sep 03, 2023 | 7:12 PM

ಏನೇ ತಂತ್ರಜ್ಞಾನ ಬಂದರೂ, ಆಧುನಿಕತೆ ಭರಾಟೆ ನಡುವೆಯೂ ಓಲ್ಡ್ ಇಸ್ ಗೋಲ್ಡ್ ಅನ್ನೋ ಮಾತು ಸರ್ವಕಾಲಕ್ಕೂ ಸತ್ಯವಾದದ್ದು ಇದಕ್ಕೆ ಸಾಕ್ಷಿಯಾಗಿದ್ದು ಮೈಸೂರಿನಲ್ಲಿ ನಡೆದ ಹಳೆ ನಾಣ್ಯಗಳ ಹಾಗೂ ನೋಟುಗಳ ಪ್ರದರ್ಶನ.

ಮೈಸೂರಿನ ಅಶೋಕ ರಸ್ತೆಯ ವಾಸವಿ ಕಲ್ಯಾಣಮಂಟಪದಲ್ಲಿ ಹಳೆಯ ನೋಟು ನಾಣ್ಯಗಳ ಪ್ರದರ್ಶನ ಆಯೋಜಿಸಲಾಗಿತ್ತು.

ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮುಂಬೈ, ದೆಹಲಿ, ಯುಪಿಯಿಂದ ಆಗಮಿಸಿದ ನಾಣ್ಯ ಸಂಗ್ರಹಕಾರರು ಆಗಮಿಸಿ ತಮ್ಮ ಬಳಿ ಇದ್ದ ಹಳೆಯ ನಾಣ್ಯ ನೋಟುಗಳ ಪ್ರದರ್ಶನ ಮಾಡಿದ್ರು.

ಪ್ರದರ್ಶನ ಸಾಕಷ್ಟು ಆಕರ್ಷಕವಾಗಿತ್ತು. ರಾಜರ ಕಾಲದ ಚಿನ್ನದ ನಾಣ್ಯ, ಬೆಳ್ಳಿ ನಾಣ್ಯಗಳ ಪ್ರದರ್ಶನ, ಒಂದು ರೂಪಾಯಿ, ಎರಡು ರೂಪಾಯಿ, ಐದು ರೂಪಾಯಿ ಹೊಸ ನೋಟುಗಳ ಬಂಡಲ್, ಭಿನ್ನ ವಿಭಿನ್ನವಾದ ಹಳೆಯ ನೋಟುಗಳು, 1 ಆಣೆ 2 ಆಣೆ ಐದು ಪೈಸೆ 10 ಪೈಸೆ ನಾಣ್ಯಗಳು ಎಲ್ಲರ ಗಮನ ಸೆಳೆದವು.

ಮಕ್ಕಳು ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಹಳೆಯ ಕಾಲದ ನಾಣ್ಯಗಳನ್ನು ನೋಟುಗಳನ್ನು ನೋಡಿ ಅಚ್ಚರಿಗೊಂಡರು. ಹಳೆಯ ಕಾಲದ ನೋಟು ನಾಣ್ಯಗಳನ್ನು ನೋಡಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ರು.

ಇದು ಮೈಸೂರಿನಲ್ಲಿ ಮೊದಲ ಪ್ರದರ್ಶನವಾಗಿದ್ದು ಜನರ ಉತ್ಸಾಹ ನೋಡಿ ಇಲ್ಲಿ ಮತ್ತಷ್ಟು ಪ್ರದರ್ಶನ ಆಯೋಜಿಸಲು ಚಿಂತನೆ ನಡೆಸಿದ್ದಾರೆ.

ಆಧುನಿಕತೆಯ ನಡುವೆಯೂ ಜನರಿಗೆ ಹಳೆಯ ನೆನಪು ತರುವ ವಸ್ತುಗಳು ತುಂಬಾ ಇಷ್ಟವಾಗುತ್ತವೇ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.



