- Kannada News Photo gallery Rashmika Mandanna And her Sister Shiman Mandanna Looks fabulous in New Photos
ಮದುವೆಯ ಹೊಸ ಫೋಟೋ ಶೇರ್ ಮಾಡಿದ ರಶ್ಮಿಕಾ-ವಿಜಯ್; ಸಖತ್ ಕಲರ್ಫುಲ್
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಆಗಿ ಹಲವು ದಿನಗಳು ಕಳೆದಿವೆ. ಆದಾಗ್ಯೂ ಸೋಶಿಯಲ್ ಮೀಡಿಯಾದಲ್ಲಿ ಇವರ ಸಂಭ್ರಮ ಇನ್ನೂ ಕಡಿಮೆ ಆಗಿಲ್ಲ. ವಿವಿಧ ರೀತಿಯ ಫೋಟೋಗಳನ್ನು ಒಂದೊಂದಾಗಿಯೇ ಹಂಚಿಕೊಳ್ಳಲಾಗುತ್ತಿದೆ. ಫೆಬ್ರವರಿ 25ರಂದು ನಡೆದ ಶಾಸ್ತ್ರಗಳ ಫೋಟೋಗಳನ್ನು ದಂಪತಿ ಹಂಚಿಕೊಂಡಿದ್ದಾರೆ.
Updated on: Mar 11, 2026 | 7:37 AM

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಫೆಬ್ರವರಿ 26ರಂದು ಅದ್ದೂರಿಯಾಗಿ ನಡೆಯಿತು. ಉದಯಪುರದಲ್ಲಿ ಮದುವೆ ಶಾಸ್ತ್ರಗಳು ನೆರವೇರಿದವು. ಈ ಫೋಟೋಗಳನ್ನು ರಶ್ಮಿಕಾ ಈ ಮೊದಲು ಹಂಚಿಕೊಂಡಿದ್ದರು.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಅವರು ವಿವಾಹಪೂರ್ವ ಶಾಸ್ತ್ರಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೆಬ್ರವರಿ 25ರಂದು ಒಂದಷ್ಟು ಶಾಸ್ತ್ರಗಳು ನಡೆದಿದ್ದವು. ಅವುಗಳ ಫೋಟೋಗಳನ್ನು ರಶ್ಮಿಕಾ ರಿವೀಲ್ ಮಾಡಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಫ್ರೆಂಡ್ಸ್ ಗ್ಯಾಂಗ್ ಜೊತೆ ಒಂದೇ ರೀತಿಯಲ್ಲಿ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಭಿನ್ನ ಭಿನ್ನ ಫೋಟೋಗಳನ್ನು ಹಂಚಿಕೊಂಡು ಮಿಂಚಿದ್ದಾರೆ.

ರಶ್ಮಿಕಾ ಅವರು ವಿವಾಹದ ಬಗ್ಗೆ ಅನೇಕ ರೀತಿಯ ಕನಸುಗಳನ್ನು ಕಂಡಿದ್ದರು. ಆ ಕನಸುಗಳನ್ನು ಈಡೇರಿಸಿಕೊಂಡಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಮದುವೆಗೆ ಕೋಟಿ ಕೋಟಿ ಖರ್ಚು ಮಾಡಿದ್ದಾರೆ.

ಫೆಬ್ರವರಿ 26 ರಶ್ಮಿಕಾ ಪಾಲಿಗೆ ಯಾವಾಗಲೂ ವಿಶೇಷ ದಿನವಾಗಿಯೇ ಉಳಿಯಲಿದೆ. ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ. ರಶ್ಮಿಕಾ ಯುವರಾಣಿ ರೀತಿ ಕಂಗೊಳಿಸುತ್ತಿದ್ದರು ಎಂದು ಅನೇಕರು ಹೇಳಿದ್ದಾರೆ.




