- Kannada News Photo gallery Rashmika Mandanna Shares Dubai trip Photo Fans Says are you with vijay Devarakonda
Rashmika Mandanna: ದುಬೈನಲ್ಲಿ ನಿಂತು ಪೋಸ್ ನೀಡಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳಿಗೆ ಶುರುವಾಯ್ತು ಅನುಮಾನ
Rashmika Mandanna: ರಶ್ಮಿಕಾ ಮಂದಣ್ಣ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು ದುಬೈಗೆ ತೆರಳಿದ್ದಾರೆ. ಹೋಟೆಲ್ ಒಂದರಲ್ಲಿ ತಂಗಿರುವ ಅವರು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.
Updated on:Feb 20, 2023 | 11:01 AM

ನಟಿ ರಶ್ಮಿಕಾ ಮಂದಣ್ಣ ಅವರು ಗೆಲುವಿನ ಖುಷಿಯಲ್ಲಿದ್ದಾರೆ. ಅವರ ನಟನೆಯ ‘ವಾರಿಸು’ ಹಾಗೂ ‘ಮಿಷನ್ ಮಜ್ನು’ ಸಿನಿಮಾ ಗೆದ್ದಿವೆ. ಈ ಮಧ್ಯೆ ರಶ್ಮಿಕಾ ಮಂದಣ್ಣ ಅವರು ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು ದುಬೈಗೆ ತೆರಳಿದ್ದಾರೆ. ಹೋಟೆಲ್ ಒಂದರಲ್ಲಿ ತಂಗಿರುವ ಅವರು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

‘ನಾನು ಶಕ್ತಿಶಾಲಿ’ ಎಂಬ ರೀತಿಯಲ್ಲಿ ರಶ್ಮಿಕಾ ಮಂದಣ್ಣ ಅವರು ಪೋಸ್ ನೀಡಿದ್ದಾರೆ. ‘ನನ್ನ ಫ್ರೆಂಡ್ಸ್ ಪೋಸ್ ನೀಡು ಎಂದಾಗ ನಾನು ಮಾಡೋದು ಹೀಗೆ’ ಎಂದು ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್ಗೆ 26 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ರಶ್ಮಿಕಾ ಮಂದಣ್ಣ ಅವರು ದುಬೈ ಟ್ರಿಪ್ಗೆ ಹೋಗಿದ್ದು ಯಾರ ಜೊತೆ ಎನ್ನುವ ಅನುಮಾನ ಶುರುವಾಗಿದೆ. ಕೆಲವರು ವಿಜಯ್ ದೇವರಕೊಂಡ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಸದ್ಯ ‘ಪುಷ್ಪ 2’ ಹಾಗೂ ‘ಅನಿಮಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
Published On - 10:15 am, Mon, 20 February 23




