- Kannada News Photo gallery Rashmika Mandanna Vijay Deverakonda Reception DK Shivakumar Allu Arjun attend
ರಶ್ಮಿಕಾ, ವಿಜಯ್ ಆರತಕ್ಷತೆಯಲ್ಲಿ ಡಿಕೆಶಿ, ರಾಮ್ ಚರಣ್, ಅಲ್ಲು ಅರ್ಜುನ್: ಫೋಟೋ ಗ್ಯಾಲರಿ ನೋಡಿ..
ಹೈದರಾಬಾದ್ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದಾರೆ. ಸಿನಿಮಾ, ರಾಜಕೀಯ, ಉದ್ಯಮ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ. ವಿರೋಶ್ ಆರತಕ್ಷತೆ ಕಾರ್ಯಕ್ರಮದ ಫೋಟೋಗಳು ಲಭ್ಯವಾಗಿವೆ. ಕಲರ್ಫುಲ್ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ..
Updated on: Mar 04, 2026 | 10:09 PM

ಉದಯಪುರದಲ್ಲಿ ಕೇವಲ ಆಪ್ತರು ಮತ್ತು ಕುಟುಂಬದರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅವರು ಈಗ ಬಹಳ ಗ್ರ್ಯಾಂಡ್ ಆಗಿ ಹೈದರಾಬಾದ್ನಲ್ಲಿ ರಿಸೆಪ್ಷನ್ ಮಾಡಿಕೊಂಡಿದ್ದಾರೆ.

ಎರಡೂ ಕುಟುಂಬದವರು ಜೊತೆಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದಾರೆ. ಕನ್ನಡ, ತಮಿಳು, ಹಿಂದಿ, ತೆಲುಗು ಮುಂತಾದ ಭಾಷೆಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಕರ್ನಾಟಕದ ಹಲವು ಗಣ್ಯರಿಗೆ ಕೂಡ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಆರತಕ್ಷತೆಯ ಆಹ್ವಾನ ನೀಡಲಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಬಂದು ಶುಭ ಕೋರಿದ್ದಾರೆ.

ನಾನಿ, ರಾಮ್ ಚರಣ್, ನಾಗಾರ್ಜುನ, ವೆಂಕಟೇಶ್, ಶರತ್ ಕುಮಾರ್ ಮುಂತಾದ ಕಲಾವಿದರು ಆರತಕ್ಷತೆಗೆ ಬಂದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿರುವ ಈ ಜೋಡಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಭದ್ರತೆಯ ದೃಷ್ಟಿಯಿಂದ ಕೇವಲ ಆಹ್ವಾನ ಇದ್ದರಿಗೆ ಮಾತ್ರ ಈ ಆರತಕ್ಷತೆಗೆ ಕಾರ್ಯಕ್ರಮಕ್ಕೆ ಎಂಟ್ರಿ ನೀಡಲಾಗಿದೆ. ಈಗಾಗಲೇ ಅಭಿಮಾನಿಗಳಿಗಾಗಿ ಹಲವು ಕಡೆಗಳಲ್ಲಿ ಅನ್ನದಾನ ಮತ್ತು ಸಿಹಿ ವಿತರಣೆ ಮಾಡಲಾಗಿದೆ.

ಚಿತ್ರರಂಗದ ಅನೇಕರ ಜೊತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರಿಗೆ ಒಡನಾಟ ಇದೆ. ಅಲ್ಲು ಅರ್ಜುನ್, ಸುಕುಮಾರ್, ಚಿರಂಜೀವಿ, ರವಿತೇಜ ಮುಂತಾದ ಸೆಲೆಬ್ರಿಟಿಗಳು ಬಂದು ನವಜೋಡಿಗೆ ವಿಶ್ ಮಾಡಿದ್ದಾರೆ.

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್ ಇಂಟರ್ನೆಟ್) ಸಂಸ್ಥೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ.
Read More




