- Kannada News Photo gallery Mahalakshmi | Ravindar Chandrasekaran reportedly gave gifts worth Crores of Rupees to wife Mahalakshmi
Mahalakshmi: ಮುದ್ದಿನ ಪತ್ನಿ ಮಹಾಲಕ್ಷ್ಮಿಗೆ ದುಬಾರಿ ಗಿಫ್ಟ್ ನೀಡಿದ್ರಾ ಪತಿ ರವೀಂದರ್ ಚಂದ್ರಶೇಖರನ್?
Mahalakshmi Ravindar Chandrasekaran: ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್ ದಂಪತಿ ಈಗ ನೆಟ್ಟಿಗರ ಹಾಟ್ ಟಾಪಿಕ್ ಆಗಿದ್ದಾರೆ. ಎಲ್ಲೆಲ್ಲೂ ಇವರ ಬಗ್ಗೆಯೇ ಚರ್ಚೆ ಆಗುತ್ತಿದೆ.
Updated on:Sep 08, 2022 | 9:38 AM

Ravindar Chandrasekaran reportedly gave gifts worth Crores of Rupees to wife Mahalakshmi

Ravindar Chandrasekaran reportedly gave gifts worth Crores of Rupees to wife Mahalakshmi

ಮಹಾಲಕ್ಷ್ಮಿ ಮತ್ತು ರವೀಂದರ್ ಚಂದ್ರಶೇಖರನ್ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. ಏಕಾಏಕಿ ಮದುವೆ ಆಗುವ ಮೂಲಕ ಅವರಿಬ್ಬರು ಸರ್ಪ್ರೈಸ್ ನೀಡಿದ್ದಾರೆ. ಮಹಾಲಕ್ಷ್ಮಿ ಅವರಿಗೆ 32 ವರ್ಷ ವಯಸ್ಸು. 38ರ ಪ್ರಾಯದ ರವೀಂದರ್ ಚಂದ್ರಶೇಖರ್ ಜತೆ ಅವರ ಕಲ್ಯಾಣ ನೆರವೇರಿದೆ.

ಮುದ್ದಿನ ಪತ್ನಿ ಮಹಾಲಕ್ಷ್ಮಿಗೆ ರವೀಂದರ್ ಚಂದ್ರಶೇಖರ್ ಅವರು ದುಬಾರಿ ಗಿಫ್ಟ್ಗಳನ್ನು ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಭರಣ, ಸೀರೆ, ಬಂಗಲೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಗಿಫ್ಟ್ ಕುರಿತು ಹಬ್ಬಿರುವ ಗಾಸಿಪ್ ಬಗ್ಗೆ ಸದ್ಯಕ್ಕೆ ಈ ಜೋಡಿ ಪ್ರತಿಕ್ರಿಯೆ ನೀಡಿಲ್ಲ. ಆ ಬಗ್ಗೆ ಅವರಿಂದಲೇ ಸ್ಪಷ್ಟನೆ ಸಿಗಲಿ ಎಂದು ನೆಟ್ಟಿಗರು ಕಾದಿದ್ದಾರೆ. ಇನ್ನೊಂದು ವರ್ಗದ ಜನರು ಈ ಜೋಡಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
Published On - 8:17 am, Thu, 8 September 22




