Mahalakshmi: ಮುದ್ದಿನ ಪತ್ನಿ ಮಹಾಲಕ್ಷ್ಮಿಗೆ ದುಬಾರಿ ಗಿಫ್ಟ್​ ನೀಡಿದ್ರಾ ಪತಿ ರವೀಂದರ್ ಚಂದ್ರಶೇಖರನ್​?

Mahalakshmi Ravindar Chandrasekaran: ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್​ ದಂಪತಿ ಈಗ ನೆಟ್ಟಿಗರ ಹಾಟ್​ ಟಾಪಿಕ್​ ಆಗಿದ್ದಾರೆ. ಎಲ್ಲೆಲ್ಲೂ ಇವರ ಬಗ್ಗೆಯೇ ಚರ್ಚೆ ಆಗುತ್ತಿದೆ.

TV9 Web
| Updated By: Digi Tech Desk

Updated on:Sep 08, 2022 | 9:38 AM

ತಮಿಳು ಕಿರುತೆರೆಯಲ್ಲಿ ಫೇಮಸ್​ ಆದವರು ಮಹಾಲಕ್ಷ್ಮಿ. ನಿರೂಪಕಿಯಾಗಿ ಹಾಗೂ ನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಅವರ ಎರಡನೇ ಮದುವೆ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.

Ravindar Chandrasekaran reportedly gave gifts worth Crores of Rupees to wife Mahalakshmi

1 / 5
ನಿರ್ಮಾಪಕ ರವೀಂದರ್ ಚಂದ್ರಶೇಖರನ್​ ಜೊತೆ ಮಹಾಲಕ್ಷ್ಮಿ ಅವರು ಮದುವೆ ಆಗಿದ್ದಾರೆ. ಇದು ಇಬ್ಬರಿಗೂ ಎರಡನೇ ವಿವಾಹ. ಸೋಶಿಯಲ್​ ಮೀಡಿಯಾದಲ್ಲಿ ಈ ಜೋಡಿಯ ಫೋಟೋಗಳು ವೈರಲ್​ ಆಗಿವೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Ravindar Chandrasekaran reportedly gave gifts worth Crores of Rupees to wife Mahalakshmi

2 / 5
ಮಹಾಲಕ್ಷ್ಮಿ ಮತ್ತು ರವೀಂದರ್ ಚಂದ್ರಶೇಖರನ್​ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. ಏಕಾಏಕಿ ಮದುವೆ ಆಗುವ ಮೂಲಕ ಅವರಿಬ್ಬರು ಸರ್ಪ್ರೈಸ್​ ನೀಡಿದ್ದಾರೆ. ಮಹಾಲಕ್ಷ್ಮಿ ಅವರಿಗೆ 32 ವರ್ಷ ವಯಸ್ಸು. 38ರ ಪ್ರಾಯದ ರವೀಂದರ್ ಚಂದ್ರಶೇಖರ್​ ಜತೆ ಅವರ ಕಲ್ಯಾಣ ನೆರವೇರಿದೆ.

3 / 5
ಮುದ್ದಿನ ಪತ್ನಿ ಮಹಾಲಕ್ಷ್ಮಿಗೆ ರವೀಂದರ್ ಚಂದ್ರಶೇಖರ್​ ಅವರು ದುಬಾರಿ ಗಿಫ್ಟ್​ಗಳನ್ನು ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಭರಣ, ಸೀರೆ, ಬಂಗಲೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

4 / 5
ಗಿಫ್ಟ್​ ಕುರಿತು ಹಬ್ಬಿರುವ ಗಾಸಿಪ್​ ಬಗ್ಗೆ ಸದ್ಯಕ್ಕೆ ಈ ಜೋಡಿ ಪ್ರತಿಕ್ರಿಯೆ ನೀಡಿಲ್ಲ. ಆ ಬಗ್ಗೆ ಅವರಿಂದಲೇ ಸ್ಪಷ್ಟನೆ ಸಿಗಲಿ ಎಂದು ನೆಟ್ಟಿಗರು ಕಾದಿದ್ದಾರೆ. ಇನ್ನೊಂದು ವರ್ಗದ ಜನರು ಈ ಜೋಡಿಯನ್ನು ಟ್ರೋಲ್​ ಮಾಡುತ್ತಿದ್ದಾರೆ.

5 / 5

Published On - 8:17 am, Thu, 8 September 22

Follow us