AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raw Mango Benefits: ಬೇಸಿಗೆಯಲ್ಲಿ ಹಸಿ ಮಾವು ತಿನ್ಬೇಕಂತೆ; ಯಾಕೆ ಗೊತ್ತಾ?

ಬೇಸಿಗೆ ಆರಂಭವಾಗುತ್ತಿದ್ದಂತೆ, ಮಾವಿನ ಹಣ್ಣು, ಮಾವಿನ ಕಾಯಿ ಸೀಸನ್‌ ಕೂಡಾ ಪ್ರಾರಂಭವಾಗುತ್ತದೆ. ಇದೀಗ ಮಾವಿನ ಸೀಸನ್‌ ಪ್ರಾರಂಭವಾಗಿದ್ದು, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರೂ ಮಾವುಗಳೇ ಕಾಣಸಿಗುತ್ತಿವೆ. ಮಾವಿನ ಹಣ್ಣನ್ನು ತಿನ್ನುವ ಹಾಗೆ ಮಾವಿನಕಾಯಿಯನ್ನು ಕೂಡಾ ಬೇಸಿಗೆಯಲ್ಲಿ ತಿನ್ಬೇಕಂತೆ. ಉಪ್ಪು, ಖಾರ ಹಾಕಿ ತಿನ್ನುವ ಹಸಿ ಮಾವು ನಾಲಿಗೆ ರುಚಿ ಮಾತ್ರವಲ್ಲದೆ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಹಾಗಿದ್ರೆ ಈ ಬೇಸಿಗೆಯಲ್ಲಿ ಮಾವಿನಕಾಯಿ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ.

ಮಾಲಾಶ್ರೀ ಅಂಚನ್​
| Edited By: |

Updated on: Apr 21, 2025 | 5:56 PM

Share
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಜೀವಸತ್ವಗಳು, ಖನಿಜಗಳು, ಫೈಬರ್  ಮತ್ತು ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ ನಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿದ ಹಸಿ ಮಾವು ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೇಸಿಗೆಯಲ್ಲಿ ನಿಯಮಿತವಾಗಿ ಹಸಿ ಮಾವು ಸೇವಿಸುವುದರಿಂದ ದೇಹದ ರೋಧನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಇದು ಶೀತ, ಕೆಮ್ಮು ಮತ್ತು ಸೋಂಕಿನಂತಹ ಸಮಸ್ಯೆಗಳಿಂದಲೂ ರಕ್ಷಿಸುತ್ತದೆ.

1 / 5
ಶಾಖದ ಹೊಡೆತದಿಂದ ರಕ್ಷಣೆ: ಬೇಸಿಗೆಯಲ್ಲಿ ಶಾಖದ ಹೊಡೆತ ಕೂಡಾ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಸಾಕಷ್ಟು ನೀರನ್ನು ಕುಡಿಯುವುದರ ಜೊತೆಗೆ ದೇಹವನ್ನು ತಂಪಾಗಿಡಲು ಸಹಾಯ ಮಾಡುವ ಆಹಾರಗಳನ್ನು ಸೇವಿಸಬೇಕು. ಹಾಗಿರುವಾಗ ನೀವು ಹಸಿ ಮಾವನ್ನು ಸೇವನೆ ಮಾಡಬಹುದು. ಇದು ದೇಹವನ್ನು ತಂಪಾಗಿಸುವುದರ ಜೊತೆಗೆ ಇದರಲ್ಲಿರುವ ಎಲೆಕ್ಟ್ರೋಲೈಟ್‌ ಅಂಶಗಳು ದೇಹದಲ್ಲಿ ನೀರಿನ ಅಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

2 / 5
ಜೀರ್ಣಕ್ರಿಯೆಗೆ ಸಹಕಾರಿ: ಹಸಿ ಮಾವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಫೈಬರ್ ಮತ್ತು ಪೆಕ್ಟಿನ್,  ನಾರಿನಾಂಶವನ್ನು ಹೊಂದಿದ್ದು,  ಇದು ಮಲಬದ್ಧತೆ, ಆಮ್ಲೀಯತೆ ಮತ್ತು ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ.  ಉಪ್ಪು ಮತ್ತು ಮೆಣಸಿನ ಪುಡಿಯೊಂದಿಗೆ ಹಸಿ ಮಾವನ್ನು ಸೇವನೆ ಮಾಡುವ ಮೂಲಕ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ವೇಗಗೊಳಿಸಬಹುದು.

3 / 5
ಮೂಳೆಗಳನ್ನು ಬಲಪಡಿಸಲು ಸಹಕಾರಿ: ಹಸಿ ಮಾವು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದ್ದು, ಇದು ಮೂಳೆ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ನೀವು ಹಸಿ ಮಾವು ಸೇವಿಸಿದರೆ, ನಿಮ್ಮ ಮೂಳೆಗಳು ಬಲಗೊಳ್ಳುತ್ತವೆ. ಇದರಲ್ಲಿರುವ ಪೊಟ್ಯಾಸಿಯಂ ಹೃದಯದ ಆರೋಗ್ಯಕ್ಕೂ ಸಹಕಾರಿಯಾಗಿದೆ. ಅಲ್ಲದೆ ಇದು ತೂಕ ಇಳಿಕೆಗೂ ಸಹಕಾರಿಯಾಗಿದೆ.

4 / 5
ಜಲಸಂಚಯನ: ಈ ಬೇಸಿಗೆಯ ಸುಡುವ ಶಾಖದಲ್ಲಿ, ದೇಹವನ್ನು ಹೈಡ್ರೇಟ್‌ ಆಗಿರಿಸುವುದು ತುಂಬಾನೇ ಮುಖ್ಯ. ಹಾಗಿರುವಾಗ ನೀವು ಹಸಿ ಮಾವನ್ನು ಸೇವನೆ ಮಾಡಬಹುದು. ಇದರಲ್ಲಿ ಸಾಕಷ್ಟು ನೀರಿನಾಂಶವಿದ್ದು, ಇದು ದೇಹವನ್ನು ಉಲ್ಲಾಸಕರ ಮತ್ತು ಹೈಡ್ರೇಟಿಂಗ್‌ ಆಗಿಡಲು ಸಹಾಯ ಮಾಡುತ್ತದೆ. ಹುಳಿ ಇರುವ ಕಾರಣ ಮಾವಿನ ಕಾಯಿಯನ್ನು ಹಾಗೆಯೇ ತಿನ್ನಲು ಇಷ್ಟವಿಲ್ಲದಿದ್ದರೆ, ಆಮ್‌ ಪನ್ನಾ, ಮಾವಿನಕಾಯಿ ಚಟ್ನಿ, ಸ್ಮೂಥಿ, ಸಲಾಡ್‌ ತಯಾರಿಸಿ ಈ ರೂಪದಲ್ಲೂ ಮಾವಿನಕಾಯಿ ಸೇವಿಸಬಹುದು.

5 / 5
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ

ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ

ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?

ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು

ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?

‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ

ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!

‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು

ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ