AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Upendra New House: ಉಪೇಂದ್ರ-ಪ್ರಿಯಾಂಕಾ ದಂಪತಿಯ ಹೊಸ ಮನೆ ಹೇಗಿದೆ? ಇಲ್ಲಿದೆ ನೋಡಿ ಫೋಟೋ ಗ್ಯಾಲರಿ

Upendra Home Photos: ಬೆಂಗಳೂರಿನಲ್ಲಿ ಉಪೇಂದ್ರ ಅವರು ಹೊಸ ಮನೆ ಖರೀದಿಸಿದ್ದಾರೆ. ಇತ್ತೀಚೆಗೆ ಗೃಹಪ್ರವೇಶ ಮಾಡಲಾಗಿದೆ. ಆ ಶುಭ ಸಂದರ್ಭದ ಒಂದಷ್ಟು ಫೋಟೋಗಳು ಲಭ್ಯವಾಗಿವೆ.

ಮದನ್​ ಕುಮಾರ್​
|

Updated on:Apr 20, 2023 | 3:01 PM

Share
ಉಪೇಂದ್ರ ಅವರ ಜೀವನದಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗೆ ಬಿಡುಗಡೆ ಆದ ‘ಕಬ್ಜ’ ಸಿನಿಮಾ ಗೆ​ಲುವು ಕಂಡಿತು. ಈಗ ಅವರು ಹೊಸ ಮನೆ ಕೊಂಡುಕೊಂಡಿದ್ದಾರೆ.

1 / 10
ಹಲವು ವರ್ಷಗಳಿಂದ ಕತ್ತರಿಗುಪ್ಪೆಯ ಮನೆಯಲ್ಲಿ ಉಪೇಂದ್ರ ಕುಟುಂಬ ವಾಸವಾಗಿತ್ತು. ಈಗ ಅವರು ಬೇರೆ ಏರಿಯಾಗೆ ಶಿಫ್ಟ್​ ಆಗುತ್ತಿದ್ದಾರೆ.

2 / 10
ಉಪೇಂದ್ರ ಚಿತ್ರರಂಗದಲ್ಲಿ ನಟನಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಇಷ್ಟಪಟ್ಟು ಕತ್ತರಿಗುಪ್ಪೆಯಲ್ಲಿ ಉಪೇಂದ್ರ ಮನೆ ಕಟ್ಟಿಸಿದ್ದರು. ಈಗ ಬೆಂಗಳೂರಿನಲ್ಲೇ ಇನ್ನೊಂದು ಐಷಾರಾಮಿ ಮನೆ ಖರೀದಿ ಮಾಡಿದ್ದಾರೆ.

3 / 10
ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಗಳು, ರಾಜಕಾರಣಿಗಳು, ಉದ್ಯಮಿಗಳು ವಾಸವಿರುವ ಬೆಂಗಳೂರಿನ ಸದಾಶಿವ ನಗರದಲ್ಲಿ ಉಪೇಂದ್ರ ಹೊಸ ಮನೆಯೊಂದನ್ನು ಖರೀದಿ ಮಾಡಿರುವುದು ಸುದ್ದಿ ಆಗಿದೆ.

4 / 10
ಹೊಸ ಮನೆ ಖರೀದಿ ಮಾಡಬೇಕು ಎಂಬುದು ಉಪೇಂದ್ರ ಅವರ ಬಹುದಿನಗಳ ಆಲೋಚನೆ ಆಗಿತ್ತು. ಸದಾಶಿವ ನಗರದಲ್ಲಿ ಮನೆಯೊಂದು ಮಾರಾಟಕ್ಕಿರುವ ವಿಷಯ ತಿಳಿಯುತ್ತಿದ್ದಂತೆಯೇ ಅವರು ವ್ಯವಹಾರ ಮುಗಿಸಿದ್ದಾರೆ.

5 / 10
ಏಪ್ರಿಲ್​ 15ರಂದು ಒಳ್ಳೆಯ ದಿನವಾಗಿದ್ದರಿಂದ ಉಪ್ಪಿ ಕುಟುಂಬದವರು ಸರಳವಾಗಿ ಪೂಜಾ ಮಾಡಿ ಹೊಸ ಮನೆಯ ಗೃಹಪ್ರವೇಶವನ್ನು ಮಾಡಿದ್ದಾರೆ. ಈ ಫೋಟೋಗಳು ಲಭ್ಯವಾಗಿವೆ.

6 / 10
ಉಪೇಂದ್ರ ಅವರ ಹೊಸ ಮನೆಯ ಗೃಹ ಪ್ರವೇಶಕ್ಕೆ ಗೆಳೆಯರಾದ ಗುರುಕಿರಣ್, ಮುರಳಿ ಮುಂತಾದವರು ಹಾಜರಿ ಹಾಕಿದ್ದರು. ಉಪೇಂದ್ರ-ಪ್ರಿಯಾಂಕಾ ದಂಪತಿ ಪೂಜೆ ನೆರವೇರಿಸಿದ್ದಾರೆ.

7 / 10
ಗೃಹ ಪ್ರವೇಶವಾಗಿದ್ದರೂ ಮನೆ ಕೆಲಸ ಇನ್ನೂ ಪೂರ್ಣವಾಗಿಲ್ಲ. ಮನೆಯಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ತುಸು ಬದಲಾವಣೆಗಳನ್ನು ಈ ದಂಪತಿ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

8 / 10
ಕೆಲಸಗಳು ಇನ್ನೂ ಬಾಕಿ ಇವೆಯಾದರೂ ದಿನ ಒಳ್ಳೆಯದಿತ್ತೆಂಬ ಕಾರಣಕ್ಕೆ ಗೃಹ ಪ್ರವೇಶವನ್ನು ಸರಳವಾಗಿ ಮಾಡಿ ಮುಗಿಸಲಾಗಿದೆ. ಆದರೆ ಕುಟುಂಬವು ಈ ಮನೆಗೆ ಶಿಫ್ಟ್ ಆಗಲು ಇನ್ನಷ್ಟು ಸಮಯ ಹಿಡಿಯಲಿದೆ.

9 / 10
ಕತ್ತರಿಗುಪ್ಪೆಯಲ್ಲಿ ಇರುವ ಉಪೇಂದ್ರ ಅವರ ಹಳೇ ಮನೆ ಏನಾಗಲಿದೆ ಎಂಬ ಕುತೂಹಲ ಹಲವರಲ್ಲಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

10 / 10

Published On - 3:01 pm, Thu, 20 April 23

Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ

Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​

ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ

ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ