- Kannada News Photo gallery Saif Ali Khan likely to start second innings as villain after his Ravan role in Adipurush become famous
Sai Ali Khan: ‘ಆದಿಪುರುಷ್’ ಚಿತ್ರದಲ್ಲಿ ಸೈಫ್ ಅಲಿ ಖಾನ್ ನಟನೆಗೆ ಮೆಚ್ಚುಗೆ; ಶುರುವಾಗುತ್ತಾ ಎರಡನೇ ಇನ್ನಿಂಗ್ಸ್
Adipurush Movie: ಹಿಂದಿ ಚಿತ್ರರಂಗದ ಹೀರೋಗಳು ದಕ್ಷಿಣ ಭಾರತದ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿ ಫೇಮಸ್ ಆದ ಉದಾಹರಣೆ ಸಾಕಷ್ಟಿದೆ. ಈಗ ಸೈಫ್ ಅಲಿ ಖಾನ್ ಅವರು ರಾವಣನ ಪಾತ್ರ ಮಾಡಿ ಮಿಂಚುತ್ತಿದ್ದಾರೆ.
Updated on: Jun 17, 2023 | 7:00 AM

ನಟ ಸೈಫ್ ಅಲಿ ಖಾನ್ ಅವರು ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ‘ಆದಿಪುರುಷ್’ ಸಿನಿಮಾದಲ್ಲಿ ಮಾಡಿರುವ ರಾವಣನ ಪಾತ್ರ ಗಮನ ಸೆಳೆಯುತ್ತಿದೆ.

ಬಾಲಿವುಡ್ ನಟರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರ ಮಾಡಿ ಫೇಮಸ್ ಆದ ಉದಾಹರಣೆ ತುಂಬಾ ಇದೆ. ಈಗ ಸೈಫ್ ಅಲಿ ಖಾನ್ ಅವರು ರಾವಣನ ಪಾತ್ರದಿಂದ ಮೆಚ್ಚುಗೆ ಗಳಿಸಿದ್ದಾರೆ.

‘ಆದಿಪುರುಷ್’ ಚಿತ್ರದಲ್ಲಿ ರಾಮನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಅವರ ಎದುರು ಪ್ರಭಾಸ್ ಅವರು ಲಂಕೇಶ್ವರನಾಗಿ ಅಬ್ಬರಿಸಿದ್ದಾರೆ. ಇಬ್ಬರ ನಡುವಿನ ಯುದ್ಧದ ದೃಶ್ಯಗಳು ಅದ್ದೂರಿಯಾಗಿವೆ.

ರಾವಣನ ಪಾತ್ರವನ್ನು ಓಂ ರಾವತ್ ಅವರು ವಿಶೇಷ ರೀತಿಯಲ್ಲಿ ತೋರಿಸಿದ್ದಾರೆ. ಭಿನ್ನವಾದ ಮ್ಯಾನರಿಸಂ ಮೂಲಕ ಸೈಫ್ ಅಲಿ ಖಾನ್ ಅವರು ಆ ಪಾತ್ರವನ್ನು ನಿಭಾಯಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿದ್ದಾರೆ.

ಈ ಪಾತ್ರ ಹೈಲೈಟ್ ಆಗಿರುವುದರಿಂದ ಮುಂದಿನ ಸಿನಿಮಾಗಳಲ್ಲಿ ಸೈಫ್ ಅಲಿ ಖಾನ್ ಅವರಿಗೆ ನೆಗೆಟಿವ್ ಪಾತ್ರಗಳ ಆಫರ್ ಹೆಚ್ಚುವ ಸಾಧ್ಯತೆ ಇದೆ. ದಕ್ಷಿಣದಲ್ಲಿ ಅವರು ಸೆಕೆಂಡ್ ಇನ್ನಿಂಗ್ಸ್ ಶುರುಮಾಡುವ ಲಕ್ಷಣ ಕಾಣಿಸಿದೆ.



















