Rinku Rajguru: ಸೈರಾಟ್ ಚೆಲುವೆ ರಿಂಕು ಈಗ ಹೀಗೆ ಬದಲಾಗಿದ್ದಾರೆ ನೋಡಿ
ಸೈರಾಟ್ ಸಿನಿಮಾದ ನಾಯಕಿ ರಿಂಕು ರಾಜ್ಗುರು ಈಗ ಹೀಗಾಗಿದ್ದಾರೆ. ತೂಕ ಇಳಿಸಿಕೊಂಡು ಬಾಲಿವುಡ್ ನಟಿಯಂತೆ ಸಪೂರವಾಗಿದ್ದಾರೆ.
Updated on: Mar 20, 2023 | 11:00 PM

ಸೈರಾಟ್ ಸಿನಿಮಾದ ನಾಯಕಿ ರಿಂಕು ರಾಜ್ಗುರು ಈಗ ಹೀಗಾಗಿದ್ದಾರೆ. ತೂಕ ಇಳಿಸಿಕೊಂಡು ಬಾಲಿವುಡ್ ನಟಿಯಂತೆ ಸಪೂರವಾಗಿದ್ದಾರೆ.

ನಟಿಸಿದ ಮೊದಲ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡ ನಟಿ ರಿಂಕು. ನಾಯಕಿ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ (ತೀರ್ಪುಗಾರರ ವಿಶೇಷ ಪ್ರಶಸ್ತಿ) ಪಡೆದ ಕಡಿಮೆ ವಯಸ್ಸಿನ ನಟಿಯೂ ಹೌದು ರಿಂಕು.

9ನೇ ತರಗತಿಯಲ್ಲಿದ್ದಾಗಲೇ ಸೈರಾಟ್ ಸಿನಿಮಾಕ್ಕೆ ನಾಯಕಿಯಾಗಿ ನಟಿಸಿದ್ದರು ರಿಂಕು ರಾಜ್ಗುರು ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು.

ಸೈರಾಟ್ ಸಿನಿಮಾದಿಂದ ಭಾರಿ ದೊಡ್ಡ ಜನಪ್ರಿಯತೆಗಳಿಸಿದ ರಿಂಕು ಆ ಬಳಿಕ ಅದೇ ಸಿನಿಮಾದ ಕನ್ನಡ ರೀಮೇಕ್ ಆದ ಮನಸ್ಸು ಮಲ್ಲಿಗೆಯಲ್ಲಿ ನಟಿಸಿದರು.

ಇದೀಗ ಸಾಲು-ಸಾಲು ಮರಾಠಿ ಹಾಗೂ ಹಿಂದಿ ಸಿನಿಮಾಗಳಲ್ಲಿ ರಿಂಕು ರಾಜ್ಗುರು ನಟಿಸುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿಯೂ ಸಕ್ರಿಯವಾಗಿರುವ ರಿಂಕು ತಮ್ಮ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



