ಹೀಗಿತ್ತು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಯುಗಾದಿ: ಚಿತ್ರಗಳ ನೋಡಿ
Sandalwood celebrities: ಇಂದು ರಾಜ್ಯದಾದ್ಯಂತ ಸಂಭ್ರಮ, ಸಡಗರದಿಂದ ಯುಗಾದಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಕನ್ನಡದ ಹಲವು ಸಿನಿಮಾ ಸೆಲೆಬ್ರಿಟಿಗಳು ಸಹ ಕುಟುಂಬದವರೊಟ್ಟಿಗೆ ಸೇರಿಕೊಂಡು ಯುಗಾದಿ ಹಬ್ಬ ಆಚರಣೆ ಮಾಡಿದ್ದು, ಹಲವು ಸೆಲೆಬ್ರಿಟಿಗಳು ಹಬ್ಬದ ಆಚರಣೆಯ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಕೆಲ ಚಿತ್ರಗಳು ಇಲ್ಲಿವೆ ನೋಡಿ...
Updated on: Mar 19, 2026 | 6:34 PM

ನಟ ಸುದೀಪ್ ಅವರು ಪತ್ನಿ ಪ್ರಿಯಾ ಅವರೊಟ್ಟಿಗೆ ಯುಗಾದಿ ಹಬ್ಬದ ಪ್ರಯುಕ್ತ ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಸುದೀಪ್ ಅವರು ದೇವಾಲಯಕ್ಕೆ ಭೇಟಿ ನೀಡಿದ್ದ ಚಿತ್ರ ಇಲ್ಲಿದೆ.

ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ಮಕ್ಕಳ ಜೊತೆಗೆ ಯುಗಾದಿ ಹಬ್ಬ ಆಚರಣೆ ಮಾಡಿದ್ದಾರೆ. ಮಕ್ಕಳೊಂದಿಗೆ ದೇವಾಲಯಕ್ಕೆ ತೆರಳಿದ್ದು, ಚಿತ್ರಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ.

ನಟ ಶ್ರೀಮುರಳಿ ಅವರು ಕುಟುಂಬದೊಟ್ಟಿಗೆ ಯುಗಾದಿ ಆಚರಿಸಿದ್ದಾರೆ. ಮನೆಯಲ್ಲಿ ಯುಗಾದಿ ವಿಶೇಷವಾದ ಹೋಳಿಕೆ ಮಾಡಲು ನೆರವಾಗಿದ್ದಾರೆ. ಹಬ್ಬದ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ನಟಿ ಖುಷಿ ಸಹ ಸಂಪ್ರದಾಯಬದ್ಧವಾಗಿ ಯುಗಾದಿ ಹಬ್ಬ ಆಚರಣೆ ಮಾಡಿದ್ದಾರೆ. ತಲೆಗೆ ಎಣ್ಣೆ ಹಚ್ಚಿಕೊಳ್ಳುವ ಮೂಲಕ ಅವರ ಯುಗಾದಿ ಆರಂಭಿಸಿ, ತಳಿರು ತೋರಣ ಕಟ್ಟಿ, ಹೋಳಿಗೆ, ಚಿತ್ರಾನ್ನ ಮಾಡಿ, ಬೇವು ಬೆಲ್ಲ ತಿಂದು ಹಬ್ಬ ಮಾಡಿದ್ದಾರೆ.

ನಟಿ ಅಮೂಲ್ಯ ಸಹ ಕುಟುಂಬದ ಜೊತೆಗೆ ಯುಗಾದಿ ಆಚರಿಸಿದ್ದಾರೆ. ವಿಶೇಷವೆಂದರೆ ಯುಗಾದಿ ಹಬ್ಬಕ್ಕೆ ಮಾಡುವ ಮಾವಿನಕಾಯಿ ಚಿತ್ರಾನ್ನದ ರೆಸಿಪಿ ವಿಡಿಯೋವನ್ನು ಸಹ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ನಟಿ ಸಂಗೀತಾ ಭಟ್ ಅವರು ಕುಟುಂಬದೊಟ್ಟಿಗೆ ಯುಗಾದಿ ಹಬ್ಬ ಆಚರಣೆ ಮಾಡಿದ್ದಾರೆ. ದೇವರ ಪೂಜೆ ಮಾಡಿ, ಬೇವು-ಬೆಲ್ಲ ಸವಿದಿದ್ದಾರೆ. ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.




