Updated on: May 06, 2023 | 9:42 AM
ನಟಿ ಸಾನ್ಯಾ ಐಯ್ಯರ್ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಬಾಲಿವುಡ್ನ ಖ್ಯಾತ ನಿರ್ಮಾಪಕ ಡಬು ರತ್ನಾನಿ ಬಳಿ ಫೋಟೋಶೂಟ್ ಮಾಡಿಸಿದ್ದಾರೆ. ಇತ್ತೀಚೆಗೆ ಅವರು ಒಂದಷ್ಟು ಫೋಟೋ ಹಂಚಿಕೊಂಡಿದ್ದರು. ಈಗ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಸಾನ್ಯಾ ಐಯ್ಯರ್ ಅವರು ಈ ಫೋಟೋದಲ್ಲಿ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಅವರ ಫೋಟೋಗೆ ಸಾವಿರಾರು ಮಂದಿ ಲೈಕ್ಸ್ ಒತ್ತಿದ್ದಾರೆ.
ಅನೇಕರಿಗೆ ಈ ಫೋಟೋ ಇಷ್ಟವಾಗಿದೆ. ಸಾನ್ಯಾ ಅವರ ಬೋಲ್ಡ್ ಫೋಟೋಗೆ ಒಂದಷ್ಟು ಪಾಸಿಟಿವ್ ಕಮೆಂಟ್ಗಳು ಬಂದಿವೆ.
ಆದರೆ, ಕೆಲವರು ಫೋಟೋ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ಅವರು ಈ ಬಗ್ಗೆ ಟೀಕೆ ಮಾಡಿದ್ದಾರೆ. ಸಾನ್ಯಾ ಡ್ರೆಸ್ ಸರಿ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಕರ್ನಾಟಕದ ಸಂಸ್ಕೃತಿ ನೆನಪಿಸಿದ್ದಾರೆ.
‘ಇದು ಕರ್ನಾಟಕ. ಇಲ್ಲಿನ ಸಂಸ್ಕೃತಿ ನೆನಪಿರಲಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಆಫರ್ ಸಿಗಲಿ ಎಂದು ಈ ರೀತಿ ಮಾಡಬೇಡಿ’ ಎಂದು ಕೋರಿದ್ದಾರೆ. ಸಾನ್ಯಾ ಐಯ್ಯರ್ಗೆ ಕಿರುತೆರೆಯಲ್ಲಿ ಬೇಡಿಕೆ ಇದೆ. ಅವರು ಸಿನಿಮಾ ಮಾಡಲಿ ಎಂದು ಅಭಿಮಾನಿಗಳಿಗೆ ಕೋರಿದ್ದಾರೆ.