- Kannada News Photo gallery Shakti Scheme Grandmother enter the bus after saluting in Dharwad photo goes viral
ಧಾರವಾಡ: ಉಚಿತ ಪ್ರಯಾಣ, ತಲೆ ಬಾಗಿ ನಮಸ್ಕರಿಸಿ ಬಸ್ ಏರಿದ ಅಜ್ಜಿ
ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಶಕ್ತಿ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ಇದೇ ಖುಷಿಗೆ ಧಾರವಾಡದಲ್ಲಿ ವೃದ್ಧೆಯೊಬ್ಬರು ನಮಸ್ಕರಿಸಿ ಬಸ್ ಹತ್ತಿದ ವಿಡಿಯೋ ವೈರಲ್ ಆಗುತ್ತಿದೆ.
Updated on: Jun 11, 2023 | 9:32 PM

ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಶಕ್ತಿ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದು, ಮಹಿಳಾಮಣಿಗಳು ಸಖತ್ ಖುಷಿಯಾಗಿದ್ದಾರೆ.

ಇತ್ತ ಧಾರವಾಡದಲ್ಲಿ ವೃದ್ಧೆಯೊಬ್ಬರು ಉಚಿತವಾಗಿ ಬಸ್ನಲ್ಲಿ ಓಡಾಡಲು ಅವಕಾಶ ಸಿಕ್ಕ ಹಿನ್ನೆಲೆ ಸಖತ್ ಖುಷಿಯಾಗಿ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ಬಸ್ ಏರಿದ್ದಾರೆ.

ಸದ್ಯ ಅಜ್ಜಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಿಂಗವ್ವ ಸಿಂಗಾಡಿ ಅವರು ಸವದತ್ತಿಯಲ್ಲಿ ಮೊಮ್ಮಗನ ಮನೆ ಗೃಹ ಪ್ರವೇಶ ಇರುವ ಹಿನ್ನೆಲೆ ಸಂಗೊಳ್ಳಿಯಿಂದ ಧಾರವಾಡಕ್ಕೆ ಬಂದು ಸವದತ್ತಿ ಕಡೆಗೆ ಪ್ರಯಾಣ ಮಾಡಿದ್ದಾರೆ.

ಧಾರವಾಡಕ್ಕೆ ಬಂದಾಗ ಉದ್ಘಾಟನೆಗಾಗಿ ಶೃಂಗಾರಗೊಂಡಿದ್ದ ಬಸ್ನ ಮೆಟ್ಟಿಲುಗಳಿಗೆ ನಮಸ್ಕರಿಸಿ ಬಸ್ ಏರಿ ಕುಳಿತಿದ್ದಾರೆ. ಬಸ್ ಬಿಡುವಾಗ ಉಧೋ ಉಧೋ ಎಂದು ಜಯಘೋಷ ಮೊಳಗಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.



