- Kannada News Photo gallery Shefali Jeriwala Puneeth Rajkumar And Siddharth Shukla died by heart Attack
ಎಂಥಾ ಕಾಕತಾಳೀಯ; ಶೆಫಾಲಿ ಮಾತ್ರವಲ್ಲ, ಇವರ ಜೊತೆ ಕೆಲಸ ಮಾಡಿದ್ದ ಇನ್ನಿಬ್ಬರಿಗೂ ಹಾರ್ಟ್ ಅಟ್ಯಾಕ್
ನಟಿ ಶೆಫಾಲಿ ಜರಿವಾಲಾ ಅವರು ನಿಧನ ಹೊಂದಿದ್ದಾರೆ. ಅವರಿಗೆ ಹೃದಯಾಘಾತ ಆಗಿತ್ತು. ಅವರ ಸಾವು ಅನೇಕರಿಗೆ ಶಾಕಿಂಗ್ ಎನಿಸಿದೆ. ಅವರು ಈ ರೀತಿ ನಿಧನ ಹೊಂದುತ್ತಾರೆ ಎಂದು ಯರೂ ಊಹಿಸಿರಲಿಲ್ಲ. ಅವರು ಜೊತೆ ಕೆಲಸ ಮಾಡಿದ್ದ ಮತ್ತಿಬ್ಬರೂ ಹೃದಯಾಘಾತದಿಂದಲೇ ಮೃತಪಟ್ಟಿದ್ದರು ಅನ್ನೋದು ಕಾಕತಾಳೀಯ.
Updated on: Jun 28, 2025 | 9:06 AM

ನಟಿ ಶೆಫಾಲಿ ಅವರು ಕೇವಲ 42ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರ ಸಾವು ಸಾಕಷ್ಟು ಶಾಕಿಂಗ್ ಎನಿಸಿದೆ. ಅವರು ಕೊನೆಯುಸಿರು ಎಳೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರ ಸಾವು ಅನೇಕರಿಗೆ ದುಃಖ ತಂದಿದೆ.

ಶೆಫಾಲಿ ಅವರಿಗೆ ಜೂನ್ 27ರಂದು ಹೃದಯಾಘಾತ ಆಗಿದೆ. ಮೊದಲು ಅಸ್ವಸ್ಥರಾದ ಅವರಿಗೆ ನಂತರ ಹಾರ್ಟ್ ಅಟ್ಯಾಕ್ ಆಯಿತು. ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಜೊತೆ ಕೆಲಸ ಮಾಡಿದ್ದ ಕೆಲವರು ಹೃದಯಾಘಾತದಿಂದಲೇ ನಿಧನ ಹೊಂದಿದ್ದರು.

ಪುನೀತ್ ರಾಜ್ಕುಮಾರ್ ನಟನೆಯ ‘ಹುಡುಗರು’ ಸಿನಿಮಾದಲ್ಲಿ ಶೆಫಾಲಿ ಅವರು ‘ಪಂಕಜ..’ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ಈ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದರು. ಕಾಕತಾಳೀಯ ಎಂಬಂತೆ ಪುನೀತ್ ಅವರು 2021ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.

ಇನ್ನು, ಶೆಫಾಲಿ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 13’ರಲ್ಲಿ ಸ್ಪರ್ಧಿಸಿದ್ದರು. ಇದರ ವಿನ್ನರ್ ಸಿದ್ದಾರ್ಥ್ ಶುಕ್ಲಾ ಕೂಡ ಹಾರ್ಟ್ ಅಟ್ಯಾಕ್ನಿಂದ ಕೊನೆಯುಸಿರು ಎಳೆದಿದ್ದರು. ಈಗ ನಟಿ ಕೂಡ ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದು ಶಾಕಿಂಗ್ ಎನಿಸಿದೆ.

ಶೆಫಾಲಿ ಅವರು ‘ಕಾಂಟಾ ಲಗಾ..’ ಹಾಡಿನ ಮೂಲಕ ಸೂಪರ್ ಹಿಟ್ ಆದರು. ಆಗಿನ ಕಾಲಕ್ಕೆ ಈ ಹಾಡು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಈ ಹಾಡು ಈಗಲೂ ಅನೇಕರ ಫೇವರಿಟ್ ಆಗಿದೆ. ಈ ಹಾಡು ಯೂಟ್ಯೂಬ್ನಲ್ಲಿ 100 ಮಿಲಿಯನ್ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ.














