AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಗುಂಡಿ ಮುಚ್ಚಲು ಹೈಟೆಕ್ ತಂತ್ರಜ್ಞಾನ, ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಆವಿಷ್ಕಾರ

ಶಿವಮೊಗ್ಗದ ಜೆ.ಎನ್.ಎನ್.ಸಿ.ಇ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ರಸ್ತೆ ಗುಂಡಿಗಳಿಗೆ ಕಡಿಮೆ ವೆಚ್ಚದ, ಪರಿಣಾಮಕಾರಿ ಪರಿಹಾರವಾದ "ಕೋಲ್ಡ್ ಪಾಟ್ ಹೋಲ್ ಮಿಕ್ಸ್" ಅನ್ನು ಅಭಿವೃದ್ಧಿಪಡಿಸಿದ್ದಾರೆ. ಮಳೆಗಾಲದಲ್ಲಿಯೂ ಬಳಸಬಹುದಾದ ಈ ಮಿಶ್ರಣವು ರೋಡ್ ರೋಲರ್ ಅಗತ್ಯವಿಲ್ಲದೆ, ಸುಲಭವಾಗಿ ಮತ್ತು ತ್ವರಿತವಾಗಿ ಗುಂಡಿಗಳನ್ನು ದುರಸ್ತಿ ಮಾಡಲು ಸಹಾಯ ಮಾಡುತ್ತದೆ. ಇದು ಸಾಂಪ್ರದಾಯಿಕ ವಿಧಾನಗಳಿಗಿಂತ ಅಗ್ಗವಾಗಿದೆ ಮತ್ತು ಹೆಚ್ಚು ಬಾಳಿಕೆ ಬರುತ್ತದೆ.

TV9 Web
| Edited By: |

Updated on:Nov 18, 2024 | 4:59 PM

Share
ರಸ್ತೆಯಲ್ಲಿ ಹೋಗುವಾಗ ಎದುರಾಗುವ ಗುಂಡಿಗಳು ವಾಹನ ಸವಾರರ ಜೀವಕ್ಕೆ ಕಂಟಕವಾಗುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಗುಂಡಿಗಳದ್ದೇ ಕಾರುಬಾರು. ಇಂತಹ ಸವಾಲುಗಳನ್ನು ಅರಿತ ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ, ಹೈಟೆಕ್ ಉತ್ಪನ್ನ ಒಂದನ್ನು ಆವಿಷ್ಕರ ಮಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

1 / 9
ಎಷ್ಟೇ ಉತ್ತಮವಾಗಿ ರಸ್ತೆ ನಿರ್ಮಿಸಿದರೂ ರಸ್ತೆಯಲ್ಲಿ ಗುಂಡಿಗಳು ಬಿಳುವುದು ಸಹಜವಾಗಿದೆ. ಈ ಗುಂಡಿಗಳಿಂದಾಗಿ ಅಪಘಾತಗಳು ಸಹ ಹೆಚ್ಚಾಗಿವೆ. ಅನೇಕ ಸಾವು-ನೋವುಗಳಾಗುತ್ತಿವೆ. ಇದನ್ನು ಮನಗಂಡ ಶಿವಮೊಗ್ಗದ ಜೆ.ಎನ್.ಎನ್.ಸಿ.ಇ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ, ನಾವೀನ್ಯತೆಯ ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಉತ್ಪನ್ನ ಒಂದನ್ನು ಆವಿಷ್ಕರಿಸಿದ್ದಾರೆ.

2 / 9
ಈ ಉತ್ಪನ್ನವು ರಸ್ತೆ ಮೇಲೆ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸಹಕಾರಿಯಾಗಲಿದೆ. ಕಡಿಮೆ ಖರ್ಚಿನಲ್ಲಿ ಇದನ್ನು ತಯಾರಿಸಲಾಗಿದೆ. ಯಾವುದೇ ಹವಮಾನ ಇದ್ದರೂ ಗುಂಡಿಗಳನ್ನು ಮುಚ್ಚಬಹುದಾಗಿದೆ. ಇದನ್ನು ಪರೀಕ್ಷಿಸಲು ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿ ಇರುವ ಗುಂಡಿಗಳಿಗೆ ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಉತ್ಪನ್ನ ಹಾಕಿ ಗುಂಡಿ ಮುಚ್ಚಲಾಯಿತು.

3 / 9
ಇದರ ವಿಶೇಷ ಏನೆಂದರೆ ಕಡಿಮೆ ಬೆಲೆ, ಜೊತೆಗೆ ಗುಂಡಿ ಬಿದ್ದ ಜಾಗದಲ್ಲಿ ಹಾಕಿಬಿಟ್ಟರೆ ಸಾಕು. ರೋಡ್ ರೊಲರ್​ಗಳನ್ನು ಬಳಸಿ ಗಟ್ಟಿ ಮಾಡುವ ಅವಶ್ಯಕತೆ ಇಲ್ಲ. ಹೀಗಾಗಿ ಇಂದು (ನ.18) ಸಂಸದ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯರಾಗಿರುವ ಬಿವೈ ರಾಘವೇಂದ್ರ ಅವರು ಗುಂಡಿ ಮುಚ್ಚುವ ಮೂಲಕ ಪ್ರಾತಿಕ್ಷತೆ ನಡೆಸಿದರು.

4 / 9
ಗುಂಡಿಗಳ ದುರಸ್ತಿಗೆ ಪರಿಹಾರವೆಂದು ಹೇಳಿಕೊಳ್ಳುವ ಅನೇಕ ಬಿಟಮಿನ್ ಕೋಲ್ಡ್ ಡಾಂಬರ್ ಪ್ಯಾಚಿಂಗ್ ವಸ್ತುಗಳು ಮಾರುಕಟ್ಟೆಯಲ್ಲಿ ವರ್ಷಗಳಿಂದ ಇವೆ. ಆದರೆ ಈ ಉತ್ಪನ್ನಗಳು ಮಳೆ ಬೀಳುವ ಪ್ರದೇಶಗಳಿಗೆ ಹೆಚ್ಚು ಪೂರಕವಾಗಿಲ್ಲ. ಜೊತೆಗೆ ಸಾಮಾಗ್ರಿಗಳ ಸಂಗ್ರಹಣೆ, ದಾಸ್ತಾನು, ರಸ್ತೆಯಲ್ಲಿನ ತೇವಾಂಶದ ಸಂಭವ ಮಿಶ್ರಣದ ಸಂದರ್ಭದಲ್ಲಿ ಅಸಮಂಜಸ ಬೆರಿಕೆ ಇತ್ಯಾದಿಗಳಿಂದ ಅನೇಕ ಸಮಸ್ಯೆಗಳಿವೆ. ಬೆಲೆಯಲ್ಲಿಯೂ ದುಬಾರಿಯಾಗಿದೆ.

5 / 9
ರಸ್ತೆಯಲ್ಲಿನ ಗುಂಡಿ ಮುಚ್ಚುವುದಕ್ಕೆ ಪ್ರಸ್ತುತ ಹಾಟ್‌ ಮಿಕ್ಸ್‌ (ಜಲ್ಲಿ ಡಾಂಬಾರು) ಬಳಸಲಾಗುತ್ತದೆ. ಆದರೆ, ಮಳೆಗಾಲದಲ್ಲಿ ಈ ಹಾಟ್‌ ಮಿಕ್ಸ್​ಗಳನ್ನು ಬಳಸಿ ಗುಂಡಿ ಮುಚ್ಚಲು ಸಾಧ್ಯವಿಲ್ಲ. ಹೆಚ್ಚು ಕಾಲ ಬಾಳಿಕೆಯು ಬರುವುದಿಲ್ಲ. ಈ ಎಲ್ಲ ಅಂಶಗಳನ್ನು ಮನಗಂಡ ಜೆ.ಎನ್.ಎನ್‌.ಸಿ.ಇ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ ಡಾಂಬರ್ ಇಲ್ಲದ ಕೋಲ್ಡ್ ಪ್ಯಾಚ್ ಮಿಶ್ರಣವನ್ನು ಆವಿಷ್ಕರಿಸಿ ಜನರಿಗೆ ಅರ್ಪಿಸಿದ್ದಾರೆ.

6 / 9
ಇದು ಸಿದ್ದಪಡಿಸಿದ ಮಿಶ್ರಣವಾಗಿದ್ದು, ಮಳೆಗಾಲ ಸೇರಿದಂತೆ ಯಾವುದೇ ಕಾಲದಲ್ಲಿಯೂ, ದಟ್ಟ ವಾಹನ ಸಂಚಾರದ ನಡುವೆಯೂ ಈ ಮಿಶ್ರಣವನ್ನು ಗುಂಡಿ ಮುಚ್ಚಲು ಉಪಯೋಗಿಸಬಹುದು. ಬೇರೆಯ ಕಂಪನಿಗಳಲ್ಲಿ ಲಭ್ಯವಿರುವ ಕೋಲ್ಡ್‌ ಮಿಕ್ಸ್‌ ಮಾದರಿಯ ಪರಿಕರಗಳು 50 ಕೆಜಿಗೆ 1700 ರೂ. ಇದೆ. ಆದರೆ, ಈ ನೂತನ ಆವಿಷ್ಕಾರಕ್ಕೆ ಕೇವಲ 800 ರೂ ಆಗಲಿದೆ.

7 / 9
ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಬಾಳಿಕೆ ಬರುವ ಈ ನೂತನ ಉತ್ಪನ್ನ ಬಳಸಿ ಗುಂಡಿ ಮುಚ್ಚಬಹುದು. ಹಾಟ್‌ ಮಿಕ್ಸ್‌ ಬಳಸಿ ಗುಂಡಿ ಮುಚ್ಚಲು ಬೇಕಾಗುವಂತೆ ಹೆಚ್ಚು ಮಾನವ ಸಂಪನ್ಮೂಲ, ಇತರೆ ಯಂತ್ರೋಪಕರಣಗಳು ಬೇಕಾಗಿಲ್ಲ ಎನ್ನುತ್ತಾರೆ ಸಂಶೊಧಕರು.

8 / 9
ಒಟ್ಟಾರೆಯಾಗಿ ರಸ್ತೆ ಗುಂಡಿಗಳನ್ನು ಮಚ್ಚಲು ಶಿವಮೊಗ್ಗ ಜೆ.ಎನ್.ಎನ್.ಸಿ.ಇ ಸಿವಿಲ್‌ ವಿಭಾಗದಿಂದ ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಆವಿಷ್ಕಾರ ಒಂದು ಹೊಸ ಹೆಜ್ಜೆ ಆಗಿದೆ. ಹೊಸ ತಂತ್ರಜ್ಞನಾ ಬಳಕೆ ಮೂಲಕ ರಸ್ತೆ ಮೇಲಿನ ಗುಂಡಿಗಳಿಗೆ ಪರಿಹಾರ ದೊರೆಯಲಿದೆ. ಹೊಸ ಆವಿಷ್ಕಾರದತ್ತ ಸರಕಾರಗಳು ಗಮನ ಹರಿಸುವ ಮೂಲಕ ದೇಶಿ ತಂತ್ರಜ್ಞಾನಕ್ಕೆ ಮಣೆ ಹಾಕಬೇಕಿದೆ.

9 / 9

Published On - 4:30 pm, Mon, 18 November 24

3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ

ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?

ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು

ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್

ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,

ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?

ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?

ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ

ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ