ಭೂಗತ ಲೋಕದ ಕಥೆಯಲ್ಲಿ ಶಿವರಾಜ್​​ಕುಮಾರ್; ‘ಓಂ’ ರೀತಿಯಲ್ಲಿ ಹೊಸ ಸಿನಿಮಾ

ಭೂಗತ ಲೋಕದ ಕಥೆಯಲ್ಲಿ ನಟಿಸಲು ಶಿವರಾಜ್​​ಕುಮಾರ್ ರೆಡಿ ಆಗಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್ ಆಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ರಕ್ತಸಿಕ್ತ ಕಥೆಯೊಂದನ್ನು ಇಟ್ಟುಕೊಂಡು ಹೊಸ ಸಿನಿಮಾದ ಕಥೆ ಸಿದ್ಧಗೊಂಡಿದೆ.

Jan 24, 2022 | 5:49 PM
TV9kannada Web Team

| Edited By: Rajesh Duggumane

Jan 24, 2022 | 5:49 PM

ಭೂಗತ ಲೋಕದ ಕಥೆ ಇಟ್ಟುಕೊಂಡು ಮಾಡಲಾದ ಓಂ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ನಿರ್ದೇಶಕ ಉಪೇಂದ್ರ ಅವರ ಡೈರೆಕ್ಷನ್​ ನೋಡಿ ಅಭಿಮಾನಿಗಳು ಉಘೇಉಘೇ ಎಂದಿದ್ದರು. ಈ ಮೂಲಕ ಓಂ ಚಿತ್ರ ಸ್ಯಾಂಡಲ್​ವುಡ್​ನಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಟಿ ಮಾಡಿತ್ತು.

1 / 6
ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದ್ದು ಮಾತ್ರವಲ್ಲದೆ, ನಂತರದ ವರ್ಷಗಳಲ್ಲಿ ಹಲವು ಬಾರಿ ಮರು ಬಿಡುಗಡೆಗೊಂಡು ಹೌಸ್‌ಫುಲ್‌ ಪ್ರದರ್ಶನ ಕಂಡಿದ್ದು ‘ಓಂ’ ಚಿತ್ರದ ಹೆಚ್ಚುಗಾರಿಕೆ. ಹೊಸ ಬಗೆಯ ಚಿತ್ರಕಥೆ, ವಿಭಿನ್ನವಾದ ಮೇಕಿಂಗ್‌, ಮನ ಸೆಳೆಯುವ ಹಾಡುಗಳು, ಕಲಾವಿದರ ಅದ್ಭುತ ನಟನೆಯಿಂದಾಗಿ ಕನ್ನಡ ಮಾತ್ರವಲ್ಲದೆ ಪರಭಾಷೆ ಮಂದಿಯನ್ನೂ ಈ ಚಿತ್ರ ಆಕರ್ಷಿಸಿತ್ತು. ತೆಲುಗು, ಹಿಂದಿಗೆ ಸಿನಿಮಾ ರಿಮೇಕ್‌ ಕೂಡ ಆಯಿತು.

2 / 6
‘ಓಂ’ ಸಿನಿಮಾ ಶಿವರಾಜ್​ಕುಮಾರ್​ ಅವರ ವೃತ್ತಿ ಜೀವನದ ತೂಕವನ್ನು ಹೆಚ್ಚಿಸಿತ್ತು. ಶಿವಣ್ಣ ಅವರು ಮೊದಲ ಬಾರಿಗೆ ಮಚ್ಚು ಹಿಡಿದಿದ್ದು ಇದೇ ಸಿನಿಮಾದಲ್ಲಿ. ಈಗ ‘ಓಂ’ ಸಿನಿಮಾದ ಸತ್ಯನ ರೀತಿ ಇನ್ನೊಂದು ವಿಭಿನ್ನ ಅವತಾರದಲ್ಲಿ ಕಮಾಲ್ ಮಾಡಲು ಅವರು ರೆಡಿ ಆಗಿದ್ದಾರೆ.

3 / 6
ಭೂಗತ ಲೋಕದ ಕಥೆಯಲ್ಲಿ ನಟಿಸಲು ಶಿವರಾಜ್​​ಕುಮಾರ್ ರೆಡಿ ಆಗಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್ ಆಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ರಕ್ತಸಿಕ್ತ ಕಥೆಯೊಂದನ್ನು ಇಟ್ಟುಕೊಂಡು ಹೊಸ ಸಿನಿಮಾದ ಕಥೆ ಸಿದ್ಧಗೊಂಡಿದೆ. ಇದರಲ್ಲಿ ಶಿವಣ್ಣ ನಟಿಸಲಿದ್ದಾರೆ ಅನ್ನೋದು ವಿಶೇಷ.

4 / 6
ಫೆಬ್ರವರಿಯಲ್ಲಿ ಈ ಸಿನಿಮಾಗೆ ಮೂಹೂರ್ತ ಮಾಡಲು ಚಿತ್ರತಂಡ ನಿರ್ಧರಿಸಿದೆ. ಆ ಬಳಿಕ ಸಿನಿಮಾಗೆ ಶೂಟಿಂಗ್​ ನಡೆಯಲಿದೆ. ಶಿವಣ್ಣನ ಬತ್ತಳಿಕೆಯಲ್ಲಿ ಹಲವು ಸಿನಿಮಾಗಳಿವೆ. ಹೊಸ ಚಿತ್ರದ ಕಥೆ ಕೇಳಿ ಅದನ್ನು ಮೆಚ್ಚಿ, ಚಿತ್ರದಲ್ಲಿ ನಟಿಸೋಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.  

5 / 6
‘ಬುದ್ಧಿವಂತ 2’ ಸಿನಿಮಾ‌ ನಿರ್ದೇಶನ ಮಾಡಿದ್ದ ಜಯರಾಮ್ ಭದ್ರಾವತಿ ಅವರು ಹೊಸ ಚಿತ್ರಕ್ಕೆ ಆ್ಯಕ್ಷನ್​ಕಟ್ ಹೇಳಲಿದ್ದಾರೆ. ಕೇಶವ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.  

6 / 6

Follow us on

Most Read Stories

Click on your DTH Provider to Add TV9 Kannada