- Kannada News Photo gallery Shivarajkumar Look So Energetic After Surgery New Photos goes viral Cinema News in Kannada
Shivarajkumar: ಪವರ್ಫುಲ್ ಲುಕ್ನಲ್ಲಿ ಶಿವಣ್ಣ; ಇವರ ಎನರ್ಜಿಗೆ ಇವರೇ ಸಾಟಿ
ಶಿವರಾಜ್ಕುಮಾರ್ ಅವರು ಡಿಸೆಂಬರ್ 18ರಂದು ಅಮೆರಿಕಕ್ಕೆ ತೆರಳಿದರು. ಡಿಸೆಂಬರ್ 24ರಂದು ಅಮೆರಿಕದ ಫ್ಲೋರಿಡಾದಲ್ಲಿ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ. ನಾಲ್ಕೈದು ಗಂಟೆಗಳ ಕಾಲ ಸರ್ಜರಿ ನಡೆದಿತ್ತು. ಈಗ ಶಿವಣ್ಣ ಅಮೆರಿಕದಲ್ಲಿ ಕುಟುಂಬದ ಜೊತೆ ನಿಂತಿರುವ ಫೋಟೋ ವೈರಲ್ ಆಗಿದೆ .
Updated on:Jan 11, 2025 | 1:11 PM

ಶಿವರಾಜ್ಕುಮಾರ್ ಅವರು ಇತ್ತೀಚೆಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರು ಮೂತ್ರಕೋಶದ ಕ್ಯಾನ್ಸರ್ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈಗ ಶಿವರಾಜ್ಕುಮಾರ್ ಅವರ ಎನರ್ಜಿ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಶಿವರಾಜ್ಕುಮಾರ್ ಅವರ ಹೊಸ ಫೋಟೋಗಳು ವೈರಲ್ ಆಗಿವೆ. ಮಿಯಾಮಿಯಲ್ಲಿ ಅವರು ಸುತ್ತಾಟ ನಡೆಸುತ್ತಿದ್ದಾರೆ. ಮುಂದಿನ ಕೆಲ ದಿನಗಳನ್ನು ಅವರು ಅಲ್ಲಿಯೇ ಕಳೆಯಲಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಅವರು ಮರಳಲಿದ್ದಾರೆ.

ಶಿವರಾಜ್ಕುಮಾರ್ ಹಾಗೂ ಗೀತಾ ಅವರು ಅಮೆರಿಕಕ್ಕೆ ತೆರಳುವುದಕ್ಕೂ ಮೊದಲು ತಿರುಪತಿಗೆ ತೆರಳಿದ್ದರು. ಅಲ್ಲಿ ಅವರು ಕುಟುಂಬದ ಜೊತೆ ತೆರಳಿ ಮುಡಿಕೊಟ್ಟಿದ್ದರು. ಈಗ ಶಿವರಾಜ್ಕುಮಾರ್ ಅವರ ತಲೆಯಲ್ಲಿ ಕೂದಲು ಹುಟ್ಟುತ್ತಿದೆ.

ಶಿವರಾಜ್ಕುಮಾರ್ ಕಳೆದ ವರ್ಷ ಡಿಸೆಂಬರ್ 18ರಂದು ಅಮೆರಿಕಕ್ಕೆ ತೆರಳಿದರು. ಡಿಸೆಂಬರ್ 24ರಂದು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗದರು. ಆ ಬಳಿಕ ಅವರು ಕೆಲವು ದಿನ ಆಸ್ಪತ್ರೆಯಲ್ಲೇ ಇದ್ದು ಚೇತರಿಕೆ ಕಂಡಿದ್ದಾರೆ.

ಸದ್ಯ ಶಿವರಾಜ್ಕುಮಾರ್ ಅವರು ಅಮೆರಿಕದಲ್ಲೇ ಇದ್ದಾರೆ. ಜನವರಿ 24ರವರೆಗೆ ಅಲ್ಲಿಯೇ ಇರಲಿದ್ದಾರೆ. ಈಗ ಅವರು ಚೇತರಿಕೆ ಕಾಣುತ್ತಿದ್ದು, ಆಸ್ಪತ್ರೆಯ ಸುತ್ತಮುತ್ತ ಇರುವ ಪ್ರದೇಶಗಳನ್ನು ಅವರು ವೀಕ್ಷಿಸುತ್ತಾ ಇದ್ದಾರೆ. ಸಮುದ್ರ ತೀರದಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ.

ಶಿವರಾಜ್ಕುಮಾರ್ ಅವರ ಲುಕ್ ಗಮನ ಸೆಳೆದಿದೆ. ಅವರು ಮೊದಲಿನ ಎನರ್ಜಿಯನ್ನು ಮತ್ತೆ ತಂದುಕೊಂಡಂತೆ ಕಾಣುತ್ತಿದೆ. ಅವರು ಭಾರತಕ್ಕೆ ಮರಳಿದ ಬಳಿಕ ಮತ್ತೆ ಫಿಸಿಕಲ್ ಆ್ಯಕ್ಟಿವಿ ಮಾಡಲಿದ್ದು ಮತ್ತಷ್ಟು ಎನರ್ಜಿ ತಂದುಕೊಳ್ಳಲಿದ್ದಾರೆ.
Published On - 1:10 pm, Sat, 11 January 25




